ಶಿವಮೊಗ್ಗ: ಟಿವಿ ರಿಮೋಟ್ ಕೊಡಲಿಲ್ಲ ಎಂಬ ಕಾರಣಕ್ಕೆ ಇಲಿ ಪಾಷಾಣ ಸೇವಿಸಿ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವುದು ಜಿಲ್ಲೆಯ ಭದ್ರಾವತಿ ತಾಲೂಕಿನ ಸೂಳೆಬೈಲಿನಲ್ಲಿ (Shivamogga News) ನಡೆದಿದೆ. ಮೃತ ಬಾಲಕಿಯನ್ನು ಭದ್ರಾವತಿ ತಾಲೂಕಿನ ಕಲ್ಲಿಹಾಳ್ ಗ್ರಾಮದ ಸಹನಾ (16) ಎಂದು ಗುರುತಿಸಲಾಗಿದೆ.
ಟಿವಿ ರಿಮೋಟ್‍ಗಾಗಿ ಮಕ್ಕಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಮೊಮ್ಮಗಳಿಗೆ ಅಜ್ಜಿ ಬೈದಿದ್ದಾರೆ. ಹೀಗಾಗಿ ಮನನೊಂದು ಬಾಲಕಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | Drone Attack: 9/11 ದಾಳಿಯನ್ನೇ ಹೋಲುವಂತೆ ರಷ್ಯಾದ ಮೇಲೆ ಉಕ್ರೇನ್ ಅಟ್ಯಾಕ್- ವಸತಿ ಕಟ್ಟಡಗಳಿಗೆ ಡ್ರೋನ್ ಡಿಕ್ಕಿ
ಪತಿ ಮೇಲೆ ಅನೈತಿಕ ಸಂಬಂಧ ಶಂಕೆ; ಬೇಸತ್ತು ನೇಣಿಗೆ ಶರಣಾದ ಮಹಿಳೆ
ಬೆಂಗಳೂರು: ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ (Self Harming) ಮಾಡಿಕೊಂಡ ಘಟನೆ ನಗರದ ಬಾಗಲಗುಂಟೆಯಲ್ಲಿ ನಡೆದಿದೆ. ಅನೈತಿಕ ಸಂಬಂಧವಿದೆ ಎಂದು ಅನುಮಾನದಿಂದ ಪತಿ ಜತೆ ಜಗಳ ಮಾಡಿಕೊಂಡ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡವರು. ಪತಿ ನವೀನ್ ಜತೆ ಜಗಳ ಮಾಡಿಕೊಂಡು ರೂಮ್ ಲಾಕ್ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ 9 ವರ್ಷಗಳ ಹಿಂದೆ ಮದುವೆ ಆಗಿತ್ತು. ಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು, ಆದರೆ ಬರ ಬರುತ್ತಾ ಪತಿ ನವೀನ್ ಮೇಲೆ ಪತ್ನಿಗೆ ಅನುಮಾನ ಶುರುವಾಗಿದೆ. ಪತಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆಂದು ಶಂಕಿಸಿ ಪತ್ನಿ ಐಶ್ವರ್ಯಾ ಜಗಳ ಮಾಡಿದ್ದಾರೆ. ಇತ್ತೀಚೆಗೆ ಧರ್ಮಸ್ಥಳಕ್ಕೆಂದು ನವೀನ್ ಟ್ರಿಪ್ ಹೋಗಿದ್ದರು. ಅವರು ಮನೆಗೆ ವಾಪಸ್ ಬಂದಾಗ ಮತ್ತೆ ಪತಿ ಹಾಗೂ ಪತ್ನಿ ಜಗಳ ನಡೆದಿದೆ. ಬಳಿಕ ಪತಿ ಮೇಲೆ ಸಿಟ್ಟಿನಿಂದ ಪತ್ನಿ ಐಶ್ವರ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಸಾವು
ಶಿವಮೊಗ್ಗ: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಶಿವಮೊಗ್ಗದ ನಂಜಪ್ಪ ಲೇಔಟ್‌ನಲ್ಲಿರುವ ಇಂಪಿರಿಯರ್ ಕಾಲೇಜಿನಲ್ಲಿ ಬುಧವಾರ (ಡಿ. 18) ನಡೆದಿದೆ. ಮುಬಷಿರ್ ಬಾನು (17) ಮೃತ ದುರ್ದೈವಿ. ದ್ವಿತೀಯ ಪಿಯುಸಿ ಓದುತ್ತಿದ್ದ ಮುಬಷಿರ್ ಬಾನು, ಕಾಲೇಜಿನಲ್ಲಿ ಪ್ರಜ್ಞೆ ತಪ್ಪಿ ಏಕಾಏಕಿ ಹಿಮ್ಮುಖವಾಗಿ ಬಿದ್ದಿದ್ದಾಳೆ. ಪ್ರೌಢ ಶಾಲೆಯ ಶಿಕ್ಷಕರು ಕಾಲೇಜಿಗೆ ಬಂದ ಹಿನ್ನೆಲೆಯಲ್ಲಿ ಮಾತನಾಡಿಸಲೆಂದು ಪ್ರಿನ್ಸಿಪಾಲ್ ಕಚೇರಿಗೆ ಬರುತ್ತಿದ್ದ ವೇಳೆ ಲೋ ಬಿಪಿಯಿಂದ ಮೂರ್ಛೆ ತಪ್ಪಿ ಬಿದ್ದಿದ್ದಾಳೆ. ಈ ವೇಳೆ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾಳೆ. ಯುವತಿ ಬಿದ್ದು ಸಾವನ್ನಪ್ಪಿದ ವಿಡಿಯೋ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.