Saturday, 23rd November 2024

ಐಐಟಿ ಮದ್ರಾಸ್: 66 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು

ಚೆನ್ನೈ : ಐಐಟಿ ಮದ್ರಾಸ್‌ನಲ್ಲಿ 66 ವಿದ್ಯಾರ್ಥಿಗಳು ಹಾಗೂ 5 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಈ ಹಿನ್ನೆಲೆ ಕ್ಯಾಂಪಸ್‌ನ್ನು ತಾತ್ಕಾಲಿಕವಾಗಿ ಸೀಲ್‌ಡೌನ್ ಮಾಡಲಾಗಿದೆ.

ಮದ್ರಾಸ್ ಐಐಟಿಯಲ್ಲಿನ 66 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲದೇ 5 ಮಂದಿ ಸಿಬ್ಬಂದಿಗೂ ಸೋಂಕು ತಗುಲಿದೆ. ಈ ಹಿನ್ನೆಲೆ ಎಲ್ಲರಿಗೂ ತಮ್ಮ ಹಾಸ್ಟೆಲ್ ​ಗಳಲ್ಲೇ ಕ್ವಾರಂಟೈನ್​ ಆಗಲು ಸೂಚಿಸಲಾಗಿದ್ದು, ನಗರದಿಂದ ಬರುತ್ತಿದ್ದ ಸಿಬ್ಬಂದಿ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ವರ್ಕ್​​ ಫ್ರಂ ಹೋಂ ಅವಕಾಶ ನೀಡಲಾಗಿದೆ.

ಕ್ಯಾಂಪಸ್‌ನ್ನು, ಶಿಕ್ಷಣ ಸಂಸ್ಥೆಯ ಲ್ಯಾಬ್​, ಗ್ರಂಥಾಲಯ ಹಾಗೂ ಎಲ್ಲಾ ವಿಭಾಗ ಗಳನ್ನು ಸೀಲ್ ಡೌನ್ ಮಾಡಲಾಗಿದೆ.