Friday, 20th December 2024

Om Prakash Chautala: ಹರ್ಯಾಣ ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲ ವಿಧಿವಶ

Om Prakash Chautala

ಚಂಡೀಗಢ: ಹರ್ಯಾಣದ ಮಾಜಿ ಮುಖ್ಯಮಂತ್ರಿ, ಭಾರತೀಯ ರಾಷ್ಟ್ರೀಯ ಲೋಕದಳ ಪಕ್ಷದ ಮುಖ್ಯಸ್ಥ ಓಂ ಪ್ರಕಾಶ್ ಚೌಟಾಲ(Om Prakash Chautala) ಅವರು ಶುಕ್ರವಾರ ಹೃದಯಾಘಾತದಿಂದ ಕೊನೆಯುರಿಸಿರೆಳೆದಿದ್ದಾರೆ. ಗುರುಗ್ರಾಮದಲ್ಲಿರುವ ತಮ್ಮ ನಿವಾಸದಲ್ಲಿ ವಾಸವಾಗಿದ್ದ ಚೌಟಾಲ ಅವರು ಏಕಾಏಕಿ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಮಧ್ಯಾಹ್ನ 12ಗಂಟೆಗೆ ಅವರು ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಚೌಟಾಲ ಅವರಿಗೆ ಉಸಿರಾಟದ ತೊಂದರೆ ಇದ್ದು, ಕಳೆದ 3-4 ವರ್ಷಗಳಿಂದ ತಮ್ಮ ನಿವಾಸದಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ, ಅವರ ಆರೋಗ್ಯವು ಇದ್ದಕ್ಕಿದ್ದಂತೆ ಹದಗೆಟ್ಟಿದ್ದು, ತಕ್ಷಣ ವೈದ್ಯರ ತಂಡ ಸ್ಥಳಕ್ಕೆ ದೌಡಾಯಿಸಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೆಲವೇ ಕ್ಷಣದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಓಂ ಪ್ರಕಾಶ್‌ ಚೌಟಾಲ ಹಿನ್ನೆಲೆ ಏನು?

ರಾಜಕೀಯ ಕುಟುಂಬದಲ್ಲಿ ಜನಿಸಿದ ಚೌಟಾಲಾ ಅವರು ಭಾರತದ 6 ನೇ ಉಪ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಚೌಧರಿ ದೇವಿ ಲಾಲ್ ಅವರ ಮಗ. ಅವರು ಭಾರತೀಯ ರಾಜಕೀಯದ ಧೀಮಂತರಲ್ಲಿ ಒಬ್ಬರಾಗಿದ್ದರು. ಓಂ ಪ್ರಕಾಶ್ ಚೌಟಾಲ ಅವರು ಜನವರಿ 1, 1935 ರಂದು ಸಿರ್ಸಾದ ಚೌಟಾಲ ಗ್ರಾಮದಲ್ಲಿ ಜನಿಸಿದ ಅವರು ಐದು ಬಾರಿ ಹರಿಯಾಣದ ಸಿಎಂ ಆಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚೌಟಾಲಾ ಅವರು ಡಿಸೆಂಬರ್ 2, 1989 ರಂದು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ, 22 ಮೇ 1990ರವರೆಗೆ ಈ ಹುದ್ದೆಯಲ್ಲಿ ಇದ್ದರು. ಜುಲೈ 12, 1990 ರಂದು, ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆಗ ಮುಖ್ಯಮಂತ್ರಿ ಬನಾರಸಿ ದಾಸ್ ಗುಪ್ತಾ ಅವರನ್ನು ಎರಡು ತಿಂಗಳೊಳಗೆ ಸ್ಥಾನದಿಂದ ತೆಗೆದುಹಾಕಲಾಯಿತು. ಆದಾಗ್ಯೂ, ಐದು ದಿನಗಳ ನಂತರ ಚೌಟಾಲಾ ಕೂಡ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. 22 ಏಪ್ರಿಲ್ 1991 ರಂದು ಚೌಟಾಲಾ ಮೂರನೇ ಬಾರಿಗೆ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು. ಆದರೆ ಎರಡು ವಾರಗಳ ನಂತರ ಕೇಂದ್ರ ಸರ್ಕಾರ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿತ್ತು.

ಈ ಸುದ್ದಿಯನ್ನೂ ಓದಿ: CT Ravi: ಕಾಂಗ್ರೆಸ್ ಸರ್ಕಾರದಿಂದ ದ್ವೇಷ ರಾಜಕಾರಣ; ಸಿ.ಟಿ. ರವಿ ಆರೋಪ

ಚೌಟಾಲ ಅವರು ವೃತ್ತಿ ಜೀವನವು ವಿವಾದಗಳಿಂದ ಮುಕ್ತರಾಗಿರಲಿಲ್ಲ. ನೇಮಕಾತಿ ಹಗರಣ ಜೈಲುವಾಸಕ್ಕೆ ಕಾರಣವಾಗಿತ್ತು. 1999-2000 ಅವಧಿಯಲ್ಲಿ ಹರಿಯಾಣದಲ್ಲಿ ಕಿರಿಯ ಮೂಲ ಶಿಕ್ಷಕರ ನೇಮಕಾತಿಯನ್ನು ಒಳಗೊಂಡ ಹಗರಣಕ್ಕೆ 2013ರಲ್ಲಿ 10 ವರ್ಷಗಳ ಶಿಕ್ಷೆ ವಿಧಿಸಲಾಯಿತು. ಜುಲೈ 2021ರಲ್ಲಿ ತಿಹಾರ್ ಜೈಲಿನಿಂದ ಬಿಡುಗಡೆಯಾದರು.