Monday, 30th December 2024

Nooru Janmaku Serial: ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಪ್ರಸಾರವಾಗಲಿದೆ ಹಾರರ್‌ ಕಥೆಯುಳ್ಳ ಹೊಸ ಧಾರಾವಾಹಿ

ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ (Kannada Serial) ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಈಗ ಅದಕ್ಕೆ ಹೊಸ ಸೇರ್ಪಡೆ ಹಾರರ್​ ಥ್ರಿಲ್ಲರ್​ ಜಾನರ್​ನ ಸ್ಟೋರಿ ಎಂದರೆ ಅದು​ ನೂರು ಜನ್ಮಕ್ಕೂ(Nooru Janmaku Serial). ಸೂಪರ್​ ಹಿಟ್​ ಧಾರಾವಾಹಿ ಗೀತಾ ನಾಯಕ ಧನುಷ್ ಗೌಡ ಮತ್ತೆ ವೀಕ್ಷಕರ ಮುಂದೆ ಬರುತ್ತಿದ್ದಾರೆ. ಗೀತಾ ಸೀರಿಯಲ್​ ಮುಕ್ತಾಯದ ನಂತರ ಸ್ಟಾರ್ ಸುವರ್ಣದ ಗೌರಿಶಂಕರ ಧಾರಾವಾಹಿಯಲ್ಲಿ ಪರಿಚಿತ್​ ಅನ್ನೋ ಅತಿಥಿ ಪಾತ್ರ ನಿರ್ವಹಿಸಿದ್ದರು. ಇದಾದ ನಂತರ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಸದ್ಯ ಸದ್ದಿಲ್ಲದೇ ಹೊಸ ಧಾರಾವಾಹಿಯನ್ನು ಅನೌನ್ಸ್ ಮಾಡಿದ್ದಾರೆ.

ಈಗಾಗಲೇ ಈ ಧಾರಾವಾಹಿಯ ಪ್ರೋಮೋ ಹಂಚಿಕೊಂಡಿರುವ ಕಲರ್ಸ್ ಕನ್ನಡ(colors kannada) ಪ್ರೀತ್ಸೋ ಜೀವಗಳ ಜತೆ ಇಡೀ ಪ್ರಪಂಚಾನೇ ನಿಂತಿದ್ರೆ, ಅದೇ ಪ್ರೀತಿನಾ ಧ್ವಂಸ ಮಾಡೋಕೆ ಒಂದು ಆತ್ಮ ಕಾಯ್ತಿದೆ! ಎಂದು ಕ್ಯಾಪ್ಷನ್‌ ನೀಡಿ ಪೋಸ್ಟ್ ಹಂಚಿಕೊಂಡಿದೆ.

ಇನ್ನು ಹೊಚ್ಚ ಹೊಸ ಸೀರಿಯಲ್​ನಲ್ಲಿ ಗೀತಾ ಧಾರಾವಾಹಿಯಲ್ಲಿ ವಿಜಯ್‌ ಎಂಬ ಪಾತ್ರದ ಮೂಲಕ ಸಖತ್‌ ಫೇಮಸ್‌ ಆಗಿದ್ದ ನಟ ಧನುಷ್​ ನಾಯಕ ನಟನಾಗಿ ಅಭಿನಯಿಸಿದ್ದು, ನಾಯಕಿ ಆಗಿ ಮಂಗಳೂರಿನ ಬೆಡಗಿ ಶಿಲ್ಪಾ ಕಾಮತ್​ ಅಭಿನಯಿಸುತ್ತಿದ್ದಾರೆ. ಶಿಲ್ಪಾ ತುಳು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ​. ಮಿಸ್​ ಮಂಗಳೂರು ರನ್ನರಪ್​ ಕೂಡ ಆಗಿದ್ದರು. ಕನ್ನಡದಲ್ಲಿ ನೂರು ಜನ್ಮಕ್ಕೂ ಅವರ ಮೊದಲ ಪ್ರಾಜೆಕ್ಟ್ ಆಗಿದೆ. ಹಾಗೇ ಈ ಹೊಸ ಕತೆಗೆ ಬರೋದಾದರೇ ಜನ್ಮ ಜನ್ಮಾಂತರ ಸ್ಟೋರಿ ಇದಾಗಿದೆ. ನಾಯಕ ನಾಯಕಿಯ ಪ್ರೀತಿಯನ್ನ ಜಗತ್ತೇ ಒಪ್ಪಿಕೊಂಡಿದ್ರು, ಅವ್ರ ಪ್ರೀತಿಯನ್ನ ಧ್ವಂಸ ಮಾಡೋಕೆ ಆತ್ಮ ಒಂದು ಜನ್ಮ ಜನ್ಮಾಂತರದಿಂದ ಬೆನ್ನಟ್ಟಿದೆ. ಇದರಿಂದ ಇದು ನೂರು ಜನ್ಮಕ್ಕೂ ಧಾರಾವಾಹಿಯ ಒನ್​ ಲೈನ್​ ಸ್ಟೋರಿ.

ಸದ್ಯ ಪ್ರೋಮೋದಲ್ಲಿ ಕಾಣುವ ಆ ಆತ್ಮ ಯಾರದ್ದು? ಯಾಕೆ ಅವರನ್ನು ದೂರ ಮಾಡೋಕೆ ಪ್ರಯತ್ನ ಪಡುತ್ತಿದೆ ಅನ್ನೋದು ಕೌತುಕದ ಸಂಗತಿಗಳು. ಹಾರರ್​ ಇಷ್ಟ ಪಡೋರಿಗೆ ಈ ಧಾರಾವಾಹಿ ಥ್ರಿಲ್​ ಕೊಡುವುದರಲ್ಲಿ ಡೌಡೇ ಇಲ್ಲ. ಹೊಸ ಸೀರಿಯಲ್​ ಅನೌನ್ಸ್ ಆಗಿದೆ ಅಂದ್ಮೇಲೆ ಯಾವ ಸೀರಿಯಲ್ ಮುಕ್ತಾಯವಾಗ್ತಿದೆ ಎಂಬ ಪ್ರಶ್ನೆ ವೀಕ್ಷಕರಲ್ಲಿ​ ಶುರುವಾಗೋದು ಕಾಮನ್​. ಆದರೆ ಆಗ ಜಾಗದಲ್ಲಿ ಲಕ್ಷ್ಮೀ ಬಾರಮ್ಮ ಮುಗಿಯಲಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಆದ್ರೇ ಈ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ.

ಇನ್ನು ಡಿಸೆಂಬರ್ 23 ರಿಂದ ಪ್ರತಿ ರಾತ್ರಿ 8:30ಕ್ಕೆ ಪ್ರಸಾರಗೊಳ್ಳಲಿರುವ ಹೊಸ ಧಾರಾವಾಹಿ ‘ನೂರು ಜನ್ಮಕೂ’ ವಿಭಿನ್ನವಾದ ರೋಚಕ ಕತೆಯನ್ನು ಹೊಂದಿದ್ದು, ಶ್ರವಂತ್ ರಾಧಿಕಾ ನಿರ್ದೇಶನದ ‘ನೂರು ಜನ್ಮಕೂ’ ಧಾರಾವಾಹಿಯಲ್ಲಿ ಹೆಸರಾಂತ ನಟ – ನಟಿಯರ ತಾರಾ ಬಳಗವೇ ಇದೆ. ‘ಗೀತಾ’ ಧಾರಾವಾಹಿಯಿಂದ ಹೆಸರಾದ ನಟ ಧನುಷ್ ಗೌಡ, ಹಿರಿಯ ನಟಿ ಗಿರಿಜಾ ಲೋಕೇಶ್, ಭಾಗ್ಯಶ್ರೀ, ಬಿ ಎಂ ವೆಂಕಟೇಶ್ ಮತ್ತು ಗಾಯಕಿ ಅರ್ಚನಾ ಉಡುಪ ಈ ಧಾರಾವಾಯಿ ತಂಡದಲ್ಲಿದ್ದು, ಮಜಾ ಟಾಕೀಸ್ ಖ್ಯಾತಿಯ ರೆಮೋ ಕೂಡ ನಟಿಸುತ್ತಿರುವುದು ವೀಕ್ಷಕರ ಗಮನ ಸೆಳೆದಿದೆ. ಚಿತ್ರಾ ಶೆಣೈ ತಮ್ಮ ಗುಡ್ ಕಂಪನಿ ಸಂಸ್ಥೆಯಿಂದ ‘ನೂರು ಜನ್ಮಕೂ’ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ.

ಚಿಕ್ಕಮಗಳೂರಿನ ಸುತ್ತಮುತ್ತ ಈ ಧಾರಾವಾಯಿಯನ್ನು ಚಿತ್ರೀಕರಿಸಲಾಗುತ್ತಿದ್ದು, ‘ನೂರು ಜನ್ಮಕೂ’ ಮಾನವೀಯ ಅಂತಃಕರಣ ಹಾಗೂ ಅತಿಮಾನುಷ ಶಕ್ತಿಗಳ ಅಟ್ಟಹಾಸವನ್ನು ಮುಖಾಮುಖಿಯಾಗಿಸುತ್ತದೆ. ಹಾಗಾಗಿ ರೋಚಕ ತಿರುವುಗಳನ್ನು ಪಡೆಯುತ್ತಾ ವೀಕ್ಷಕರನ್ನು ರಂಜಿಸುತ್ತದೆ. ಸಂಬಂಧಗಳು, ಕೌಟುಂಬಿಕ ನಾಟಕಗಳು.. ಅದನ್ನು ಮತ್ತಷ್ಟು ಮನೋರಂಜನೆ ನೀಡಲಿದೆ.

ಇನ್ನೂ ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಈ ಧಾರಾವಾಹಿಯ ಪ್ರೋಮೋಶನ್ ನಡೆದಿದ್ದು, ಸ್ಪರ್ಧಿಗಳೆಲ್ಲಾ ಶಾಕ್ ನೀಡುವ ಮೂಲಕ ಈ ಸೀರಿಯಲ್ ಅನ್ನು ಪ್ರೋಮೋಟ್ ಮಾಡಲಾಗಿದೆ. ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಸ್ಪರ್ಧಿಗಳೆಗೆ ಏಕಾಏಕಿ ಪ್ರೇತ ರಪ್‌ ಅಂತ ಪಾಸ್‌ ಆಗಿದೆ. ದೆವ್ವದ ಅನುಭವ ಆಗಿ ಸ್ಪರ್ಧಿಗಳು ಅಕ್ಷರಶಃ ಬೆಚ್ಚಿಬೆದ್ದಿದ್ದಾರೆ. ಚೈತ್ರಾ ಕುಂದಾಪುರ ಅಂತೂ ಭಯದಿಂದ ಬಿದ್ದು ಹೋಗಿದ್ದಾರೆ. ಇನ್ನೂ ಕ್ಯಾಪ್ಟನ್ ಭವ್ಯಾ ಗೌಡ ಗಳಗಳನೆ ಅತ್ತಿದ್ದಾರೆ. ಅಸಲಿಗೆ, ‘ಬಿಗ್ ಬಾಸ್’ ಮನೆಯಲ್ಲಿ ದೆವ್ವ ಕಾಣಿಸಿಕೊಂಡಿಲ್ಲ. ಆದರೆ, ದೆವ್ವದ ಅನುಭವವನ್ನ ಸ್ಪರ್ಧಿಗಳಿಗೆ ಮಾಡಿಸಲಾಗಿದೆ.

ಈ ಸುದ್ದಿಯನ್ನು ಓದಿ: Seetha Rama Serial: ಅಶೋಕನ ಎದುರು ಬಯಲಾಯ್ತು ಭಾರ್ಗವಿ ಆಟ: ರಾಮ್​ಗೆ ಗೊತ್ತಾಗುತ್ತ ಎಲ್ಲಾ ಸತ್ಯ?