Sunday, 22nd December 2024

Anmolpreet Singh: 35 ಎಸೆತಗಳಲ್ಲಿ ಶತಕ ಬಾರಿಸಿ ಯೂಸಫ್‌ ಪಠಾಣ್‌ ದಾಖಲೆ ಮುರಿದ ಅನ್ಮೋಲ್‌ಪ್ರೀತ್‌ ಸಿಂಗ್‌!

Anmolpreet Singh breaks 14-year-old record, hits fastest List A century by an Indian

ಅಹಮದಾಬಾದ್‌: ಪಂಜಾಬ್‌ನ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಅನ್ಮೋಲ್‌ಪ್ರೀತ್ ಸಿಂಗ್ (Anmolpreet Singh) ಮೂರನೇ ವೇಗದ ಲಿಸ್ಟ್-ಎ ಶತಕ ಸಿಡಿಸಿದ್ದಾರೆ. 35 ಎಸೆತಗಳಲ್ಲಿ ಶತಕ ಬಾರಿಸಿದ ಅನ್ಮೋಲ್‌ಪ್ರೀತ್ ಸಿಂಗ್‌ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಬಾರಿಸಿದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಜಾಕ್ ಫ್ರೇಸರ್-ಮೆಗರ್ಕ್ (29 ಎಸೆತ) ಮತ್ತು ಎಬಿ ಡಿ ವಿಲಿಯರ್ಸ್ (31 ಎಸೆತ) ಅವರು ಈ ಸಾಧಕರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಅಂದ ಹಾಗೆ ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಆ ಮೂಲಕ ಮಾಜಿ ಬ್ಯಾಟ್ಸ್‌ಮನ್‌ ಯೂಸಫ್‌ ಪಠಾಣ್‌ 40 ಎಸೆತಗಳಲ್ಲಿ ಶತಕ) ಅವರ 14 ವರ್ಷಗಳ ದಾಖಲೆಯನ್ನು ಮುರಿದಿದ್ದರು.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದ ಎ ಗ್ರೌಂಡ್‌ನಲ್ಲಿ ಶನಿವಾರ ನಡೆದಿದ್ದ ವಿಜಯ್ ಹಝಾರೆ ಟ್ರೋಫಿ ಟೂರ್ನಿಯ ಅರುಣಾಚಲ ಪ್ರದೇಶ ವಿರುದ್ಧ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದ ಅನ್ಮೋಲ್‌ಪ್ರೀತ್ ಸ್ಪೋಟಕ ಬ್ಯಾಟ್‌ ಮಾಡಿ 11 ಬೌಂಡರಿ ಮತ್ತು 8 ಸಿಕ್ಸರ್‌ಗಳ ಸಹಾಯದಿಂದ ಶತಕವನ್ನು ಪೂರೈಸಿದರು. ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಪಂಜಾಬ್‌ ಬ್ಯಾಟ್ಸ್‌ಮನ್‌ ಅರುಣಾಚಲ ಪ್ರದೇಶದ ಎಲ್ಲಾ ಬೌಲರ್‌ಗಳನ್ನು ಬೆಂಡೆತ್ತಿದರು.

Vijay Hazare Trophy: ಶ್ರೇಯಸ್‌ ಅಯ್ಯರ್‌ ಶತಕ; ಕರ್ನಾಟಕಕ್ಕೆ ಬೃಹತ್‌ ಗುರಿ

ಎಡಗೈ ಸ್ಪಿನ್ನರ್ ಹಾರ್ದಿಕ್ ವರ್ಮಾ 9.52ರ ಎಕಾನಮಿ ರೇಟ್‌ನಲ್ಲಿ ರನ್‌ಗಳನ್ನು ನೀಡಿದರು. ಆದರೆ, ಅನ್ಮೋಲ್‌ಪ್ರೀತ್‌ ಸಿಂಗ್‌ ನಿರ್ದಿಷ್ಟವಾಗಿ ಆಫ್-ಸ್ಪಿನ್ನರ್ ಟೆಚಿ ನೆರಿಯನ್ನು ಗುರಿಯಾಗಿಸಿಕೊಂಡರು, ಅವರು ತಮ್ಮ ಏಕೈಕ ಓವರ್‌ನಲ್ಲಿ 31 ರನ್‌ಗಳನ್ನು ನೀಡಿದರು. ಅನ್ಮೋಲ್‌ಪ್ರೀತ್ ಅವರ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಪಂಜಾಬ್ ತಂಡ, ಅರುಣಾಚಲ ಪ್ರದೇಶದ 164 ರನ್‌ಗಳನ್ನು ಕೇವಲ 12.5 ಓವರ್‌ಗಳಲ್ಲಿ ಬೆನ್ನಟ್ಟಿತು.

ಅನ್ಮೋಲ್‌ಪ್ರೀತ್‌ ಸಿಂಗ್‌ ಕೇವಕ 45 ಎಸೆತಗಳಲ್ಲಿ 115 ರನ್ ಗಳಿಸಿದರು. ಮೂರು ಅಂಕಿಗಳ ಗಡಿಯನ್ನು ತಲುಪಿದ ನಂತರ ಅವರು ಒಂದು ಸಿಕ್ಸರ್ ಮತ್ತು ಇನ್ನೊಂದು ಬೌಂಡರಿ ಬಾರಿಸಿದರು. ಆದರೆ ಅಭಿಷೇಕ್ ಶರ್ಮಾ ಅವರ ಆರಂಭಿಕ ಜೊತೆಗಾರ ಪ್ರಭ್‌ಸಿಮ್ರಾನ್ ಸಿಂಗ್ 25 ಎಸೆತಗಳಲ್ಲಿ 35 ರನ್ ಗಳಿಸಿ ಅಜೇಯರಾಗಿ ಉಳಿದರು.

2015ರಲ್ಲಿ ಶತಕ ಬಾರಿಸಿದ್ದ ಎಬಿಡಿ

2015ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 44 ಎಸೆತಗಳಲ್ಲಿ 149 ರನ್ ಗಳಿಸಿದ ಡಿವಿಲಿಯರ್ಸ್ ಲಿಸ್ಟ್-ಎ ಶತಕಗಳ ದಾಖಲೆಯನ್ನು ಮುರಿದಿದ್ದರು. ಇದು ಇನ್ನೂ ವೇಗದ ಏಕದಿನ ಶತಕವಾಗಿದೆ. ಇದಕ್ಕೂ ಮುನ್ನ 2014ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನ್ಯೂಜಿಲೆಂಡ್‌ನ ಕೋರಿ ಆಂಡರ್ಸನ್ 36 ಎಸೆತಗಳಲ್ಲಿ ಈ ದಾಖಲೆ ಬರೆದಿದ್ದರು. 2023ರ ಅಕ್ಟೋಬರ್‌ನಲ್ಲಿ ಮಾರ್ಷ್ ಕಪ್‌ನಲ್ಲಿ ಫ್ರೇಸರ್ ಮೆಗರ್ಕ್ ಕೇವಲ 29 ಎಸೆತಗಳಲ್ಲಿ ಶತಕ ಗಳಿಸಿ ಎಬಿ ಡಿ ವಿಲಿಯರ್ಸ್‌ನ ಲಿಸ್ಟ್-ಎ ದಾಖಲೆಯನ್ನು ಮುರಿದಿದ್ದರು.

2025ರ ಐಪಿಎಲ್‌ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್‌

ಅನ್ಮೋಲ್‌ಪ್ರೀತ್‌ ಸಿಂಗ್‌ ಈ ಹಿಂದೆ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಪರ ಐಪಿಎಲ್ ಆಡಿದ್ದರು. ಆದಾಗ್ಯೂ, ಅವರು ಸೀಮಿತ ಯಶಸ್ಸನ್ನು ಹೊಂದಿದ್ದರು ಮತ್ತು ಇತ್ತೀಚಿನ ನಡೆದಿದ್ದ 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಅವರನ್ನು ಖರೀದಿಸಲು ಆಸಕ್ತಿ ತೋರಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಅನ್‌ಸೋಲ್ಡ್‌ ಆಗಿದ್ದರು.

ಈ ಸುದ್ದಿಯನ್ನು ಓದಿ: Prithvi Shaw: ವಿಜಯ್‌ ಹಝಾರೆ ಟ್ರೋಫಿ ಮುಂಬೈ ತಂಡದಿಂದಲೂ ಪೃಥ್ವಿ ಶಾ ಔಟ್‌!