Tuesday, 7th January 2025

Self Harming: ಕೋಟಾದಲ್ಲಿ ಜೆಇಇಗೆ ಸಿದ್ಧತೆ ನಡೆಸುತ್ತಿದ್ದ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ; ಈ ವರ್ಷ 20ನೇ ಕೇಸ್

self harming

ಜೈಪುರ: ರಾಜಸ್ಥಾನದ ಕೋಟಾದಲ್ಲಿ (Rajasthan’s Kota) ಪರೀಕ್ಷೆಗೆ ತಯಾರಾಗುತ್ತಿದ್ದ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಸ್ನಾತಕ ಪೂರ್ವ ಎಂಜನಿಯರಿಂಗ್ ಪ್ರವೇಶ ಪರೀಕ್ಷೆಗೆ (ಜೆಇಇ) ಸಿದ್ಧತೆ ನಡೆಸುತ್ತಿದ್ದ 16 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಾಸ್ಟೆಲ್‌ನಲ್ಲಿ ನೇಣುಬಿಗಿದುಕೊಂಡ ವಿದ್ಯಾರ್ಥಿ

ಬಿಹಾರದ 16 ವರ್ಷದ ಈ ವಿದ್ಯಾರ್ಥಿ ಏಪ್ರಿಲ್‌ನಲ್ಲಿ ಕೋಟಾಕ್ಕೆ ಬಂದು ವಿಜ್ಞಾನ ನಗರ ಹಾಸ್ಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ. ಇದೀಗ ಹಾಸ್ಟೆಲ್‌ನ ತನ್ನ ರೂಮ್‌ನಲ್ಲಿ ನೇಣು ಬಿಗಿದುಕೊಂಡಿದ್ದಾನೆ. ಸ್ನೇಹಿತರು ಹಲವಾರು ಬಾರಿ ಬಾಗಿಲು ತಟ್ಟಿದಾಗಲೂ ಪ್ರತಿಕ್ರಿಯಿಸದಿದ್ದಾಗ, ಹಾಸ್ಟೆಲ್ ಸಿಬ್ಬಂದಿ ಬಾಗಿಲು ತೆರೆದು ಒಳ ಪ್ರವೇಶಿಸಿದಾಗ ಆತ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡವನ್ನು ಕರೆಸಿ ಆತನ ಪೋಷಕರಿಗೆ ಮಾಹಿತಿ ನೀಡಲಾಯಿತು.

ಕೋಟಾದಲ್ಲಿ ಆತ್ಮಹತ್ಯೆ ಪ್ರಕರಣ ನಡೆಯುತ್ತಲೇ ಇದೆ!

ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಇದು ಹೊಸದೇನಲ್ಲ. ದೇಶದ ಹಲವು ಭಾಗಗಳ ವಿದ್ಯಾರ್ಥಿಗಳು ಕಾಲೇಜು ಪ್ರವೇಶ ಪರೀಕ್ಷೆಗಳ ಕೋಚಿಂಗ್‌ಗೆಂದು ಇಲ್ಲಿ ಬರುತ್ತಾರೆ. ಹತ್ತನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ದೇಶಾದ್ಯಂತದ ವಿದ್ಯಾರ್ಥಿಗಳು ವಸತಿ ಪರೀಕ್ಷಾ ಪ್ರಾಥಮಿಕ ಸಂಸ್ಥೆಗಳಿಗೆ ಸೇರಲು ಕೋಟಾಕ್ಕೆ ಆಗಮಿಸುತ್ತಾರೆ. ಈ ವರ್ಷ ಇದುವರೆಗೆ ಇಲ್ಲಿ ಸುಮಾರು 20 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

2023ರಲ್ಲೂ ಇಂತಹ ಅನೇಕ ಘಟನೆಗಳು ಇಲ್ಲಿ ನಡೆದಿದೆ. ಕಳೆದ ವರ್ಷ ರಾಜ್ಯದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ೨೭ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಪೊಲೀಸ್ ಅಂಕಿ ಅಂಶಗಳ ಪ್ರಕಾರ, ಕೋಟಾದಲ್ಲಿ 2022ರಲ್ಲಿ 15, 2019ರಲ್ಲಿ 18, 2018ರಲ್ಲಿ 20, 2027ರಲ್ಲಿ 7, 2016ರಲ್ಲಿ 17, ಮತ್ತು 2015ರಲ್ಲಿ 18 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2020 ಮತ್ತು 2021ರಲ್ಲಿ ಕೋಚಿಂಗ್ ಇನ್ಸ್‌ಸ್ಟೂಟ್‌ಗೆ ಸಂಬಂಧಿಸಿ ಯಾವುದೇ ಆತ್ಮಹತ್ಯೆಗಳು ವರದಿಯಾಗಿಲ್ಲ.

ಇದೀಗ ವಿದ್ಯಾರ್ಥಿಯ ಆತ್ಮಹತ್ಯೆಗೆ ಕಾರಣವೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರ ಜತೆಗೆ ಆತನ ಕೋಣೆಯಲ್ಲಿ ಡೆತ್​​​ ನೋಟ್​​​​​ ಇದೆಯಾ? ಕೋಚಿಂಗ್ ಸೆಂಟರ್ ಹಾಜರಾತಿಯಲ್ಲಿ ಏನಾದರೂ ಸಮಸ್ಯೆ ಆಗಿದೇಯೆ ಎಂದು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಇದನ್ನು ಓದಿ:Amir Khan: ಮಹಾಭಾರತ ಸಿನಿಮಾ ಬಗ್ಗೆ ಭಯ ಇದೆ… ಅಮೀರ್‌ ಖಾನ್‌ ಹೀಗಂದಿದ್ದೇಕೆ?