ನವದೆಹಲಿ: ಇನ್ನೇನು ಕೆಲವೇ ದಿನಗಳಲ್ಲಿ 2024 ಅಂತ್ಯವಾಗಿ 2025 ಆರಂಭ ಆಗಲಿದೆ. 2025ರ ಆರಂಭಕ್ಕೂ ಮುನ್ನ ಈ ವರ್ಷ ಹೆಚ್ಚು ವೈರಲ್ ಆದ ವಿಚಾರಗಳ ಬಗ್ಗೆ ಗಮನಹರಿಸಲೇಬೇಕಿದೆ. ಈ ನಿಟ್ಟಿನಲ್ಲಿ ಕೆಲವೊಂದು ವೀಡಿಯೋ ಹಾಗೂ ಫೋಟೋಗಳು ಅತೀ ಹೆಚ್ಚು ವೈರಲ್ ಆಗಿದ್ದು ಈ ಕುರಿತಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ(2024 Flashback).
ರಾಷ್ಟ್ರಪತಿಯವರ ಬ್ಯಾಡ್ಮಿಂಟನ್ ವಿಡಿಯೊ
ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತದ ಏಸ್ ಸೈನಾ ನೆಹ್ವಾಲ್ ಅವರೊಂದಿಗೆ ಬ್ಯಾಡ್ಮಿಂಟನ್ ಆಡುತ್ತಿದ್ದ ವೀಡಿಯೋ ಒಂದು ಅತೀ ಹೆಚ್ಚು ವೈರಲ್ ಆಗಿತ್ತು. ರಾಷ್ಟ್ರ ಪತಿ ಅವರ ಕ್ರೀಡಾಸಕ್ತಿ ಹಾಗೂ ಅವರ ಸರಳತೆಗೆ ಈ ವೀಡಿಯೋ ಅತೀ ಹೆಚ್ಚು ಲೈಕ್ ಹಾಗೂ ಶೇರ್ ಅನ್ನು ಪಡೆದಿದೆ. ಈ ಮೂಲಕ ದ್ರೌಪದಿ ಮುರ್ಮು ಅವರು ಕ್ರೀಡಾಭಿಮಾನಿಯಾಗಿ ದೇಶದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ನೀಡುವ ಪ್ರೋತ್ಸಾಹ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಎಂಬ ಕಮೆಂಟ್ ಕೂಡ ಹರಿದಾಡಿತ್ತು.
ಚಂದ್ರಯಾನದ ಸವಿನೆನಪು
2024ರಲ್ಲಿ ವಿಜ್ಞಾನ ಪ್ರಯೋಗಗಳ ಸಾಲಿನಲ್ಲಿ ಚಂದ್ರಯಾನ 3ರ ಯಶಸ್ವಿ ಲ್ಯಾಂಡಿಂಗ್ ವಿಡಿಯೋ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಬ್ಯಾಹ್ಯಾಕಾಶ ಸಂಶೋಧನೆಯಲ್ಲಿ ಭಾರತದ ಕೀರ್ತಿ ಕೂಡ ಹರಿದಾಡಿದ್ದು ಈ ವಿಡಿಯೋ ಅತೀ ಹೆಚ್ಚು ವೈರಲ್ ಆಗಿದೆ. ಇಸ್ರೋ ಸಾಧನೆ ಬಗ್ಗೆ ಪ್ರಧಾನಿ ಮೋದಿ ಸೇರಿದಂತೆ ವಿಶ್ವದ ಗಣ್ಯರು ಕೊಂಡಾಡಿದ್ದಾರೆ.
ಭಾರತೀಯ ಮಹಿಳಾ ಹಾಕಿ ತಂಡದ ವಿಡಿಯೋ
2024 ರಲ್ಲಿ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಸೆಮಿಫೈನಲ್ ನಂತರ ಭಾರತೀಯ ಮಹಿಳಾ ಹಾಕಿ ತಂಡವು ಜಯಗಳಿಸಿದ್ದರ ವೀಡಿಯೊ ತುಣುಕು ಕೂಡ ವೈರಲ್ ಆಗಿತ್ತು. ಈ ವೀಡಿಯೊ ಕೂಡ ವೈರಲ್ ಹಿಟ್ ಗೆ ಸೇರಿದೆ.
ಮನು ಭಾಕರ್ ಒಲಿಂಪಿಕ್ ಪದಕ ಗೆದ್ದ ವಿಡಿಯೋ
2024 ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಶೂಟರ್ ಮನು ಭಾಕರ್ ಕಂಚಿನ ಪದಕವನ್ನು ಹಿಡಿದಿಟ್ಟುಕೊಂಡಿರುವ ವಿಡಿಯೋ ಕೂಡ ಬಹಳಷ್ಟು ವೈರಲ್ ಆಗಿದೆ. ಲಕ್ಷಾಂತರ ಯುವ ಕ್ರೀಡಾ ಪಟುಗಳಗೆ ಸ್ಫೂರ್ತಿ ತುಂಬುವ ವಿಡಿಯೋ ಚಿತ್ರಣ ಇದಾಗಿದೆ.2024ರ ವೈರಲ್ ವೀಡಿಯೋ ದಲ್ಲಿ ಈ ಕ್ಲಿಪ್ ಕೂಡ ಹೆಚ್ಚು ವೈರಲ್ ಆಗಿದೆ.
ಅನನ್ಯ ಪಾಂಡೆ ಮತ್ತು ವಾಕರ್ ಬ್ಲಾಂಕೊ ಅವರ ವಿಡಿಯೋ
ಬಾಲಿವುಡ್ ನಟಿ ಅನನ್ಯಾ ಪಾಂಡೆ ತನ್ನ ಹೊಸ ಪಾಲುದಾರ, ಮಾಜಿ ಮಾಡೆಲ್ ವಾಕರ್ ಬ್ಲಾಂಕೊ ಅವರನ್ನು ಪರಿಚಯಿಸುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ವೀಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಕಾಮೆಂಟ್ ಕೂಡ ಬಂದಿತ್ತು.
ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದ ವಿರುದ್ಧ ಪ್ರತಿಭಟನೆ
ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ವಿರುದ್ದ ನಡೆದ ಪ್ರತಿಭಟನೆಯ ಹೃದಯ ವಿದ್ರಾವಕ ಚಿತ್ರಗಳು ವೈರಲ್ ಆಗಿವೆ. ಈಶಾನ್ಯ ರಾಜ್ಯವು ಎದುರಿಸುತ್ತಿರುವ ಸಮಸ್ಯೆಗಳತ್ತ ಜನರು ಕಣ್ಣು ಹಾಯಿಸಿದ್ದರು.
G20 ಶೃಂಗಸಭೆಯಲ್ಲಿ ವಂದೇ ಮಾತರಂ’ ಹಾಡಿನ ವಿಡಿಯೊ
ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಭಾರತೀಯ ಶಾಲಾ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಮತ್ತು ವಂದೇ ಮಾತರಂ ಹಾಡಿರುವ ವಿಡಿಯೋ ಕೂಡ ಬಹಳಷ್ಟು ವೈರಲ್ ಆಗಿದೆ. ಭಾರತದ ವಿಶ್ವ ನಾಯಕರು ಆಗಮಿಸಿದ್ದ ಕಾರ್ಯಕ್ರಮದಲ್ಲಿ ಭಾರತದ ಸಾಂಸ್ಕೃತಿಕ ಹೆಮ್ಮೆಗೆ ಅಂತರರಾಷ್ಟ್ರೀಯ ಗಣ್ಯರಿಂದ ಪಡೆದ ಹೆಮ್ಮೆಯ ಚಪ್ಪಾಳೆ ಸಿಕ್ಕಂತಹ ಗೌರವ ದ ವಿಡಿಯೋ ವೈರಲ್ ಆಗಿದೆ.
ಟಾಟಾ ಸ್ಟೀಲ್ನ ಪರಿಸರ ಸ್ನೇಹಿ ಗಣೇಶ ವಿಗ್ರಹ
ಟಾಟಾ ಸ್ಟೀಲ್ ಕಾರ್ಮಿಕರು ಮರುಬಳಕೆಯ ಉಕ್ಕಿನ ವಸ್ತುವಿನ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ರಚಿಸುತ್ತಿರುವ ಪೋಟೋವು ವೈರಲ್ ಆಗಿದೆ. ಇದನ್ಮು ಗಣೇಶ ಚತುರ್ಥಿ ಆಚರಣೆಯ ಸಂದರ್ಭದಲ್ಲಿ ವೈರಲ್ ಮಾಡಲಾಗಿತ್ತು. ಇದು ಪರಿಸರ ಸಂರಕ್ಷಣೆ ಪ್ರಜ್ಞೆಯ ಮೇಲೆ ಮಹತ್ವವನ್ನು ಪ್ರತಿಬಿಂಬಿಸಿದೆ.
ವೈರಲ್ ಟಿಕ್ಟಾಕ್ ಟ್ರೆಂಡ್
ಭಾರತೀಯರ ಪ್ರಾಚೀನಕಾಲದ ಕೆಲವೊಂದು ಹಳ್ಳಿ ಪ್ರದೇಶ ಮತ್ತು ಮರೆತುಹೋದ ಹೆಗ್ಗುರುತುಗಳ ಬಗ್ಗೆ ಗೂಗಲ್ ನಕ್ಷೆಗಳನ್ನು ಬಳಸಿಕೊಂಡು ಮರುಶೋಧಿಸುವ ಟಿಕ್ಟಾಕ್ ಟ್ರೆಂಡ್ ವೈರಲ್ ಆಗಿದೆ. ತಮ್ಮ ಹಿಂದಿನ ಕಾಲದ ಪೂರ್ವಜರ ಮನೆಗಳನ್ನು ಅನ್ವೇಷಿಸುವ ವೀಡಿಯೊಗಳು ವೈರಲ್ ಆಗಿದೆ.
ಸಮಂತಾ ರುತ್ ಪ್ರಭು ಅವರ ಮಹಿಳಾ ಸಬಲೀಕರಣ ಭಾಷಣ
ಕೇರಳದಲ್ಲಿ ನಡೆದ ವುಮೆನ್ ಇನ್ ಸಿನಿಮಾ ಕಲೆಕ್ಟಿವ್ ಕಾರ್ಯಕ್ರಮದಲ್ಲಿ ನಟಿ ಸಮಂತಾ ರುತ್ ಪ್ರಭು ಅವರ ಭಾಷಣದ ಕ್ಲಿಪ್ ವೈರಲ್ ಆಗಿದೆ. ಸಿನಿಮಾ ಇಂಡಸ್ಟ್ರಿ ಯಲ್ಲಿ ಮಹಿಳೆಯರ ಸಾಧನೆ, ಸಿನಿಮಾ, ಲಿಂಗ ಸಮಾನತೆ ಮತ್ತು ಮಹಿಳೆಯರ ಸುರಕ್ಷತೆ ಬಗ್ಗೆ ಮಾತನಾಡಿದ್ದರು. ಇದು ಕೂಡ ವರ್ಷದ ಹೆಚ್ಚು ಹಂಚಿಕೊಂಡ ವೀಡಿಯೊಗಳಲ್ಲಿ ಒಂದಾಗಿದೆ.
ಈ ಸುದ್ದಿಯನ್ನೂ ಓದಿ: 2024 Flashback: ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾರೆಯರು