Friday, 20th December 2024

BBK 11: ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಮುಟ್ಟಿ ನೋಡುವಂತಹ ಉತ್ತರ ಕೊಟ್ಟ ಗೋಲ್ಡ್ ಸುರೇಶ್

Gold Suresh

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಕಳೆದ ಭಾನುವಾರ ಗೋಲ್ಡ್ ಸುರೇಶ್ ದೊಡ್ಮನೆ ತೊರೆದರು. ವೈಯಕ್ತಿಕ ಕಾರಣಗಳಿಂದ ಸುರೇಶ್ ಅವರು ಬಿಗ್ ಬಾಸ್ ಅನ್ನು ಅರ್ಧಕ್ಕೆ ಕೈಬಿಟ್ಟು ಹೊರಬಂದರು. ಗೋಲ್ಡ್ ಸುರೇಶ್​ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ಅವರ ಅವಶ್ಯಕತೆ ಬಿಗ್ ಬಾಸ್​ ಮನೆಯಿಂದ ಅವರ ಕುಟುಂಬದವರಿಗೆ ಜಾಸ್ತಿ ಇದೆ. ಹೆಚ್ಚು ತಡ ಮಾಡದೇ ವಸ್ತುಗಳನ್ನು ಪ್ಯಾಕ್​ ಮಾಡಿಕೊಂಡು ಕೂಡಲೇ ಬಿಗ್ ಬಾಸ್​ ಮನೆಯಿಂದ ಹೊರಗೆ ಬನ್ನಿ ಎಂದು ಬಿಗ್‌ ಬಾಸ್‌ ಸುರೇಶ್​ಗೆ ಸೂಚನೆ ನೀಡಿದ ಕಾರಣ ಅವರು ಅರ್ಧಕ್ಕೆ ತಮ್ಮ ಪ್ರಯಾಣವನ್ನು ಕೊನೆಗೊಳಿಸಬೇಕಾಯಿತು.

ಬಿಗ್ ಬಾಸ್​ನಿಂದ ಹೊರಬಂದು ಮೂರು ದಿನವಾದರೂ ಇವರು ಯಾರ ಕೈಗೂ ಸಿಕ್ಕಿರಲಿಲ್ಲ. ದೊಡ್ಮನೆಯಿಂದ ದಿಢೀರ್ ಹೊರಬರಲು ಏನು ಕಾರಣ ಎಂಬುದು ನಿಗೂಢವಾಗಿಯೇ ಉಳಿದಿತ್ತು. ಆದರೀಗ ಸ್ವತಃ ಸುರೇಶ್ ಅವರು ಮಾಧ್ಯಮದ ಎದುರು ಬಂದು ಎಲ್ಲ ವಿಚಾರವನ್ನು ಬಹುರಂಗಪಡಿಸಿದ್ದಾರೆ. ಮುಖ್ಯವಾಗಿ ತಾನು ಹೊರಬರಲು ಏನು ಕಾರಣ ಎಂಬ ಸತ್ಯವನ್ನು ತಿಳಿಸಿದ್ದಾರೆ.

ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್​ನಿಂದ ಹೊರಬಂದ ತಕ್ಷಣ ಇವರ ತಂದೆ ನಿಧನರಾಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಮತ್ತೊಂದೆಡೆ ಇವರು ಬ್ಯುಸಿನೆಸ್​ನಲ್ಲಿ ಕೋಟಿ ಕೋಟಿ ಸಾಲ ಮಾಡಿಕೊಂಡಿದ್ದಾರೆ. ಹೀಗಾಗಿ ಬಿಗ್ ಬಾಸ್ ತೊರೆದು ಬಂದಿದ್ದಾರೆ ಎಂಬ ವಿಚಾರ ವೈರಲ್ ಆಗಿತ್ತು. ಆದರೆ, ಸುರೇಶ್ ಅವರು ಇದೆಲ್ಲ ಸುಳ್ಳು ಎಂದು ಹೇಳಿದ್ದಾರೆ. ಅಲ್ಲದೆ ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಮುಟ್ಟಿ ನೋಡುವಂತಹ ಉತ್ತರ ಕೊಟ್ಟಿದ್ದಾರೆ.

ಖಾಸಗಿ ಚಾನೆಲ್ ಒಂದರಲ್ಲಿ ಮಾತನಾಡುತ್ತಾ, ಬಿಗ್ ​ಬಾಸ್​ ಮನೆಯಿಂದ ಆಚೆ ಬಂದಿರೋ ಬಗ್ಗೆ ಸುಳ್ಳು ಸುದ್ದಿಗಳನ್ನ ಹಬ್ಬಿಸುತ್ತಿರುವವರ ಬಗ್ಗೆ ಪ್ರತಿಕ್ರಿಯಿಸಿ.. ಹಾಗೆಲ್ಲ ಮಾಡುತ್ತಿರೋರು ಕೂಡ ನನ್ನ ಸ್ನೇಹಿತರೇ ಎಂದು ಭಾವಿಸುತ್ತೇನೆ. ನನ್ನ ಸ್ನೇಹಿತರಿಗೆ ಒಳ್ಳೆಯದಾಗಲಿ. ನನ್ನ ಜೊತೆಗೆ ಇರೋರೇ ಹಾಗೆ ಮಾಡಿರಬಹುದು. ಯಾರು ಮಾಡಿದ್ದಾರೋ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

ಇನ್ನು ತಾನು ಬಿಗ್ ಬಾಸ್​ನಿಂದ ಹೊರಬರಲು ಏನು ಕಾರಣ ಎಂಬುದನ್ನು ಬಹಿರಂಗ ಪಡಿಸಿದ್ದಾರೆ. ನನಗೆ ನನ್ನದೆಯಾದ ಅನೇಕ ಬ್ಯುಸಿನೆಸ್‌‌​ ಇವೆ. ನನ್ನನ್ನು ನಂಬಿ ಹಲವು ಕುಟುಂಬಗಳು ಇವೆ. ಬಿಗ್ ​ಬಾಸ್​​ಗೆ ಹೋದರೆ ಬ್ಯುಸಿನೆಸ್‌‌​ ಯಾರು ನೋಡಿಕೊಳ್ತಾರೆ ಎಂದು ಚಿಂತಿಸಿದ್ದೆ. ತುಂಬಾ ಯೋಚಿಸಿದ ನಂತರ ಮೊದಲ ಬಾರಿಗೆ ನನ್ನ ಧರ್ಮ ಪತ್ನಿಗೆ ಆ ಜವಾಬ್ದಾರಿ ನೀಡಿದ್ದೆ. ಅವರಿಗೆ ಬ್ಯುಸಿನೆಸ್‌‌ನ ಹ್ಯಾಂಡಲ್‌ ಮಾಡೋಕೆ ಆಗಿಲ್ಲ. ವರ್ಕ್‌‌ ಪ್ರೆಷರ್‌ ಅವರಿಗೆ ಜಾಸ್ತಿ ಆಯ್ತು. ಬ್ಯುಸಿನೆಸ್‌‌​​ನಲ್ಲಿ ಆಕೆಗೆ ಯಾವುದೇ ಅನುಭವ ಇರಲಿಲ್ಲ. ಹೀಗಾಗಿ ನನ್ನ ಪತ್ನಿಗೆ ನಾನು ಹೊರಗಡೆ ಬಂದು ಆ ಗೊಂದಲಗಳಿಗೆ ಸಪೋರ್ಟ್‌ ಮಾಡಬೇಕಿತ್ತು. ಈಗ ಯಾವುದೇ ತೊಂದರೆಗಳಿಲ್ಲ. ಬ್ಯುಸಿನೆಸ್‌‌ ಕಂಟ್ರೋಲ್‌ ಬಂದಿದೆ ಎಂದು ಹೇಳಿದ್ದಾರೆ.

BBK 11: ಮಾತಿನ ಸ್ಫೋಟ: ತ್ರಿವಿಕ್ರಮ್ ಮೇಲೆ ಡಿಪೆಂಡ್ ಆಗ್ತೀರಾ ಎಂದಿದ್ದಕ್ಕೆ ಕೆರಳಿ ಕೆಂಡವಾದ ಭವ್ಯಾ