Sunday, 22nd December 2024

Pushpa 2: ಜನವರಿ 9ರಂದು ಒಟಿಟಿಗೆ ಬರುತ್ತಾ ಅಲ್ಲು ಅರ್ಜುನ್‌-ರಶ್ಮಿಕಾ ಜೋಡಿಯ ‘ಪುಷ್ಪ 2’? ನಿರ್ಮಾಪಕರು ಹೇಳಿದ್ದೇನು?

Pushpa 2

ಹೈದರಾಬಾದ್‌: ಅಲ್ಲು ಅರ್ಜುನ್‌ (Allu Arjun) ನಟನೆಯ ಪುಷ್ಪ 2 (Pushpa 2) ಡಿ. 5 ರಂದು ವಿಶ್ವದಾದ್ಯಂತ ತೆರೆ ಕಂಡು ಭರ್ಜರಿ ಗಳಿಕೆ ಕಂಡಿದೆ. ಗಲ್ಲಾಪಟ್ಟಿಯಲ್ಲಿ ಅತೀ ಹೆಚ್ಚುಗಳಿಕೆ ಮಾಡುವ ಮೂಲಕ ಹಲವು ಚಿತ್ರಗಳನ್ನು ಹಿಂದಿಕ್ಕಿದೆ. ಇತ್ತೀಚೆಗೆ ʼಪುಷ್ಪ 2ʼ ಜನವರಿ 9ರಂದು ಒಟಿಟಿಯಲ್ಲಿ(OTT) ಬಿಡುಗಡೆಯಾಗಲಿದೆ ಎಂದು ಎಲ್ಲಡೆ ಸುದ್ದಿಯಾಗಿತ್ತು. ಆದರೆ ನಿರ್ಮಾಪಕರು ಇದನ್ನು ಅಲ್ಲಗಳೆದಿದ್ದಾರೆ.

ಜನವರಿ 9ರಂದು ಪುಷ್ಪಾ ಒಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗುತ್ತದೆ ಎಂದು ದೊಡ್ಡ ಮಟ್ಟದಲ್ಲಿ ಸುದ್ದಿ ಹರಡಿತ್ತು. ಆದರೆ ಚಿತ್ರ ತಂಡ ಅದನ್ನು ನಿರಾಕರಿಸಿದ್ದು, ಚಿತ್ರ 56 ದಿನಗಳನ್ನು ಪೂರೈಸುವ ಮೊದಲು ಯಾವುದೇ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ರಿಲೀಸ್‌ ಆಗುವುದಿಲ್ಲ ಎಂದು ಖಚಿತಪಡಿಸಿದೆ.

ಮೈತ್ರಿ ಮೂವೀಸ್‌ನ ಪ್ರೊಡಕ್ಷನ್ ಹೌಸ್, ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿದ್ದು, ಚಿತ್ರವು ಥೇಟರ್‌ನಲ್ಲಿ ಬಿಡುಗಡೆಯಾದ 56 ದಿನಗಳ ಮೊದಲೇ OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗುವುದಿಲ್ಲ ಎಂದು ತಿಳಿಸಿದೆ. ಹಾಲಿಡೇ ಸೀಸನ್‌ನಲ್ಲಿ ಬಿಗ್ ಸ್ಕ್ರೀನ್‌ಗಳಲ್ಲಿ ಮಾತ್ರ ಬ್ಲಾಕ್‌ಬಸ್ಟರ್‌ ಸಿನಿಮಾವನ್ನು ಆನಂದಿಸಿ ಎಂದು ಪೋಸ್ಟ್‌ ಮಾಡಿದೆ.

ʼಪುಷ್ಪ 2 ದಿ ರೂಲ್; ಬಿಡುಗಡೆಯಾದ ಎರಡು ವಾರಗಳಲ್ಲಿ ಭಾರತದಲ್ಲಿ 600 ಕೋಟಿ ರೂ. ಗಳಿಸಿದೆ. ಚಿತ್ರದ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವೀ ಮೇಕರ್ಸ್ ಪ್ರಕಾರ, ಅಲ್ಲು ಅರ್ಜುನ್ ಅಭಿನಯದ ಈ ಚಿತ್ರ ವಿಶ್ವಾದ್ಯಂತ 1,500 ಕೋಟಿ ರೂ. ಗಡಿ ದಾಟಿದೆ. ಆ ಮೂಲಕ ಚಿತ್ರ 1,508 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.

ಡಿಸೆಂಬರ್‌ ತಿಂಗಳ ಆರಂಭದಲ್ಲಿ ಪುಷ್ಪ 2 ಪ್ರದರ್ಶನದ ವೇಳೆ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಸಂಗೀತ ನಿರ್ದೇಶಕ ದೇವಿ ಪ್ರಸಾದ್ ಅವರೊಂದಿಗೆ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಅಲ್ಲು ಅರ್ಜುನ್ ಅವರನ್ನು ನೋಡಲು ಬೃಹತ್ ಜನಸ್ತೋಮ ಜಮಾಯಿಸಿದ್ದರಿಂದ ಕಾಲ್ತುಳಿತದಿಂದಾಗಿ ಮಹಿಳೆ ಮೃತಪಟ್ಟಿದ್ದರು. ಆಕೆಯ ಪುತ್ರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಂತರ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಹೈಕೋರ್ಟ್‌ ಮಧ್ಯಂತರ ಜಾಮೀನು ನೀಡಿದೆ.

ಈ ಸುದ್ದಿಯನ್ನು ಓದಿ : Pushpa 2 Movie: ‘ಪುಷ್ಪ 2’ ಚಿತ್ರ ಪ್ರದರ್ಶನದ ವೇಳೆ ಮತ್ತೊಂದು ಅವಘಡ; ಥಿಯೇಟರ್‌ನಲ್ಲಿ ವ್ಯಕ್ತಿಯ ಶವ ಪತ್ತೆ