Friday, 20th December 2024

BBK 11: ನೀನು ನಮ್ಮ ಅತ್ತೆ ಮಗಳಲ್ಲ: ಚೈತ್ರಾ ವಿರುದ್ಧ ಮತ್ತೊಮ್ಮೆ ಸಿಡಿದೆದ್ದ ಹನುಮಂತ

Chaithra and Hanumantha

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss kannada 11) ಸದ್ಯ 12ನೇ ವಾರದ ಅಂತ್ಯದಲ್ಲಿದೆ. ಎರಡು ಗುಂಪುಗಳಾಗಿ ವಿಂಗಡನೆಗೊಂಡಿದ್ದ ಮನೆಯಲ್ಲಿ ಈಗ ಎಲ್ಲ ಟಾಸ್ಕ್​ಗಳು ಮುಕ್ತಾಯಗೊಂಡಿದೆ. ಈ ಬಾರಿ ಟಾಸ್ಕ್ ಮಧ್ಯೆ ಅನೇಕ ಜಗಳಗಳು ನಡೆದಿವೆ. ಒಂದು ಟಾಸ್ಕ್ ಈ ಜಗಳದಿಂದ ರದ್ದು ಕೂಡ ಆಯಿತು. ಇದೀಗ ಈ ವಾರದ ಪ್ರದರ್ಶನ ನೋಡಿ ಮನೆಯವರು ಕಳಪೆ ಮತ್ತು ಉತ್ತಮ ಯಾರೆಂದು ಆಯ್ಕೆ ಮಾಡಿದ್ದಾರೆ.

ಕಳಪೆಗೆ ಹೆಚ್ಚಿನ ಜನರು ಚೈತ್ರಾ ಕುಂದಾಪುರ ಹೆಸರನ್ನೇ ತೆಗೆದುಕೊಂಡಿದ್ದಾರೆ. ಅದರಲ್ಲೂ ಸದಾ ಸೈಲೆಂಟ್ ಆಗಿರುವ ಹನುಮಂತ ಈ ವಾರ ಕೊಂಚ ವೈಲೆಂಟ್ ಆಗಿದ್ದರು. ಇದು ಕಳಪೆ ನೀಡುವ ಸಂದರ್ಭ ಕೂಡ ಕಾಣಿಸಿಕೊಂಡಿದೆ. ಚೈತ್ರಾ ಅವರಿಗೆ ಕಳಪೆ ನೀಡುವಾಗ ಹನುಮಂತ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ವಾರ ಉಸ್ತುವಾರಿಯಲ್ಲಿ ಚೈತ್ರಾ ಪಕ್ಷಪಾತ ಮಾಡಿದರು ಎಂಬ ಕಾರಣಕ್ಕೆ ಹಲವರು ಕಳಪೆಯನ್ನು ಕೊಟ್ಟರು. ಈ ಬಗ್ಗೆ ಚೈತ್ರಾ ಅವರು ಗುಂಪು ಕಟ್ಟಿಕೊಂಡು ಕಳಪೆ ನೀಡುತ್ತೀದ್ದೀರಾ ಎಂದು ವಾದಿಸಿದರು. ಆದರೆ, ಹನುಮಂತ ಸ್ವಲ್ಪ ಗರಂ ಆಗಿ, ನಿನಗೆ ಪದೇ ಪದೇ ಕಳಪೆ ಕೊಡೋಕೆ ನೀನೇನು ದೊಡ್ಡಪ್ಪನ ಮಗಳು, ಅತ್ತೆ ಮಗಳಲ್ಲ ಎಂದಿದ್ದಾರೆ.

ಟಾರ್ಗೆಟ್ ಮಾಡಿಕೊಂಡು ಕಳಪೆ ಕೊಡಲು ನಾನು ಯಾರನ್ನೂ ಟಾರ್ಗೆಟ್ ಮಾಡಿಲ್ಲ. ನೀನು ನನ್ನ ದೊಡ್ಡಪ್ಪನ ಮಗಳು, ಅತ್ತೆ ಮಗಳು ಅಲ್ಲ ಎಂದು ಹನುಮಂತ ಡೈಲಾಗ್ ಹೊಡೆದಿದ್ದಾರೆ. ಧನರಾಜ್‌ ಹಾಗೂ ಮೋಕ್ಷಿತಾ ಅವರು ಕೂಡ ಪಕ್ಷಪಾತ ವಿಚಾರವಾಗಿ ಕಳಪೆ ಕೊಟ್ಟರು. ರಜತ್‌ ಕೂಡ ಮುಂದಿನ ದಿನಗಳಲ್ಲಿ ನೀವು ಉಸ್ತುವಾರಿ ಆಗಿ ಬಂದರೆ ನಮ್ಮ ತಂಡ ನಿಮಗೆ ಕೈ ಮುಗಿಯುತ್ತೆ ಎಂದಿದ್ದಾರೆ. ಕುಣಿಯಕ್ಕೆ ಬಾರದೇ ಇರೋನು ನೆಲ ಡೊಂಕು ಇದ್ದಾಗೆ, ಆಡಕ್ಕೆ ಬರದೇ ಇದ್ದವನು ಸೋತೆ ಅಂತ ನಾನು ಹೇಳಲ್ಲ ಎಂದಿದ್ದಾರೆ ಚೈತ್ರಾ.

ಅಂತಿಮವಾಗು ಚೈತ್ರಾ ಕುಂದಾಪುರ ಬರೋಬ್ಬರಿ ನಾಲ್ಕನೇ ಬಾರಿಗೆ ಬಿಗ್ ಬಾಸ್ ಮನೆಯಲ್ಲಿ ಜೈಲಿಗೆ ತೆರಳಿದ್ದಾರೆ. ಈ ವಾರಮನೆಯಿಂದ ಹೊರಹೋಗಲು 10 ಸ್ಪರ್ಧಿಗಳ ಪೈಕಿ 4 ಮಂದಿ ನಾಮಿನೇಟ್​ ಆಗಿದ್ದಾರೆ. ತ್ರಿವಿಕ್ರಮ್​, ರಜತ್, ಮೋಕ್ಷಿತಾ ಹಾಗೂ ಹನುಮಂತ ಈ 4 ಮಂದಿ ಮನೆಯಿಂದ ಆಚೆ ಹೋಗಲು ನಾಮಿನೇಟ್​ ಆಗಿದ್ದಾರೆ.

BBK 11: ಕಿರುತೆರೆಯಲ್ಲಿ ಮುಂದುವರೆದ ಬಿಗ್ ಬಾಸ್ ಅಬ್ಬರ: ಕಿಚ್ಚನ ವೀಕೆಂಡ್​ಗೆ ಎಷ್ಟು TRP?