Sunday, 22nd December 2024

Viral Video: ಅಬ್ಬಾ..ಇದೆಂಥಾ ಹುಚ್ಚಾಟ! ಹೀಗೂ ಬೈಕ್‌ ಚಲಾಯಿಸ್ಬೋದಾ? ವೈರಲ್‌ ವಿಡಿಯೊ

Viral Video

ದೆಹಲಿ: ಇಂದು ವಿವಿಧ ರೀತಿಯ  ಬೈಕ್‌ ಸ್ಟಂಟ್‌ನ ಹುಚ್ಚಾಟದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಚಿತ್ರವಿಚಿತ್ರ ಪ್ರಯತ್ನದ ಮೂಲಕ  ಅಪಾಯಕಾರಿ ದೃಶ್ಯಗಳು ಒಂದು ಕ್ಷಣಕ್ಕೆ ಮೈ ಝುಮ್ಮೆನಿಸುವಂತೆ ಮಾಡುತ್ತದೆ. ಇದೀಗ ಒಬ್ಬ ವ್ಯಕ್ತಿ ಸ್ಕೂಟರ್ ಅನ್ನು ಹಿಮ್ಮುಖವಾಗಿ  ಓಡಿಸಿದ ವಿಡಿಯೋ(Viral Video) ಸಿಕ್ಕಪಟ್ಟೆ  ವೈರಲ್ ಆಗಿದ್ದು, ಈ  ಅಪಾಯಕಾರಿ ದೃಶ್ಯ ಕಂಡು ನೆಟ್ಟಿಗರು ಅಕ್ರೋಶ ವ್ಯಕ್ತ ಪಡಿಸಿದ್ದಾರೆ. 

ಇಂದು  ಸೋಷಿಯಲ್ ಮೀಡಿಯಾದಲ್ಲಿ ‌ವೈರಲ್ ಆಗಬೇಕು, ಹೆಚ್ಚು ಫೇಮಸ್ ಆಗುವ ಉದ್ದೇಶದಿಂದಾಗಿ ಯುವಕ ಯುವತಿಯರ ಹುಚ್ಚಾಟ  ಅಂತು ಮಿತಿ ಮೀರಿದೆ. ಬೈಕ್ ಸ್ಟಂಟ್ ಮಾಡುವುದು ಜೀವಕ್ಕೆ ತುಂಬಾ ಅಪಾಯಕಾರಿ ಎಂದು ಅರಿವು ಮೂಡಿಸಿದರೂ ಸ್ಟಂಟ್ ಮಾಡಲು ಹೋಗಿ ಅನೇಕರು ತಮ್ಮ ಜೀವಕ್ಕೆ ಅಪಾಯ ತಂದುಕೊಂಡವರು ಇದ್ದಾರೆ. ಇದೀಗ ಹಿಂದೆ ಕುಳಿತು ಅಪಾಯಕಾರಿ ಸ್ಕೂಟರ್ ಸಾಹಸ ಪ್ರದರ್ಶಿಸಿದ ದೃಶ್ಯ ವೈರಲ್ ಆಗಿದೆ. ಈ ವಿಡಿಯೋ ಸಾಕಷ್ಟು ವೀಕ್ಷಣೆ ಮತ್ತು ಪ್ರತಿಕ್ರಿಯೆಗಳನ್ನೂ ಗಳಿಸಿದೆ. ಈ ವ್ಯಕ್ತಿಯ ಹುಚ್ಚಾಟಕ್ಕೆ ನೆಟ್ಟಿಗರು ಅಕ್ರೋಶ ವ್ಯಕ್ತ ಪಡಿಸಿದ್ದಾರೆ. ರಸ್ತೆ ಸುರಕ್ಷತೆ ಗಾಗಿ ಹಲವಾರು ಜಾಗೃತಿ ಅಭಿಯಾನ‌ ಹಮ್ಮಿಕೊಂಡರೂ ಇಂತಹ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ.

ಈ  ದೃಶ್ಯವನ್ನು ಕಂಡ ಕೆಲವರು  ಸ್ಕೂಟರ್ ಸವಾರನು ಇಲ್ಲಿ ಅಪಯಕಾರಿ ಸಾಹಸ ಮಾಡಿದ್ದಾನೆ. ವ್ಯಕ್ತಿಯು ಸ್ಕೂಟರ್‌ನಲ್ಲಿ ಕುಳಿತು ಮುಂದಕ್ಕೆ ಹೋಗುವ ಬದಲು ಹಿಂದಕ್ಕೆ ಮುಖಮಾಡಿ ಚಲಾಯಿಸಿದ್ದಾನೆ. ವಿಡಿಯೊ ನೋಡಿದ ನೆಟ್ಟಿಗರು ಇವನಿಗೆ ಪೈನ್ ಹಾಕಲೇಬೇಕು ಎಂದು  ಪ್ರತಿಕ್ರಿಯಿಸಿದ್ದಾರೆ.  ಇನ್ನು ಕೆಲವರು ಈ ಕೃತ್ಯವನ್ನು ಅಜಾಗರೂಕ ಮತ್ತು ಬೇಜವಾಬ್ದಾರಿ ಎಂದು ಟೀಕಿಸಿದ್ದಾರೆ. ಒಬ್ಬ ಬಳಕೆದಾರ, ಇದು ಸಂಪೂರ್ಣ ಮೂರ್ಖತನ ಇದು ಅವನ ಜೀವಕ್ಕೆ ಅಪಾಯ ಎಂದು ಕಾಮೆಂಟ್ ಮಾಡಿದ್ದಾರೆ.

ಕಠಿಣ ಶಿಕ್ಷೆಯಾಗಬೇಕು:

ಇಂತಹ ಸ್ಟಂಟ್‌ಗಳಿಗೆ ಕಠಿಣ ಶಿಕ್ಷೆಯ ಅಗತ್ಯವಿದೆ. ಈ ರೀತಿಯ ಬೇಜವಾಬ್ದಾರಿ ವರ್ತನೆಯ ವಾಹನ ಚಲಾಯಿ ಸುವುದನ್ನು ಶಾಶ್ವತವಾಗಿ ನಿಷೇಧಿಸಬೇಕು ಎಂದು ಮತ್ತೊಬ್ಬರು ಗರಂ ಆಗಿದ್ದಾರೆ. ಕೆಲವು ಬಳಕೆದಾರರು ರಸ್ತೆ ಸುರಕ್ಷತೆ ಕಾನೂನು ಅನ್ನು  ಪ್ರಶ್ನಿಸಿದ್ದಾರೆ.  ಅಧಿಕಾರಿಗಳು ಎಲ್ಲಿದ್ದಾರೆ? ಇಂತಹ ಜನರು ಇಂತಹ ಕೃತ್ಯಗಳಿಂದ ಹೇಗೆ ತಪ್ಪಿಸಿಕೊಳ್ಳುತ್ತಾರೆ? ಎಂದು ಸಂಬಂಧಪಟ್ಟ ವ್ಯಕ್ತಿಯೊಬ್ಬರು ಪ್ರಶ್ನೆ ಮಾಡಿದ್ದಾರೆ.

ಇದನ್ನು ಓದಿ:#MB Movie: ಶಿವರಾಜ್‌ಕುಮಾರ್ ಅಭಿನಯದ ಹೊಸ ಸಿನಿಮಾ ಅನೌನ್ಸ್‌!