Saturday, 21st December 2024

BCCI Meeting: ಜ.12ರಂದು ಬಿಸಿಸಿಐ ನೂತನ ಕಾರ್ಯದರ್ಶಿ ಆಯ್ಕೆ ಸಾಧ್ಯತೆ

ನವದೆಹಲಿ: ಬಿಸಿಸಿಐ ಕಾರ್ಯದರ್ಶಿಯಾಗಿ (BCCI Secretary) ಕಾರ್ಯನಿರ್ವಹಿಸಿದ್ದ ಜಯ್​ ಶಾ (Jay Shah) ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿಯ ಅಧ್ಯಕ್ಷರಾಗಿ (ICC President) ಅಧಿಕಾರ ವಹಿಸಿಕೊಂಡಿದ್ದಾರೆ. ಇದೀಗ ಮುಂದಿನ ವರ್ಷ ಜನವರಿ 12 ರಂದು ನಡೆಯಲಿರುವ ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯಲ್ಲಿ(BCCI Meeting) ನೂತನ ಕಾರ್ಯದರ್ಶಿ ಮತ್ತು ಖಜಾಂಚಿಯನ್ನು ಆಯ್ಕೆ ಮಾಡಲಾಗುವುದು ಎಂದು ಪಿಟಿಐ ವರದಿ ಮಾಡಿದೆ. ಸದ್ಯ ಜಂಟಿ ಕಾರ್ಯದರ್ಶಿ ದೇವಜಿತ್‌ ಸೈಕಿಯಾ ಅವರನ್ನು ಬಿಸಿಸಿಐ ಹಂಗಾಮಿ ಕಾರ್ಯದರ್ಶಿಯಾಗಿದ್ದಾರೆ.

ಸದ್ಯ ಬಿಸಿಸಿಐ ಮುಂದಿನ ಕಾರ್ಯದರ್ಶಿ ಸ್ಥಾನಕ್ಕೆ ಚರ್ಚೆಯಾಗಿರುವ 2–3 ಹೆಸರುಗಳಲ್ಲಿ ಐಪಿಎಲ್‌ ಅಧ್ಯಕ್ಷ ಅರುಣ್‌ ಧುಮಾಲ್‌ ಅವರ ಹೆಸರೂ ಒಳಗೊಂಡಿದೆ. ಖಜಾಂಚಿ ಆಶಿಷ್‌ ಶೆಲ್ಲಾರ್ ಮತ್ತು ಜಂಟಿ ಕಾರ್ಯದರ್ಶಿ ದೇವಜಿತ್ ಲೊನ್ ಸೈಕಿಯಾ, ಗುಜರಾತ್‌ನ ಅನಿಲ್ ಪಟೇಲ್ ಅವರ ಹೆಸರೂ ಈ ಹುದ್ದೆಗೆ ಬಲವಾಗಿ ಕೇಳಿಬಂದಿದೆ. ಆರಂಭದಲ್ಲಿ ಮಾಜಿ ಕೇಂದ್ರ ಸಚಿವ ಅರುಣ್​ ಜೇಟ್ಲಿ ಅವರ ಪುತ್ರ ರೋಹನ್​ ಜೇಟ್ಲಿ ಅವರ ಹರಸರು ಕೇಳಿ ಬಂದಿತ್ತು. ಆದರೆ ಅವರು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್​ ಸಂಸ್ಥೆ (ಡಿಡಿಸಿಎ) ಅಧ್ಯಕ್ಷರಾಗಿ ಪುನರಾಯ್ಕೆಯಾದರು.

4200 ಕೋಟಿ ರೂ ಹೆಚ್ಚಳʼ-ಪ್ರಸಕ್ತ ವರ್ಷದಲ್ಲಿ ಬಿಸಿಸಿಐ ಗಳಿಸಿದ್ದು ಎಷ್ಟು ಕೋಟಿ ರೂ ಗೊತ್ತೆ?

ನವದೆಹಲಿ: ಪ್ರಸಕ್ತ ವರ್ಷದಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (BCCI Profit) ಆದಾಯದಲ್ಲಿ ಹೆಚ್ಚಳವಾಗಿದೆ. 4200 ಕೋಟಿ ರೂ. ಗಳು ಹೆಚ್ಚುವರಿಯಾಗಿ ಬಂದಿದ್ದು, ಒಟ್ಟಾರೆ 2024ರಲ್ಲಿ ಬಿಸಿಸಿಐಗೆ 20,686 ಕೋಟಿ ರೂ. ಗಳ ಆದಾಯ ಬಂದಿದೆ. ಇದರಲ್ಲಿ ವಿಶೇಷವಾಗಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ಟೂರ್ನಿ ಹಾಗೂ ದ್ವಿಪಕ್ಷೀಯ ಸರಣಿಗಳ ಮಾಧ್ಯಮ ಪ್ರಸಾರದ ಹಕ್ಕುಗಳಿಂದ ಬಿಸಿಸಿಐಗೆ ಹೆಚ್ಚಿನ ಆದಾಯ ಸಂದಾಯವಾಗಿದೆ.

ಭಾರತವು ವಿಶ್ವದ ಅತಿದೊಡ್ಡ ಕ್ರಿಕೆಟ್ ಮಾರುಕಟ್ಟೆಯಾಗಿರುವುದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗಳಿಸುವ ಆದಾಯದಲ್ಲಿ ಬಿಸಿಸಿಐ ಸಿಂಹಪಾಲು ಪಡೆಯುತ್ತದೆ. 2022ರ ಜೂನ್‌ನಲ್ಲಿ ಐದು ವರ್ಷಗಳ ಅವಧಿಗೆ ಐಪಿಎಲ್ ಮಾಧ್ಯಮ ಹಕ್ಕುಗಳನ್ನು 48,390 ಕೋಟಿ ರೂ. ಗಳಿಗೆ ಮಾರಾಟ ಮಾಡಲಾಗಿತ್ತು.

“ಬಿಸಿಸಿಐನ ನಗದು ಮತ್ತು ಬ್ಯಾಂಕ್ ಬ್ಯಾಲೆನ್ಸ್ 2023ರ ಫೈನಾನ್ಸ್‌ ವರ್ಷದಲ್ಲಿದ್ದ 16,493 ಕೋಟಿ ರೂ.ಗಳು, 2024ರ ಫೈನಾನ್ಸ್‌ ವರ್ಷಕ್ಕೆ 20,686 ಕೋಟಿ ರೂ.ಗಳಿಗೆ ಹೆಚ್ಚಾಗಿದೆ. ಅಂದರೆ ಸರಿ ಸುಮಾರು 4,200 ಕೋಟಿ ರೂ. ಗಳಷ್ಟು ಹೆಚ್ಚಳವಾಗಿದೆ,” ಎಂದು ಬಿಸಿಸಿಐ ದಾಖಲೆಯನ್ನು ಆಧರಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬಿಸಿಸಿಐ 2023-24ರ ಆರ್ಥಿಕ ಸಾಲಿನಲ್ಲಿ 7,476 ಕೋಟಿ ಗಳಿಸುವ ನಿರೀಕ್ಷೆಯಿದೆ ಆದರೆ ವಾಸ್ತವಿಕ ಆದಾಯವು 8,995 ಕೋಟಿ ರೂ. ಸಾಮಾನ್ಯ ನಿಧಿ ಕೂಡ 6,365 ಕೋಟಿಯಿಂದ 7,988 ಕೋಟಿಗೆ ಏರಿಕೆಯಾಗಿದೆ. 2024-25ರ ಆರ್ಥಿಕ ಸಾಲಿನಲ್ಲಿ ಬಿಸಿಸಿಐ 10,054 ಕೋಟಿ ರೂಪಾಯಿಗಳನ್ನು ಗಳಿಸುವ ನಿರೀಕ್ಷೆಯಿದೆ ಮತ್ತು ಒಟ್ಟು ಬಜೆಟ್ ವೆಚ್ಚವನ್ನು 2,348 ಕೋಟಿ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ.

ಬಿಸಿಸಿಐನ 38 ರಾಜ್ಯಗಳ ಕ್ರಿಕೆಟ್‌ ಮಂಡಳಿಗಳನ್ನು ಹೊಂದಿದ್ದು, ಇವುಗಳು ವಾರ್ಷಿಕ ಅನುದಾನವನ್ನು ಅವಲಂಬಿಸಿವೆ. ಬಿಸಿಸಿಐನ ದಾಖಲೆಗಳ ಪ್ರಕಾರ ರಾಜ್ಯದ ಪ್ರತಿಯೊಂದು ಕ್ರಿಕೆಟ್‌ ಮಂಡಳಿಯು ವಾರ್ಷಿಕವಾಗಿ ಸುಮಾರು 499 ಕೋಟಿ ರೂ. ಗಳನ್ನು ಪಡೆಯಲಿವೆ.