Wednesday, 25th December 2024

Viral Video: ವ್ಯಾಘ್ರ ಕಾಳಗ ಕಂಡು ಪ್ರವಾಸಿಗರು ಶಾಕ್! ಹುಲಿಗಳ ಅಪರೂಪದ ಕ್ಷಣ ಕ್ಯಾಮರ ಕ‍‍ಣ್ಣಲ್ಲಿ ಸೆರೆ

Viral Video

ಭೋಪಾಲ್‌: ಕನ್ಹಾ ಹುಲಿ ಮೀಸಲು ಪ್ರದೇಶದಲ್ಲಿ ಪ್ರವಾಸಿಗರಿಗೆ ಹುಲಿಗಳು ಜಗಳವಾಡುವ ಅಪರೂಪದ ದೃಶ್ಯವನ್ನು ಹತ್ತಿರದಲ್ಲಿ ನೋಡುವ ಅದೃಷ್ಟ ಸಿಕ್ಕಿದೆ. ಇತ್ತೀಚೆಗೆ ಎರಡು ಹುಲಿಗಳು ಜಗಳವಾಡಿಕೊಂಡಿದ್ದು, ಪ್ರವಾಸಿಗರು ಈ ಹುಲಿಗಳ ಕಾದಾಟವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಇದೀಗ ಈ  ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಇದನ್ನು ನೆಟ್ಟಿಗರು ಕಂಡು ಆನಂದಿಸಿದ್ದಾರೆ.

ಮಾಹಿತಿಯ ಪ್ರಕಾರ, ಟಿ 159 ಮತ್ತು ಟಿ 147 ಎಂಬ ಎರಡು ಹುಲಿಗಳು ಕನ್ಹಾ ಹುಲಿ ಮೀಸಲು ಪ್ರದೇಶದ ಸರ್ಹಿ ವಲಯದಲ್ಲಿ ಭೀಕರ ಹೋರಾಟ ನಡೆಸಿದ್ದಾವೆ. ಕನ್ಹಾ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಗಳ ನಡುವಿನ ಈ  ಘರ್ಷಣೆಯನ್ನು ಪ್ರವಾಸಿಗರು ಕ್ಯಾಮೆರಾದಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:ಶಾಲೆಯಲ್ಲಿ ಮೊಟ್ಟೆ ಕದ್ದು ಸಿಕ್ಕಿಬಿದ್ದ ಪ್ರಾಂಶುಪಾಲರು; ವಿಡಿಯೊ ವೈರಲ್

ಟಿ 159 ಮತ್ತು ಟಿ 147 ಎಂಬ ಎರಡು ದೊಡ್ಡ ಹುಲಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾವೆ. ಪ್ರಾದೇಶಿಕ ನಿಯಂತ್ರಣ ಮತ್ತು ಅಧಿಕಾರವನ್ನು ಪ್ರತಿಪಾದಿಸಲು ಇಂತಹ ಹೋರಾಟಗಳು ಸಾಮಾನ್ಯವಾಗಿ ಹುಲಿಗಳ ನಡುವೆ ಆಗಾಗ ಸಂಭವಿಸುತ್ತವೆ ಎಂದು ವನ್ಯಜೀವಿ ತಜ್ಞರು ಹೇಳಿದ್ದಾರೆ. ಕನ್ಹಾ ಹುಲಿ ಮೀಸಲು ಪ್ರದೇಶವು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಹುಲಿ ವೀಕ್ಷಣೆಗೆ ಹೆಸರುವಾಸಿಯಾಗಿದೆ. ಇಲ್ಲಿಗೆ ಭಾರತೀಯರ ಜೊತೆಗೆ ವಿದೇಶಿ ಪ್ರವಾಸಿಗರು ಸೇರಿದಂತೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡಿ ಇಲ್ಲಿನ ಕಾಡಿನ ಸೌಂದರ್ಯ ಮತ್ತು ವನ್ಯಜೀವಿಗಳನ್ನು ನೋಡಿ ಆನಂದಿಸುತ್ತಾರೆ. ಈ ಹುಲಿಗಳ  ಫೈಟ್‍ನ ವಿಡಿಯೊ ಪ್ರೇಕ್ಷಕರಿಗೆ ಹುಲಿಗಳ ಶಕ್ತಿ, ಅವುಗಳ ಸ್ವಭಾವದ ಬಗ್ಗೆ ಹತ್ತಿರದಿಂದ ನೋಡುವ ಅವಕಾಶವನ್ನು ನೀಡಿದೆಯಂತೆ.