Friday, 20th December 2024

Bhagya Lakshmi Serial: ಜೈಲಿಗೆ ಕಳುಹಿಸದಂತೆ ಭಾಗ್ಯಾ ಬಳಿ ಕಾಡಿ ಬೇಡಿದ ತಾಂಡವ್: ರೋಚಕ ಘಟ್ಟದತ್ತ ಭಾಗ್ಯಲಕ್ಷ್ಮೀ ಧಾರಾವಾಹಿ

Bhagya Lakshmi serial (1)

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ (Bhagya Lakshmi Serial) ರೋಚಕ ಘಟ್ಟದತ್ತ ತಲುಪುತ್ತಿದೆ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದರೂ, ತನಗೊದಗಿದ ಪರಿಸ್ಥಿತಿಯನ್ನು ಎದುರಿಸುತ್ತಾ ಕೆಚ್ಚು, ಮಹತ್ವಾಕಾಂಕ್ಷೆಗಳ ಹಾದಿ ತುಳಿದ ಭಾಗ್ಯಳ ಪಯಣ ವೀಕ್ಷಕರ ಮನಸನ್ನು ಇನ್ನಿಲ್ಲದಂತೆ ತಟ್ಟಿದೆ. ಎದುರಾದ ಸವಾಲುಗಳನ್ನೆಲ್ಲಾ ನಿಭಾಯಿಸುತ್ತಾ, ಎಲ್ಲ ನಿರೀಕ್ಷೆಗಳು ಹುಸಿಯಾಗುವಂತೆ ಬೆಳೆಯುತ್ತಿರುವ ಭಾಗ್ಯಾಳ ಕತೆ ನಾಡಿನ ಹೆಣ್ಣು ಮಕ್ಕಳಿಗೆ ಹೊಸ ಹುರುಪು ತುಂಬುತ್ತಿದೆ.

ಸದ್ಯ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಭಾಗ್ಯಾಳ ಹೊಸ ಅಧ್ಯಾಯ ಶುರುವಾಗಿದೆ. ತಾಂಡವ್​ಗೆ ಡಿವೋರ್ಸ್‌ ಕೊಟ್ಟು ತಾನು ಅನುಭವಿಸಿದ ಕಷ್ಟವನ್ನು ರಿಟರ್ನ್ ಕೊಡಲು ಭಾಗ್ಯಾ ಮುಂದಾಗಿದ್ದಾಳೆ. ಹಿಂದಿನ ಸಂಚಿಕೆಯಲ್ಲಿ ಶ್ರೇಷ್ಠಾ ಜೊತೆ ತಾಂಡವ್ ಮದುವೆಯಾಗಲು ತಯಾರಾಗಿದ್ದನ್ನು. ಇನ್ನೇನು ತಾಳಿ ಕಟ್ಟ ಬೇಕು ಎಂಬಷ್ಟರಲ್ಲಿ ಅಲ್ಲಿಗೆ ಭಾಗ್ಯಾ ಪೊಲೀಸರ ಜೊತೆ ಬರುತ್ತಾಳೆ. ಡಿವೋರ್ಸ್ ಕೊಟ್ಟು ನನ್ನ ದಾರಿ ನನಗೆ ನಿನ್ನ ದಾರಿ ನಿನಗೆ ಅಂತ ಹೇಳಿದಮೇಲೂ ಇಲ್ಲಿ ಯಾಕೆ ಬಂದು ವಕ್ರುಸಿದ್ದೀಯಾ ಎಂದು ತಾಂಡವ್ ಭಾಗ್ಯಾ ಬಳಿ ಕೇಳುತ್ತಾನೆ.

ಇದಕ್ಕೆ ನಗುತ್ತಾ ಉತ್ತರ ಕೊಟ್ಟ ಭಾಗ್ಯ, ಕೋರ್ಟ್ ನಮ್ಮಿಬ್ಬರನ್ನೂ ಸಪರೇಟ್ ಮಾಡುವವರೆಗೂ ನಾನು ನೀನು ಗಂಡ-ಹೆಂಡ್ತೀನೆ. ಒಬ್ಬ ಹೆಂಡ್ತಿ ಇರುವಾಗ್ಲೇ ಇನ್ನೊಬ್ಬಳನ್ನ ಮದುವೆ ಆಗೋದು ಕಾನೂನಿನ ಪ್ರಕಾರ ತಪ್ಪು ಎಂದು ಹೇಳಿ ತಾಂಡವ್-ಶ್ರೇಷ್ಠಾಳ ಮದುವೆಗೆ ಬ್ರೇಕ್ ಹಾಕಿದ್ದಾಳೆ. 18 ವರ್ಷ ನಿಮ್ಮ ಜೊತೆ ಸಂಸಾರ ಮಾಡಿ ನೀವು ಕೊಟ್ಟ ತೊಂದ್ರೆ ಎಲ್ಲ ಸಹಿಸ್ಕೊಂಡು ನನಗೂ ಸಾಕಾಗಿದೆ. ಈಗ ಎಲ್ಲವನ್ನೂ ವಾಪಾಸ್ ಕೊಡುವ ಟೈಮ್ ಬಂದಿದೆ. ನೀವು ಶ್ರೇಷ್ಠಾಳನ್ನು ಮದುವೆ ಆಗೋ ಕನಸು ಯಾವತ್ತೂ ನಡಿಬಾರದು ಎಂದು ತಾಂಡವ್ ಮುಂದೆ ಭಾಗ್ಯಾ ಅಬ್ಬರಿಸಿದ್ದಾಳೆ.

ಆಗ ತಾಂಡವ್‌ ಕೋಪದಿಂದ ಭಾಗ್ಯಾ ಮೇಲೆ ಹಲ್ಲೆ ಮಾಡುತ್ತಾನೆ, ನನ್ನ ಶ್ರೇಷ್ಠಾ ಮದುವೆಯನ್ನು ಯಾರು ತಡೆಯುತ್ತಾರೋ ನೋಡುತ್ತೇನೆ ಎಂದು ಅರಚುತ್ತಾನೆ. ಅಷ್ಟರಲ್ಲಿ ಇನ್ಸ್‌ಪೆಕ್ಟರ್‌ ಅಲ್ಲಿಗೆ ಬರುತ್ತಾರೆ, ನಾನು ನಿಮ್ಮ ಮದುವೆ ತಡೆಯುತ್ತೇನೆ, ಹೆಂಡತಿ ಮೇಲೆ ಕೈ ಮಾಡಲು ನಿನಗೆ ಎಷ್ಟು ಧೈರ್ಯವಿರಬೇಕು. ಭಾಗ್ಯಾ, ಎರಡನೆ ಮದುವೆ ಆಗುತ್ತಿರುವುದಲ್ಲದೆ, ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಕಂಪ್ಲೇಂಟ್‌ ಕೊಡು, ಇವನನ್ನು ನಾನು ವಿಚಾರಿಸಿಕೊಳ್ಳುತ್ತೇನೆ ಎಂದು ಇನ್ಸ್‌ಪೆಕ್ಟರ್‌ ಹೇಳುತ್ತಾರೆ.

ಪೊಲೀಸರು ತಾಂಡವ್‌ನನ್ನು ಹಿಡಿದು ಹೊರಗೆ ಕರೆದೊಯ್ಯಲು ಪ್ರಯತ್ನಿಸುತ್ತಾರೆ. ಆಗ ತಾಂಡವ್‌ಗೆ ಮರ್ಯಾದೆ ಪ್ರಶ್ನೆ ಎದುರಾಗುತ್ತದೆ. ಒಂದು ವೇಳೆ ನಾನು ಜೈಲಿಗೆ ಹೋದರೆ ನನ್ನ ಕೆಲಸ ಹೋಗುತ್ತದೆ, ಮಾನ ಮರ್ಯಾದೆ ಹೋಗುತ್ತದೆ. ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕು ಎಂದು, ಭಾಗ್ಯಾ ದಯವಿಟ್ಟು ಕಂಪ್ಲೇಂಟ್‌ ವಾಪಸ್‌ ತೆಗೆದುಕೋ, ನಿಮ್ಮ ಅಮ್ಮ ಅರೆಸ್ಟ್‌ ಆದಾಗ ನೀನು ಕೇಳಿದ ಕೂಡಲೇ ನಾನು ಒಪ್ಪಿಕೊಂಡೆ, ಈಗ ದೂರು ವಾಪಸ್‌ ತಗೋ ಎಂದು ಕಾಡಿ-ಬೇಡುತ್ತಾನೆ. ತಾಂಡವ್ ಬೇಡುವುದನ್ನು ಕಂಡು ಕೋಪಗೊಂಡ ಶ್ರೇಷ್ಠಾ, ಹೇ.. ತಾಂಡವ್ ನಿನ್ಗೆ ನಾಚಿಕೆ ಆಗಲ್ವಾ, ಹೋಗಿ ಹೋಗಿ ಅವಳತ್ರ ಬೇಡ್ತಾ ಇದ್ದಿ ಅಲ್ವಾ ಎನ್ನುತ್ತಾಳೆ. ಆಗ ತಾಂಡವ್, ನನಗೆ ಜೈಲಿಗೆ ಹೋಗೋಕೆ ಇಷ್ಟ ಇಲ್ಲ ಅದ್ಕೆ ರಿಕ್ವೆಸ್ಟ್ ಮಾಡ್ತಾ ಇದ್ದೀನಿ, ನಿನ್ಗೆ ಜೈಲಿಗೆ ಹೋಗ್ಲಿಕೆ ಇಷ್ಟ ಒದ್ರೆ ಹೋಗಿ ಎನ್ನುತ್ತಾನೆ.

ಆಗ ಪೂಜಾ ಮಧ್ಯ ಪ್ರವೇಶಿಸಿ, ನೀವು ಅಕ್ಕ ಮನವಿ ಮಾಡಿದ ಕೂಡಲೇ ಕಂಪ್ಲೇಂಟ್‌ ವಾಪಸ್‌ ಪಡೆದ್ರಾ, ಅದೇನೋ ಕಂಡಿಷನ್‌ ಮಾಡಿದಂತೆ ಇತ್ತು ಎಂದು ಹೇಳುತ್ತಾಳೆ. ಅಷ್ಟರಲ್ಲಿ ಭಾಗ್ಯಾ ತಾಂಡವ್‌ ಎದುರಿಗಿದ್ದ ಸೋಫಾ ಮೇಲೆ ಬಂದು ಕಾಲಿನ ಮೇಲೆ ಕಾಲು ಹಾಕಿ ಗತ್ತಿನಿಂದ ಕೂರುತ್ತಾಳೆ. ನಾನು ದೂರು ವಾಪಸ್‌ ಪಡೆಯುತ್ತೇನೆ, ಆದರೆ ಕೆಲವು ಕಂಡಿಷನ್‌ಗಳಿವೆ, ಅದಕ್ಕೆ ಒಪ್ಪಿದರೆ ಮಾತ್ರ ನೀವು ಹೇಳಿದಂತೆ ಕೇಳುತ್ತೇನೆ ಎನ್ನುತ್ತಾಳೆ.

ಭಾಗ್ಯಾಳ ಮೊದಲ ಷರತ್ತು ಎಲ್ಲರೂ ಒಟ್ಟಿಗೆ ಇಲ್ಲೇ ನಮಗೆಂದು ಕಟ್ಟಿರೋ ಮನೆಯಲ್ಲೇ ಇರಬೇಕು. ಎರಡನೇದು ಶ್ರೇಷ್ಠಾಳನ್ನ ನಿಮ್ಮ ಕಯ್ಯಾರೆ ಈ ಮನೆಯಿಂದ ಹೊರಗಡೆ ಹಾಕಬೇಕು ಎಂದು ತಾಂಡವ್​ಗೆ ಹೇಳಿದ್ದಾಳೆ. ಈ ಮೂಲಕ ಭಾಗ್ಯಾಲಕ್ಷ್ಮೀ ಧಾರಾವಾಹಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಸದ್ಯ ತಾಂಡವ್ ಈ ಷರತ್ತಿಗೆ ಒಪ್ಪುತ್ತಾನಾ ಎಂಬುದು ಕುತೂಹಲ ಮೂಡಿಸಿದೆ.

BBK 11: ಕಿರುತೆರೆಯಲ್ಲಿ ಮುಂದುವರೆದ ಬಿಗ್ ಬಾಸ್ ಅಬ್ಬರ: ಕಿಚ್ಚನ ವೀಕೆಂಡ್​ಗೆ ಎಷ್ಟು TRP?