Sunday, 22nd December 2024

BBK 11: ನೀವು ಈ ಆಟಕ್ಕೆ ಫಿಟ್​ ಇಲ್ಲ: ಚೈತ್ರಾಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್

Chaithra Kundapura and Kichcha Sudeep (1)

ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) 12ನೇ ವಾರದ ಇಂದಿನ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಮೇಲೆ ಎಲ್ಲರ ಕಣ್ಣಿದೆ. ಈ ವಾರ ಟಾಸ್ಕ್​ನಲ್ಲಿ ಅನೇಕ ಕಡೆಗಳಲ್ಲಿ ಎಡವಿದ್ದ ಚೈತ್ರಾ ಕುಂದಾಪುರ ಅವರಿಗೆ ಕಿಚ್ಚ ಸುದೀಪ್ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಅದರಂತೆ ಇಂದು ಸುದೀಪ್ ಅವರು ಚೈತ್ರಾ ಅವರ ಮೈಚಳಿ ಬಿಡಿಸಿದ್ದಾರೆ. ನೀವು ಈ ಆಟಕ್ಕೆ ಫಿಟ್ ಇಲ್ಲ ಎಂದು ಎಲ್ಲರ ಮುಂದೆಯೇ ನೇರವಾಗಿ ನುಡಿದಿದ್ದಾರೆ.

ಈ ವಾರದ ಟಾಸ್ಕ್ ಮಧ್ಯೆ ಉಸ್ತುವಾರಿ ವಹಿಸಿಕೊಂಡಿದ್ದ ಚೈತ್ರಾ ಕುಂದಾಪುರ ತೆಗೆದುಕೊಂಡ ಕೆಲವು ನಿರ್ಧಾರಗಳು ಅನೇಕ ಕೆಂಗಣ್ಣಿಗೆ ಗುರಿಯಾಯಿತು. ಇದರ ಪರಿಣಾಮ ಈ ವಾರದ ಕಳಪೆ ಪಟ್ಟ ಪಡೆದು ಜೈಲಿಗೆ ಹೋದರು. ಬಿಗ್‌ ಬಾಸ್‌ ನೀಡಿದ್ದ ಕೆಲವು ಟಾಸ್ಕ್‌ಗಳ ಉಸ್ತುವಾರಿಯಾಗಿದ್ದ ಚೈತ್ರಾ ತಂಡಗಳ ನಡುವೆ ಪಕ್ಷಪಾತಿ ನೀತಿ ಅನುಸರಿಸಿದರು ಎಂದು ಹೇಳಿರುವ ಮನೆಯ ಇತರ ಸ್ಪರ್ಧಿಗಳು ಈ ವಾರದ ಕಳಪೆ ಪಟ್ಟವನ್ನು ಚೈತ್ರಾ ಅವರಿಗೆ ನೀಡಿದರು.

ಉಸ್ತುವಾರಿಗಳು ಜವಾಬ್ದಾರಿಗಳನ್ನು ಮರೆತು ಆಟದ ದಾರಿಯನ್ನು ತಪ್ಪುಸುತ್ತಿದ್ದಾರೆ. ಮಾತಿನ ಮಿತಿಗಳು ಮಿರುತ್ತಾ ಹೋಗುತ್ತಿವೆ ಎಂದು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಆರಂಭಿಸಿದ ಸುದೀಪ್ ಅವರು ಚೈತ್ರಾಗೆ ಅನೇಕ ವಿಚಾರಗಳನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ. ಸುದೀಪ್​ ಮನೆ ಮಂದಿಗೆ ಒಂದು ಅವಕಾಶ ಕೊಟ್ಟಿದ್ದಾರೆ. ಯಾರಿಗೆಲ್ಲಾ ನಾಮಿನೇಷನ್​ ಮಾಡುವ ಅವಕಾಶ ಸಿಕ್ಕಿಲ್ಲ ಈಗ ನಾನು ಅವಕಾಶ ಮಾಡಿಕೊಡುತ್ತೇನೆ ಎಂದು ಹೇಳಿದ್ದಾರೆ.

ಆಗ ಹೆಚ್ಚಿನವರು ಚೈತ್ರಾ ಕುಂದಾಪುರ ಅವರ ಹೆಸರನ್ನೇ ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಚೈತ್ರಾ ಮೂರು ಬಾರಿ ಕಳಪೆ ಕೊಡುತ್ತಾರೆ ಸರ್, ಆ ಮೂರು ಬಾರಿಯೂ ಉಸ್ತುವಾರಿ ಬಗ್ಗೆ ಕಾರಣ ಕೊಡುತ್ತಾರೆ. ಅದು ಒಳಗಡೆ ಎಷ್ಟು ಕುಗ್ಗಿಸುತ್ತೆ ಅಂತ ನಮಗೆ ಮಾತ್ರ ಗೊತ್ತು ಅಂತ ಅಳುತ್ತಾ ಹೇಳಿದ್ದಾರೆ.

ಇದಕ್ಕೆ ಉತ್ತರ ಕೊಟ್ಟ ಸುದೀಪ್, ಯಾರು ನಿಮ್ಮನ್ನು ಕುಗ್ಗಿಸಿದ್ದಾರೆ ಹೇಳಿ ಅಂತ ನೇರವಾಗಿ ಕೇಳಿದ್ದಾರೆ. ಆಗ ಚೈತ್ರಾ, ಒಂದಿಷ್ಟು ಜನ ನನ್ನ ಮೇಲೆ ಒಪಿನಿಯನ್ ತೆಗೆದುಕೊಂಡಿದ್ದಾರೆ ಅದು ನನ್ನನ್ನು ಕುಗ್ಗುಸಿದೆ ಎಂದು ಹೇಳಿದ್ದಾರೆ. ಆಗ ಕಿಚ್ಚ, ಹಾಗಾದ್ರೆ ನೀವು ತೆಗೆದುಕೊಳ್ಳವ ಹೆಸರು ಅವರನ್ನು ಕುಗ್ಗಿಸುವುದಿಲ್ವ, ಬಾಣ ಕೊಡೋದಕ್ಕೆ ರೆಡಿ ಇದ್ದೀರಾ ಅಂದ್ಮೇಲೆ ಬಾಣ ತೆಗೆದುಕೊಳ್ಳುವುದಕ್ಕೆ ರೆಡಿ ಇಲ್ಲ ಅಂದ್ರೆ, ನೀವು ಈ ಆಟಕ್ಕೆ ಫಿಟ್​ ಇಲ್ಲ ಎಂದು ಹೇಳಿದ್ದಾರೆ.

BBK 11: ಇಂದು ಕಿಚ್ಚನ ಪಾಠ ಯಾರಿಗೆ?: ಸಣ್ಣ ಹಿಂಟ್ ಕೊಟ್ಟ ಸುದೀಪ್