ಕಜಾನ್: ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ನಡುವೆ(Russia-Ukraine War), ಕಜಾನ್‌ನಲ್ಲಿರುವ ಮೂರು ವಸತಿ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ಉಕ್ರೇನ್ ರಷ್ಯಾದ ಮೇಲೆ ಡ್ರೋನ್ ದಾಳಿ ನಡೆಸಿದೆ(Drone Attack). ಭೀಕರ ದಾಳಿಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಇದು ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ 9/11 ಅವಳಿ ಕಟ್ಟಡ ದಾಳಿಯಂತೆ ಕಾಣುತ್ತಿದೆ. ಇನ್ನು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಪ್ರಾಣ ಹಾನಿಯ ಪ್ರಮಾಣ ಇನ್ನೂ ತಿಳಿದುಬಂದಿಲ್ಲ. ದಾಳಿಯ ಮಧ್ಯೆ, ಕಜನ್ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
#BreakingNews 🚨 Drones attack on Kazan high-rise building, residents evacuated pic.twitter.com/Fa30uxzUCJ
— KV Iyyer – BHARAT 🇮🇳🇮🇱 (@BanCheneProduct) December 21, 2024
ಕಜಾನ್‌ನಲ್ಲಿ ಉಕ್ರೇನ್ ಬಹುಮಹಡಿ ಕಟ್ಟಡಗಳನ್ನು ಗುರಿಯಾಗಿಸಿ ಉಕ್ರೇನ್ ಎಂಟು ಡ್ರೋನ್ ದಾಳಿಗಳನ್ನು ನಡೆಸಿದೆ. ದಾಳಿಯಲ್ಲಿ ಕಟ್ಟಡಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ದಾಳಿಗೆ ಒಳಗಾದ ಕಟ್ಟಡಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗುತ್ತಿದೆ.
ಸ್ಥಳೀಯ ಅಧಿಕಾರಿಗಳ ಪ್ರಕಾರ, ಡ್ರೋನ್ ದಾಳಿಗಳು ಮುಂಚೂಣಿಯಿಂದ 600 ಮೈಲುಗಳಷ್ಟು (1,000 ಕಿಲೋಮೀಟರ್) ದೂರದಲ್ಲಿರುವ ಟಾಟರ್ಸ್ತಾನ್ ಪ್ರದೇಶದ ಕಜಾನ್ ನಗರದಲ್ಲಿ ವಸತಿ ಕಟ್ಟಡಗಳನ್ನು ಹಾನಿಗೊಳಿಸಿದವು. ಎಂಟು ಡ್ರೋನ್‌ಗಳು ನಗರದ ಮೇಲೆ ದಾಳಿ ನಡೆಸಿವೆ ಎಂದು ಟಾಟರ್ಸ್ತಾನ್ ಗವರ್ನರ್ ರುಸ್ತಮ್ ಮಿನ್ನಿಖಾನೋವ್ ಅವರ ತಿಳಿಸಿದೆ. ಒಂದು ಡ್ರೋನ್ ಅನ್ನು ಹೊಡೆದುರುಳಿಸಲಾಗಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
Russia's Kazan airport has temporarily halted flight arrivals and departures, following a Ukrainian drone attack on the city, reports Reuters citing Russia's aviation watchdog Rosaviatsia
— ANI (@ANI) December 21, 2024
ರಷ್ಯಾದ ಕಜಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ರಷ್ಯಾದ ಕಜಾನ್ ವಿಮಾನ ನಿಲ್ದಾಣವು ನಗರದ ಮೇಲೆ ಉಕ್ರೇನಿಯನ್ ಡ್ರೋನ್ ದಾಳಿಯ ನಂತರ ವಿಮಾನ ಆಗಮನ ಮತ್ತು ನಿರ್ಗಮನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಉಕ್ರೇನ್‌ನ ಈ ಕಜಾನ್ ಡ್ರೋನ್ ದಾಳಿಯು ಎರಡು ದಿನಗಳಲ್ಲಿ ಆ ದೇಶವು ರಷ್ಯಾದ ಮೇಲೆ ನಡೆಸಿದ ಎರಡನೇ ದಾಳಿಯಾಗಿದೆ. ರಷ್ಯಾದ ಕುರ್ಸ್ಕ್ ಪ್ರದೇಶದ ರೈಲ್ಸ್ಕ್ ಪಟ್ಟಣದ ಮೇಲೆ ಉಕ್ರೇನಿಯನ್ ಕ್ಷಿಪಣಿ ದಾಳಿಯಲ್ಲಿ ಶುಕ್ರವಾರ ಒಂದು ಮಗು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು 10 ಮಂದಿ ಗಾಯಗೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಲ್ಯಾಂಡಿಂಗ್ ವೇಳೆ ರಷ್ಯಾ ವಿಮಾನಕ್ಕೆ ಬೆಂಕಿ; ಇಲ್ಲಿದೆ ಭಯಾನಕ ವಿಡಿಯೊ