Sunday, 22nd December 2024

Vijay Hazare Trophy: ಶ್ರೇಯಸ್‌ ಅಯ್ಯರ್‌ ಶತಕ; ಕರ್ನಾಟಕಕ್ಕೆ ಬೃಹತ್‌ ಗುರಿ

ಅಹಮದಾಬಾದ್‌: ಭಾರತ ತಂಡಕ್ಕೆ ಕಮ್ ಬ್ಯಾಕ್ ಮಾಡಲು ಎದುರು ನೋಡುತ್ತಿರುವ ಮಧ್ಯಮ ಕ್ರಮಾಂಕದ ಬ್ಯಾಟರ್‌ ಶ್ರೇಯಸ್‌(Shreyas Iyer) ಅಯ್ಯರ್‌ ಪ್ರಸ್ತಕ್ತ ಸಾಗುತ್ತಿರುವ ವಿಜಯ್‌ ಹಜಾರೆ(Vijay Hazare Trophy) ಏಕದಿನ ಕ್ರಿಕೆಟ್‌ ಟೂರ್ನಿಯ ಮೊದಲ ಪಂದ್ಯದಲ್ಲೇ ಭರ್ಜರಿ ಶತಕ ಬಾರಿಸಿ ಮಿಂಚಿದ್ದಾರೆ.

ಶನಿವಾರದ ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿದ ಅಯ್ಯರ್‌ ಕೇವಲ 55 ಎಸೆತಗಳಿಂದ ಅಜೇಯ 114 ರನ್‌ ಬಾರಿಸಿದರು. ಅವರ ಈ ಸ್ಫೋಟಕ ಬ್ಯಾಟಿಂಗ್‌ ವೇಳೆ ಸೊಗಸಾದ 10 ಸಿಕ್ಸರ್‌ ಮತ್ತು 5 ಬೌಂಡರಿ ದಾಖಲಾಯಿತು. ಉಳಿದಂತೆ ಆರಂಭಕಾರ ಆಯುಷ್ ಮ್ಹಾತ್ರೆ(78), ಹಾರ್ದಿಕ್ ತಮೋರ್(84) ಮತ್ತು ಶಿವಂ ದುಬೆ(63
) ಅರ್ಧಶತಕ ಬಾರಿಸಿ ಮಿಂಚಿದರು. ಇವರೆಲ್ಲರ ಬ್ಯಾಟಿಂಗ್‌ ಸಾಹಸದಿಂದ ಮುಂಬೈ ತಂಡ 4 ವಿಕೆಟ್‌ಗೆ 382 ರನ್‌ ಬಾರಿಸಿ ಎದುರಾಳಿ ಕರ್ನಾಟಕಕ್ಕೆ ಬೃಹತ್‌ ಮೊತ್ತದ ಗುರಿ ನೀಡಿದೆ.

ಸದ್ಯ ಗುರಿ ಬೆನ್ನಟ್ಟುತ್ತಿರುವ ಕರ್ನಾಟಕ ತಂಡ 13 ಓವರ್‌ಗೆ ಒಂದು ವಿಕೆಟ್‌ ಕಳೆದುಕೊಂಡು 90 ರನ್‌ ಗಳಿಸಿದೆ. ಗೆಲುವಿಗೆ ಇನ್ನೂ 293 ರನ್‌ ಬಾರಿಸಬೇಕಿದೆ. ನಾಯಕ ಮಾಯಂಕ್‌ ಅಗರ್ವಾಲ್‌(45) ಮತ್ತು ಅನೀಶ್ ಕೆ.ವಿ (18) ಬ್ಯಾಟಿಂಗ್‌ ನಡೆಸುತ್ತಿದ್ದಾರೆ.

ಇದನ್ನೂ ಓದಿ SA vs PAK: ಹೆನ್ರಿಚ್ ಕ್ಲಾಸೆನ್‌ಗೆ ದಂಡದ ಬರೆ

ದೇಶೀಯ ಕ್ರಿಕೆಟ್‌ ಆಡಲು ನಿರಾಕರಿಸಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾದ ಬಳಿಕ ಶ್ರೇಯಸ್‌ ಅಯ್ಯರ್‌ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡರು. ಅವರು ಭಾರತ ಪರ ಕೊನೆಯ ಬಾರಿಗೆ ಆಡಿದ್ದು ಆಗಸ್ಟ್‌ನಲ್ಲಿ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಇದಾಗಿತ್ತು. ಸದ್ಯ ದೇಶೀಯ ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್‌ ನಡೆಸುತ್ತಿರುವ ಅಯ್ಯರ್‌ ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯುವ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಇವರ ನಾಯಕತ್ವದಲ್ಲೇ ಮುಂಬೈ ತಂಡ ಕೆಲ ದಿನಗಳ ಹಿಂದೆ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಚಾಂಪಿಯನ್‌ಪಟ್ಟ ಅಲಂಕರಿಸಿತ್ತು.

ಉಭಯ ತಂಡಗಳು

ಮುಂಬೈ: ಆಂಗ್ಕ್ರಿಶ್ ರಘುವಂಶಿ, ಆಯುಷ್ ಮ್ಹಾತ್ರೆ, ಶ್ರೇಯಸ್ ಅಯ್ಯರ್ (ನಾಯಕ), ಸೂರ್ಯಕುಮಾರ್ ಯಾದವ್, ಹಾರ್ದಿಕ್ ತಮೋರ್ (ವಿ.ಕೀ), ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ಅಥರ್ವ ಅಂಕೋಲೇಕರ್, ತನುಷ್ ಕೋಟ್ಯಾನ್, ಶಾರ್ದೂಲ್ ಠಾಕೂರ್, ಎಂ ಜುನೇದ್ ಖಾನ್.

ಕರ್ನಾಟಕ: ಮಯಾಂಕ್‌ ಅಗರ್ವಾಲ್‌(ನಾಯಕ), ಅನೀಶ್ ಕೆವಿ, ನಿಕಿನ್ ಜೋಸ್, ಸ್ಮರಣ್ ರವಿಚಂದ್ರನ್, ಅಭಿನವ್ ಮನೋಹರ್, ಕೃಷ್ಣನ್ ಶ್ರೀಜಿತ್ (ವಾಕ್), ಶ್ರೇಯಸ್ ಗೋಪಾಲ್, ವಿಜಯಕುಮಾರ್ ವೈಶಾಕ್, ಪ್ರವೀಣ್ ದುಬೆ, ವಾಸುಕಿ ಕೌಶಿಕ್, ವಿದ್ಯಾಧರ್ ಪಾಟೀಲ್.