Wednesday, 8th January 2025

MLA Pradeep Eshwara; ಅಧಿವೇಶನ ಮುಗಿಸಿ ಕೊಂಡು ನೇರ ಜನರ ಬಳಿಗೆ ತೆರಳಿದ ಶಾಸಕ ಪ್ರದೀಪ್ ಈಶ್ವರ್

ಪೋಶೆಟ್ಟಿಹಳ್ಳಿ ಗ್ರಾಮಪಂಚಾಯತಿಯಲ್ಲಿ ಮುಂದುವರೆದ ನಮ್ಮ ಶಾಸಕ ನಮ್ಮ ನಮ್ಮ ಹಳ್ಳಿಗೆ

ಚಿಕ್ಕಬಳ್ಳಾಪುರ : ಶಾಸಕ ಪ್ರದೀಪ್ ಈಶ್ವರ್ ಬೆಳಗಾವಿಯ ಚಳಿಗಾಲದ ಅಧಿವೇಶನ ಮುಗಿಸಿಕೊಂಡು ನೇರವಾಗಿ ಕ್ಷೇತ್ರಕ್ಕೆ ಬಂದು ಜನಸಾಮಾನ್ಯರ ಸಂಕಷ್ಟಕ್ಕೆ ಮುಂದಾಗುವ ಮೂಲಕ  ನಾನೊಬ್ಬ ಜನಪರ ಕಾಳಜಿಯುಳ್ಳ ರಾಜಕಾರಣಿ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದರು.

ಹೌದು ಶುಕ್ರವಾರ ಪೋಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಿಮಾಕಲಹಳ್ಳಿ, ಬುಡಗತಿಮ್ಮನಹಳ್ಳಿ, ಬಿಕ್ಕಲಹಳ್ಳಿ,ಕಾಮರೆಡ್ಡಿಹಳ್ಳಿ,ಅಲಾಸ್ತಿಮ್ಮನಹಳ್ಳಿ ಗ್ರಾಮಗಳಿಗೆ ಸೂರ್ಯ ಹುಟ್ಟುವ ಮುನ್ನವೇ ಭೇಟಿ ನೀಡಿ ದ್ದಲ್ಲದೆ,ಅವರಿದ್ದಲ್ಲಿಯೇ ಅವರ ಕಷ್ಟಗಳಿಗೆ ಕಣ್ಣಾಗುವ ಮೂಲಕ ಜನಪರ ಕಾಳಜಿಯುಳ್ಳ ಜನಪ್ರತಿನಿಧಿ ಹೇಗಿರಬೇಕು ಎಂಬುದನ್ನು ತೋರಿಸಿದರು.

ಕಾಮರೆಡ್ಡಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಊರಮುಂದಲ ಶಾಲೆಯ ಬಳಿ ನೆಲದ ಮೇಲೆ ಚಾಪೆಹಾಸಿಕೊಂಡು ತಹಶೀಲ್ದಾರ್,ತಾಲೂಕು ಆರೋಗ್ಯಾಧಿಕಾರಿ,ತಾಲೂಕು ಪಂಚಾಯಿತಿ ಆಡಳಿತಾದಿಕಾರಿ,ಗ್ರಾಮಪಂಚಾಯಿತಿ ಪಿಡಿಒ, ಗ್ರಾಮಲೆಕ್ಕಾಧಿಕಾರಿಗಳ ಪಡೆಯನ್ನು ತಮ್ಮೊಟ್ಟಿಗೆ ನೆಲದ ಮೇಲೆ ಕೂರಿಸಿದ್ದರು.ಅಲ್ಲಿಗೆ ಸಮಸ್ಯೆ ಹೊತ್ತು ಬಂದ ನಾಗರೀಕರಿಂದ ಅಹವಾಲು ಸ್ವೀಕರಿಸಿ ಅವರೊಟ್ಟಿಗೆ ತಮ್ಮದೇ ಆದ ಜನಪ್ರಿಯ ಶೈಲಿಯಾದ ತೆಲುಗು ಕನ್ನಡ ಭಾಷೆಯಲ್ಲಿ ಒಡನಾಡುವ ಮೂಲಕ ಅವರ ಪ್ರೀತಿಗೆ ಪಾತ್ರವಾದರು.

ಗಂಗಮ್ಮ ಎಂಬ ಅಜ್ಜಿಯ ಆರೋಗ್ಯ ಸಮಸ್ಯೆಗೆ ಸ್ಪಂಧಿಸಿದ ಶಾಸಕರು ಕೂಡಲೇ ಅಮ್ಮ ಆಂಬುಲೆನ್ಸ್ ಚಾಲಕರನ್ನು ಕರೆದು ಶನಿವಾರವೇ ಇವರ ಹಳ್ಳಿಗೆ ಬಂದು ಅಜ್ಜಿಯನ್ನು ಕರೆದುಕೊಂಡು ಜಿಲ್ಲಾಸ್ಪತ್ರೆಯಲ್ಲಿ ತೋರಿಸಬೇಕು.ಅಲ್ಲಿ ಚಿಕಿತ್ಸೆ ನೀಡಿದರೆ ಸರಿ, ಇಲ್ಲವಾದಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಕೊಡಿಸಿ ಎಂದು ತಾಕೀತು ಮಾಡಿ ಅಜ್ಜಿಯ ಮೊಗದಲ್ಲಿ ಸಂತೋಷ ತಂದರು.

ಗ್ರಾಮದ ಯುವಕ ಮುರಳಿ ಮಾತನಾಡಿ ಮಂಚೇನಹಳ್ಳಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದೆ.ದಯವಿಟ್ಟು ಇಲ್ಲಿಗೆ ನುರಿತ ವೈದ್ಯರನ್ನು ಹಾಕಿಸಿ ಬಡವರ ಕಷ್ಟಕ್ಕೆ ನೆರವಾಗಬೇಕು. ಈಗಿರುವ ವೈದ್ಯರು ಬಡವರಿಂದ ಹಣಸುಲಿಗೆ ಮಾಡುತ್ತಾ,ಆರೋಗ್ಯವನ್ನು ಕಡೆಗಣಿಸುತ್ತಿದ್ದಾರೆ.ಇವರ ಈ ವರ್ತನೆ ನಿಲ್ಲಿಸಿ ನೊಂದು ಬ0ದ ರೋಗಿಗಳಿಗೆ ಔಷದೋ ಪಚಾರ ಮಾಡುವಂತೆ ತಾಕೀತು ಮಾಡಿ ಎಂದಾಗ ಕೂಡಲೇ ತಾಲೂಕು ಆರೋಗ್ಯಾಧಿಕಾರಿಯನ್ನು ಕರೆಸಿ ಈ ಬಗ್ಗೆ ಗಮನಹರಿಸುವಂತೆ ಸೂಚನೆ ನೀಡಿದರು.ಆದಷ್ಟು ಬೇಗ ಮಂಚೇನಹಳ್ಳಿಯಲ್ಲಿ ತಾಲೂಕು ಆರೋಗ್ಯ ಕೇಂದ್ರಕ್ಕೆ ಬೇಕಾದ ಸಿಬ್ಬಂದಿ ಒದಗಿಸಲು ಕ್ರಮವಹಿಸಲಾಗುವುದು ಎಂದು ಸಮಾದಾನ ಹೇಳಿದರು.

ಇದೇ ಗ್ರಾಮಕ್ಕೆ ೫ ಲಕ್ಷ ವೆಚ್ಚದಲ್ಲಿ ಹೈಮಾಸ್ ಲೈಟ್,೬ಲಕ್ಷ ವೆಚ್ಚದಲ್ಲಿ ಶುದ್ದ ನೀರಿನ ಘಟಕ ಸ್ಥಾಪನೆ,೨ ಹೊಸ ರಸ್ತೆ ನಿರ್ಮಾಣ ಸೇರಿ ಒಟ್ಟು ೧೫ ರಿಂದ ೨೦ ಲಕ್ಷದ ಕಾಮಗಾರಿಗಳ ಬೇಡಿಕೆಯಿಟ್ಟಾಗ ಶೀಘ್ರದಲ್ಲಿಯೇ ಇವನ್ನು ಪೂರೈಸು ವುದಾಗಿ ಮುಖಂಡರಿಗೆ ಭರವಸೆ ನೀಡಿದಲ್ಲದೆ, ಚರಂಡಿ ಸಮಸ್ಯೆಯನ್ನು ಖುದ್ದು ವೀಕ್ಷಣೆ ಮಾಡಿದರಲ್ಲದೆ ಸಮಸ್ಯೆ ಮಾಡಿಕೊಂಡಿರುವ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾರಿಗೂ ತೊಂದರೆ ಆಗದಂತೆ ಕಾಮಗಾರಿ ಮುಗಿಸುವುದಾಗಿ ಹೇಳಿ ಉಂಟಾಗಿದ್ದ ವೈಮಸ್ಸನ್ನು ದೂರ ಮಾಡಿದರು.

ಮರಿಮಾಕಲಹಳ್ಳಿ ಗ್ರಾಮಸ್ಥರ ಬೇಡಿಕೆಯಂತೆ ಅಂಬೇಡ್ಕರ್ ಭವನ ನಿರ್ಮಾಣ,ಹೊಸ ಹೈಮಾಸ್ ಲೈಟ್ ಸ್ಥಾಪನೆಗೆ ಒತ್ತು ನೀಡಿದರೆ, ಬುಡುಗ ತಿಮ್ಮನಹಳ್ಳಿ ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು. ಅಲಾಸ್ ತಿಮ್ಮನಹಳ್ಳಿ ಗ್ರಾಮದ ಸರಕಾರಿ ಶಾಲೆಗೆ ಶೌಚಾಲಯ  ನಿರ್ಮಾಣಕ್ಕೆ ಸ್ಥಳದಲ್ಲಿಯೇ ಕಾರ್ಯಾದೇಶ ನೀಡಿದರಲ್ಲದೆ, ಬಿಕ್ಕಲಹಳ್ಳಿ ಗ್ರಾಮದಲ್ಲಿ ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸುವ ಭರವಸೆ ನೀಡಿದರು.

ಉಳಿದಂತೆ ಎಲ್ಲಾ ಗ್ರಾಮಗಳಲ್ಲಿ ಕೇಳಿಬಂದ ವೃದ್ಧಾಪ್ಯ ವೇತನ,ಚರಂಡಿ ಸಮಸ್ಯೆ,ನಿವೇಶನ, ಮನೆನಿರ್ಮಾಣ, ಬಸ್‌ಸೌಕರ್ಯ, ಆರೋಗ್ಯ ಸಮಸ್ಯೆಯನ್ನು ಪರಿಹರಿಸಸಲು ಸಂಬ0ಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ ನೀಡಿ ಅವರ ಬಾಡಿದ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದರು

ಜನನಾಯಕರೆಸಿಕೊಂಡವರು ಜನರ ಸಮಸ್ಯೆಗಳಿಗೆ ಕಣ್ಣಾಗುವುದಾಗಿ ಕೇವಲ ವೇದಿಕೆ ಕಾರ್ಯಕ್ರಮಗಳಲ್ಲಿ ಹೇಳಿದರೆ ಸಾಲದು. ಖುದ್ದು ಗ್ರಾಮಗಳಿಗೇ ಭೇಟಿ ನೀಡಿ ಜನರ ಕಷ್ಟಗಳನ್ನು ಕಣ್ಣಾರೆ ಕಂಡು ಆಲಿಸಿದರೆ ಸಾಕು, ಬೆಟ್ಟದಂತಹ ಕಷ್ಟವಿದ್ದರೂ ಮಂಜಿನAತೆ ಕರಗುತ್ತದೆ ಎಂಬುದಕ್ಕೆ  ಶಾಸಕ ಪ್ರದೀಪ್ ಈಶ್ವರ್ ನಡೆಸುತ್ತಿರುವ ನಮ್ಮ ಶಾಸಕ ನಮ್ಮ ಗ್ರಾಮಕ್ಕೆ ಕಾರ್ಯಕ್ರಮವೇ ಉತ್ತಮ ಉದಾಹರಣೆ ಎನ್ನಬಹುದು.

ಮಂಚೇನಹಳ್ಳಿ ತಾಲೂಕು ಪೋಶೆಟ್ಟಿಹಳ್ಳಿ ಗ್ರಾಮಪಂಚಾಯಿತಿಯ ಮರಿಮಾಕಲಹಳ್ಳಿ, ಬುಡಗತಿಮ್ಮನಹಳ್ಳಿ, ಬಿಕ್ಕಲಹಳ್ಳಿ, ಕಾಮರೆಡ್ಡಿಹಳ್ಳಿ, ಅಲಾಸ್ತಿಮ್ಮನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ್ದ ವೇಳೆ ಮಂಚೇನಹಳ್ಳಿ ಭಾಗದ ಮುಖಂಡರಾದ ಪ್ರಕಾಶ್, ಸುಭ್ರಮಣಿ, ಬಾಲಕೃಷ್ಣ, ಆಶ್ವತ್ಥಪ್ಪ, ಆಂಜಿನಪ್ಪ, ಮಂಚೇನಹಳ್ಳಿ ತಾಲೂಕು ತಹಶೀಲ್ದಾರ್ ದೀಪ್ತಿ,ಇಒ ಹೊನ್ನಯ್ಯ, ತಾಲೂಕು ಆರೋಗ್ಯಾಧಿಕಾರಿ ಚಂದ್ರಮೋಹನ್, ಆರ್.ಐ. ಮಂಜುಳ ಮತ್ತಿತರರು ಇದ್ದರು.