Sunday, 22nd December 2024

Pushpa 2 Stampede: ಕಾಲ್ತುಳಿತ ಆಗಿದೆ ಅಂದ್ರೆ ಸಿನಿಮಾ ಹಿಟ್‌ ಆಗುತ್ತೆ ಅಂದಿದ್ರಂತೆ ಅಲ್ಲು ಅರ್ಜುನ್‌!

pushpa 2 stampede

ಹೈದರಾಬಾದ್‌: ನಟ ಅಲ್ಲು ಅರ್ಜುನ್‌(Allu Arjun) ನಟನೆಯ ಪುಷ್ಪಾ 2 ಸಿನಿಮಾ ಬ್ಲಾಕ್‌ ಬಾಸ್ಟರ್‌ ಹಿಟ್‌ ಸುದ್ದಿ ಒಂದು ಕಡೆಯಾದರೆ, ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಕಾಲ್ತುಳಿತ ದುರಂತ(Pushpa 2 Stampede) ಮತ್ತೊಂದೆಡೆ ಭಾರೀ ಸದ್ದು ಮಾಡುತ್ತಿದೆ. ಇಂದು ತೆಲಂಗಾಣ ಸದನದಲ್ಲೂ ಈ ವಿಚಾರದ ಬಗ್ಗೆ ಗಂಭೀರ ಚರ್ಚೆ ನಡೆದಿದ್ದು, ನಟ ಅಲ್ಲು ಅರ್ಜುನ್‌ ಬಗ್ಗೆ AIMIM ಶಾಸಕ ಅಕ್ಬರುದ್ದೀನ್‌ ಓವೈಸಿ(Akbaruddin Owaisi) ಆರೋಪವೊಂದನ್ನು ಮಾಡಿದ್ದಾರೆ. ಕಾಲ್ತುಳಿತ ನಡೆದಿದೆ ಎಂದು ಗೊತ್ತಿದ್ದರೂ ನಟ ಅಬ್ಬರ ರ್ಯಾಲಿಯಲ್ಲೇ ಮುಳುಗಿದ್ದರು ಎಂದು ಅಕ್ಬರುದ್ದೀನ್‌ ಹೇಳಿದ್ದಾರೆ.

ಅಕ್ಬರುದ್ದೀನ್‌ ಓವೈಸಿ ಹೇಳಿದ್ದೇನು?

ವಿಧಾನಸಭೆ ಮಾತನಾಡಿದ ಅಕ್ಬರುದ್ದೀನ್, ಪ್ರಸಿದ್ಧ ಚಲನಚಿತ್ರ ತಾರೆಯ ಹೆಸರನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಏಕೆಂದರೆ ಅವರಿಗೆ ಯಾವುದೇ ‘ಹೆಚ್ಚು ಪ್ರಾಮುಖ್ಯತೆ’ ನೀಡಲು ಬಯಸುವುದಿಲ್ಲ. ನನಗೆ ಬಂದ ಮಾಹಿತಿಯ ಪ್ರಕಾರ, ಚಿತ್ರ ವೀಕ್ಷಿಸಲು ಥಿಯೇಟರ್‌ಗೆ ಹೋದ ತಾರೆಗೆ ಅದು ಸಂಭವಿಸಿದಾಗ ಸಮಸ್ಯೆಯ ಬಗ್ಗೆ ತಿಳಿಸಲಾಯಿತು. ನೂಕುನುಗ್ಗಲು ಉಂಟಾಗಿ ಇಬ್ಬರು ಮಕ್ಕಳು ಬಿದ್ದಿದ್ದಾರೆ, ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಕೂಡ ತಿಳಿಸಿದ್ದಾರೆ. ಚಿತ್ರನಟ ಅವರತ್ತ ತಿರುಗಿ, ಮುಗುಳ್ನಕ್ಕು, ಈಗ ಚಿತ್ರ ಹಿಟ್ ಆಗಲಿದೆ ಎಂದರು.

ಸಾವಿನ ಬಗ್ಗೆ ತಿಳಿದಿದ್ದರೂ, ನಟನು ಚಲನಚಿತ್ರವನ್ನು ವೀಕ್ಷಿಸಿದನು ಮತ್ತು ಸಂತ್ರಸ್ತರ ಬಗ್ಗೆ ತಿಳಿದುಕೊಳ್ಳುವ ಬದಲು ಹೊರಡುವಾಗ ತನ್ನ ಅಭಿಮಾನಿಗಳತ್ತ ಕೈ ಬೀಸಿದನು ಎಂದು ಅಕ್ಬರುದ್ದೀನ್ ಹೇಳಿಕೊಂಡಿದ್ದಾನೆ. ಒಬ್ಬ ಮಹಿಳೆ ಸಾಯುತ್ತಾಳೆ, ಇಬ್ಬರು ಚಿಕ್ಕ ಮಕ್ಕಳು ಕಾಲ್ತುಳಿತದಲ್ಲಿದ್ದಾರೆ, ಅವರಲ್ಲಿ ಒಬ್ಬರು ಕೋಮಾದಲ್ಲಿದ್ದಾರೆ. ಆ ಸಂಭಾವಿತ ವ್ಯಕ್ತಿ ಆ ಕ್ಷಣದಲ್ಲಿ ಹೋಗಿ ಕೇಳಲು ಮತ್ತು ನೋಡಲು ಚಿಂತಿಸುವುದಿಲ್ಲ ಮತ್ತು ಹಾಗೆ ಬೀಸುತ್ತಾ ಹೋಗುತ್ತಾನೆ ಎಂದು ಅವರು ಖಾರವಾಗಿ ಹೇಳಿದರು.

ರೇವಂತ್‌ ರೆಡ್ಡಿಯೂ ಕಿಡಿ

ವಿಧಾನಸಭೆಯಲ್ಲಿ ರೇವಂತ್ ರೆಡ್ಡಿ ಇದೇ ವಿಚಾರದ ಕುರಿತು ಮಾತನಾಡಿದ್ದು, ಸಂಧ್ಯಾ ಥಿಯೇಟರ್‌ಗೆ ಬರಲು ಡಿಸೆಂಬರ್ 2ರಂದು ಹೀರೋ ಅಲ್ಲುಅರ್ಜುನ್ ಅರ್ಜಿ ಸಲ್ಲಿಸಿದ್ದು, 3ರಂದು ಪೊಲೀಸರು ನಿರಾಕರಿಸಿದ್ದರಂತೆ. ಆದರೂ ಅಲ್ಲು ಅರ್ಜುನ್ ಡಿಸೆಂಬರ್ 4ರಂದು ಥಿಯೇಟರ್ ಗೆ ಆಗಮಿಸಿದ್ದರಂತೆ. ಪೊಲೀಸರು ಅನುಮತಿ ನಿರಾಕರಿಸಲು ಕಾರಣವನ್ನು ತಿಳಿಸಿರುವ ರೇವಂತ್ ರೆಡ್ಡಿ, ಥಿಯೇಟರ್‌ಗೆ ಒಂದೇ ದಾರಿಯಿದ್ದು, ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಪೊಲೀಸರು ಮೊದಲೇ ಮಾಹಿತಿ ನೀಡಿದ್ದರಂತೆ. ಈ ಎಲ್ಲರ ನಡುವೆಯೂ ಅಲ್ಲು ಅರ್ಜುನ್ ಥಿಯೇಟರ್ ಬಳಿ ಆಗಮಿಸಿದ್ದ ಕಾರಣ ಸಾವಿರಾರು ಅಭಿಮಾನಿಗಳು ಮುಗಿಬಿದ್ದ ಕಾರಣ ಪರಿಸ್ಥಿತಿ ಕೈ ಮೀರಿತ್ತು ಎಂದು ವಿವರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Pushpa 2 Movie: ‘ಪುಷ್ಪ 2’ ಚಿತ್ರ ಪ್ರದರ್ಶನದ ವೇಳೆ ಮತ್ತೊಂದು ಅವಘಡ; ಥಿಯೇಟರ್‌ನಲ್ಲಿ ವ್ಯಕ್ತಿಯ ಶವ ಪತ್ತೆ