ಮೆಲ್ಬರ್ನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ (IND vs AUS) ಡಿಸೆಂಬರ್ 26 ರಂದು ಇಲ್ಲಿನ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಆರಂಭವಾಗಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಅವರು ಈ ಪಂದ್ಯದಲ್ಲಿ 200 ಟೆಸ್ಟ್ ವಿಕೆಟ್ಗಳ ಮೂಲಕ ಮಾಜಿ ನಾಯಕ ಕಪಿಲ್ ದೇವ್ ಅವರ ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ.
ಭಾರತದ ಮಾಜಿ ನಾಯಕ ಕಪಿಲ್ ದೇವ್ ಅವರು ಟೆಸ್ಟ್ ಕ್ರಿಕೆಟ್ನಲ್ಲಿ 200 ವಿಕೆಟ್ಗಳನ್ನು ಕಬಳಿಸಲು ಒಟ್ಟು 50 ಟೆಸ್ಟ್ ಪಂದ್ಯಗಳನ್ನು ತೆಗೆದುಕೊಂಡಿದ್ದರು. ಅದರಂತೆ 1983ರಲ್ಲಿ ಅವರು ಈ ದಾಖಲೆಯನ್ನು ಪೂರ್ಣಗೊಳಿಸಿದ್ದರು. ಇದೀಗ ಜಸ್ಪ್ರೀತ್ ಬುಮ್ರಾ ಟೆಸ್ಟ್ ಕ್ರಿಕೆಟ್ನಲ್ಲಿ 200 ವಿಕೆಟ್ಗಳನ್ನು ಪೂರ್ಣಗೊಳಿಸಲು ಇನ್ನು ಕೇವಲ ಆರು ವಿಕೆಟ್ಗಳು ಅಗತ್ಯವಿದೆ. ಸದ್ಯ ಬುಮ್ರಾ 43 ಟೆಸ್ಟ್ ಪಂದ್ಯಗಳಿಂದ 194 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಅವರು 2.75ರ ಎಕಾನಮಿ ರೇಟ್ನಲ್ಲಿ ರನ್ ನೀಡಿದ್ದಾರೆ ಹಾಗೂ ಆರು ಬಾರಿ 4 ವಿಕೆಟ್ ಸಾಧನೆ ಮತ್ತು 12 ಬಾರಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ.
ಜಸ್ಪ್ರೀತ್ ಬುಮ್ರಾಗೆ 6 ವಿಕೆಟ್ ಅಗತ್ಯವಿದೆ
31ರ ವಯಸ್ಸಿನ ಜಸ್ಪ್ರೀತ್ ಬುಮ್ರಾಗೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್ ಕಿತ್ತರೆ, ಟೆಸ್ಟ್ ಕ್ರಿಕೆಟ್ನಲ್ಲಿ ವೇಗವಾಗಿ 200 ವಿಕೆಟ್ಗಳನ್ನು ಪೂರ್ಣಗೊಳಿಸಿದ ಜಂಟಿ ದಾಖಲೆಯನ್ನು ರವೀಂದ್ರ ಜಡೇಜಾ ಅವರೊಂದಿಗೆ ಎರಡನೇ ಸ್ಥಾನವನ್ನು ಹಂಚಿಕೊಳ್ಳಲಿದ್ದಾರೆ. ಭಾರತ ತಂಡದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು 37 ಟೆಸ್ಟ್ ಪಂದ್ಯಗಳಿಂದ 200 ವಿಕೆಟ್ಗಳನ್ನು ಪೂರ್ಣಗೊಳಿಸಿದ್ದರು. 2016ರಲ್ಲಿ ಅವರು ಈ ಸಾಧನೆ ಮಾಡಿದ್ದರು.
ಟೆಸ್ಟ್ ಕ್ರಿಕೆಟ್ನಲ್ಲಿ ವೇಗವಾಗಿ 200 ವಿಕೆಟ್ ಪೂರ್ಣಗೊಳಿಸಿದ ಭಾರತೀಯ ಬೌಲರ್ಗಳು
ರವಿ ಅಶ್ವಿನ್ – 37 ಟೆಸ್ಟ್
ರವೀಂದ್ರ ಜಡೇಜಾ – 44 ಟೆಸ್ಟ್
ಹರ್ಭಜನ್ ಸಿಂಗ್ – 46 ಟೆಸ್ಟ್
ಅನಿಲ್ ಕುಂಬ್ಳೆ – 47 ಟೆಸ್ಟ್
ಬಿಎಸ್ ಚಂದ್ರಶೇಖರ್ – 48 ಟೆಸ್ಟ್
ಕಪಿಲ್ ದೇವ್ – 50 ಟೆಸ್ಟ್
ಜಸ್ಪ್ರೀತ್ ಬುಮ್ರಾಗೆ ಕೇವಲ 5 ವಿಕೆಟ್ ಅಗತ್ಯ
ಭಾರತದ ಪರ ವಿದೇಶಿ ಟೆಸ್ಟ್ ಸರಣಿಗಳಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಕಬಳಿಸಿದ ಭಾರತೀಯ ವೇಗದ ಬೌಲರ್ ಎನಿಸಿಕೊಳ್ಳಲು ಜಸ್ಪ್ರೀತ್ ಬುಮ್ರಾಗೆ ಕೇವಲ 5 ವಿಕೆಟ್ಗಳ ಅಗತ್ಯವಿದೆ. 1991-92ರ ಸಾಲಿನಲ್ಲಿ ಕಪಿಲ್ ದೇವ್ ಐದು ಟೆಸ್ಟ್ ಪಂದ್ಯಗಳಿಂದ 25 ವಿಕೆಟ್ಗಳನ್ನು ಕಬಳಿಸಿದ್ದರು. ಜಸ್ಪ್ರೀತ್ ಬುಮ್ರಾ ಸದ್ಯ 2.60ರ ಎಕಾನಮಿ ರೇಟ್ನಲ್ಲಿ 21 ವಿಕೆಟ್ಗಳನ್ನು ಕಬಳಿಸಿದ್ದಾರೆ.
ವಿದೇಶಿ ದ್ವಿಪಕ್ಷೀಯ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಕಬಳಿಸಿದ ಭಾರತೀಯ ಬೌಲರ್ಗಳು
ಕಪಿಲ್ ದೇವ್ – ಆಸ್ಟ್ರೇಲಿಯಾದಲ್ಲಿ 25 ವಿಕೆಟ್, 1991-92
ಕಪಿಲ್ ದೇವ್ – ಪಾಕಿಸ್ತಾನದಲ್ಲಿ 24 ವಿಕೆಟ್, 1982-83
ಜಸ್ಪ್ರೀತ್ ಬುಮ್ರಾ – ಇಂಗ್ಲೆಂಡ್ನಲ್ಲಿ 23 ವಿಕೆಟ್, 2021-22
ಇಶಾಂತ್ ಶರ್ಮಾ – ವೆಸ್ಟ್ ಇಂಡೀಸ್ನಲ್ಲಿ 22 ವಿಕೆಟ್, 2005
ಇರ್ಫಾನ್ ಪಠಾಣ್ – ಜಿಂಬಾಬ್ವೆಯಲ್ಲಿ 21 ವಿಕೆಟ್, 2005
ಜಸ್ಪ್ರೀತ್ ಬುಮ್ರಾ – ಆಸ್ಟ್ರೇಲಿಯಾದಲ್ಲಿ 21 ವಿಕೆಟ್, 2018-19
ಈ ಸುದ್ದಿಯನ್ನು ಓದಿ: IND vs AUS: ಜಸ್ಪ್ರೀತ್ ಬುಮ್ರಾಗೆ ರೂಪಿಸಿರುವ ಗೇಮ್ ಪ್ಲ್ಯಾನ್ ರಿವೀಲ್ ಮಾಡಿದ ಉಸ್ಮಾನ್ ಖವಾಜ!