ಬೀಜಿಂಗ್ : ರಜಾ ದಿನಗಳನ್ನು ಕಡಲತೀರದಲ್ಲಿ ಒಂದು ಕಪ್ ಬಿಸಿಬಿಸಿ ಕಾಫಿಯನ್ನು ಹೀರುತ್ತಾ ಕುಳಿತರೇ ಮನಸ್ಸಿಗೆ ಹಾಯ್ ಅನಿಸುತ್ತದೆ. ಅದೇ ನೀವು ಇಳಿಜಾರು ಬಂಡೆಯ ಮೇಲೆ ಕುಳಿತು ಕಾಫಿ ಕುಡಿದರೆ ನಿಮಗೆ ಹೇಗನಿಸಬಹುದು ಎಂಬುದನ್ನು ಒಮ್ಮೆ ಊಹಿಸಿ. ಚೀನಾದಲ್ಲಿ ಇಂತಹದೊಂದು ಸ್ಥಳವಿದೆ. ಅಲ್ಲಿ ಕೆಲವರು ಇಳಿಜಾರು ಬಂಡೆಯ ಮೇಲೆ ಕುಳಿತು ತಮಗೆ ಪ್ರಿಯವಾದ ಪಾನೀಯಗಳನ್ನು ಕುಡಿಯುತ್ತಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಅನೇಕರು ಇದನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ.
ಇತ್ತೀಚಿನ ವಿಡಿಯೊ ಒಂದರಲ್ಲಿ, ಜನರು ಪರ್ವತ ಪ್ರದೇಶಗಳಲ್ಲಿ ಸ್ಥಾಪಿಸಲಾದ ಹಾಸಿಗೆಯ ಮೇಲೆ ಕುಳಿತಿರುವುದು ಕಂಡುಬಂದಿದೆ. ಚೀನಾದ ಕಾಫಿ ಅಂಗಡಿಗಳು ಜನರಿಗೆ ರುಚಿಯಾದ ಕಾಫಿ ಅನುಭವವನ್ನು ನೀಡಲು ಕೆಲವು ವಿಶ್ರಾಂತಿ ವ್ಯವಸ್ಥೆಗಳನ್ನು ಮಾಡಿವೆ.
ಇನ್ನು ಈ ಸ್ಥಳಗಳು ತುಂಬಾ ಭಯಾನಕವಾಗಿ ಕಾಣುತ್ತಿವೆ ಇಂತಹ ಎತ್ತರವಾದ ಸ್ಥಳದಲ್ಲಿ ಜನ ಹೋಗಿ ಕಾಫಿ ಕುಡಿಯುತ್ತಿರುವ ದೃಶ್ಯ ನೋಡುಗರನ್ನು ಬೆಚ್ಚಿಬೀಳಿಸಿದೆ.
ಇದನ್ನು ನೋಡಿದ ನೆಟ್ಟಿಗರು ದಂಗಾಗಿದ್ದಾರೆ, “ಆತಂಕದೊಂದಿಗೆ ಕಾಫಿ” ಎಂದು ಕಾಮೆಂಟ್ ಮಾಡುವ ಮೂಲಕ ಕೆಲವರು ಇಷ್ಟು ಎತ್ತರದಿಂದ ಕಾಫಿ ಕುಡಿಯಲು ಭಯವನ್ನು ವ್ಯಕ್ತಪಡಿಸಿದರೆ, ಇನ್ನು ಕೆಲವರು ಆ ಸ್ಥಳದ ಬಗ್ಗೆ ಉತ್ಸಾಹದಿಂದ ಕೇಳಿದ್ದಾರೆ.
ಈ ಸುದಿಯನ್ನೂ ಓದಿ:ಬ್ಲೈಂಡ್ ಡೇಟ್ ಹೋಗೋ ಮುನ್ನ ಎಚ್ಚರ…ಎಚ್ಚರ..! ಫಿಲ್ಮಿ ಸ್ಟೈಲ್‌ನಲ್ಲಿ ಧೋಖಾ; ಈಕೆ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?
“ಅಕ್ಟೋಬರ್ 2024 ರಲ್ಲಿ, ಗುಶಿ ಕ್ಲಿಫ್ ಕಾಫಿ ಫ್ಯೂಜಿಯಾನ್‍ನ ಲಿಯಾನ್ಜಿಯಾಂಗ್‍ನ ಗುಶಿ ಗ್ರಾಮದಲ್ಲಿ ಇದನ್ನು ತೆರೆಯಲಾಗಿದೆ. ಸಮುದ್ರದಿಂದ 70 ಮೀಟರ್ ಎತ್ತರದಲ್ಲಿ ಕಾಫಿಯನ್ನು ಪೂರೈಸುತ್ತಿದೆ.