ಕೊಲಂಬಿಯಾ: ಜವಾಬ್ದಾರಿಯುತ ಸ್ಥಾನದಲ್ಲಿರುವವರೆ ಕೆಲವೊಮ್ಮೆ ಅತ್ಯಂತ ಬೇಜವಾಬ್ದಾರಿಯುತವಾಗಿ ನಡೆದುಕೊಂಡಿರುವ ಉದಾಹರಣೆಗಳಿವೆ. ಇದೀಗ ಅಂತಹದ್ದೇ ಒಂದು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೊಲಂಬಿಯಾದ ಸಂಸದೆ (Colombian MP Caught Vaping) ಸಂಸತ್ ಅಧಿವೇಶನ ನಡೆಯುತ್ತಿದ್ದ ವೇಳೆಯೇ ಧಮ್ ಎಳೆದಿರುವ ಘಟನೆ ವರದಿಯಾಗಿದೆ. ಕ್ಯಾಥಿ ಜುವಿನಾವೊ ಎಂಬ ಸಂಸದೆ ಸಂಸತ್ತಿನಲ್ಲಿ ಆರೋಗ್ಯ ಸುಧಾರಣೆಗಳ ಬಗ್ಗೆ ಸಭೆ ನಡೆಯುವಾಗ ವೇಪಿಂಗ್ ಮಾಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಈ ಒಂದು ವೀಡಿಯೋಗೆ ಸಾಕಷ್ಟು ಟೀಕೆಗಳು ಕೂಡ ವ್ಯಕ್ತವಾಗುತ್ತಿದೆ(Viral Video).
ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸಭೆಯಲ್ಲಿ ಸಭೆಯ ಕಲಾಪ ನಡೆಯುವಾಗಲೇ ಸಭಾಂಗಣದಲ್ಲೇ ಎಲ್ಲ ಅಧಿಕಾರಿಗಳು ಇದ್ದಾಗಲೇ ವೇಪಿಂಗ್ ಪೆನ್ ಬಳಸಿ ಆಕೆ ಧೂಮಪಾನ ಮಾಡಿದ್ದಾಳೆ. ಸಡನ್ ಆಗಿ ಕ್ಯಾಮೆರಾಗಳು ಆಕೆಯನ್ನು ಫೋಕಸ್ ಮಾಡಿವೆ. ತಕ್ಷಣವೇ ಆಕೆ ಅದನ್ನು ಮರೆಮಾಚಿ ಕೆಳಗೆ ಇರಿಸುವಂತೆ ಮಾಡಿದ್ದಾಳೆ. ಹೀಗೆ ಸಂಸತ್ತಿನಲ್ಲಿ ವೇಪ್ ಮಾಡಿದ ಶಾಸಕಿಯ ವೀಡಿಯೊ ಇಂಟರ್ನೆಟ್ನಲ್ಲಿ ವೈರಲ್ ಆಗಿದ್ದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ವೀಡಿಯೋದಲ್ಲಿ ಏನಿದೆ?
ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ ಸಭೆಯಲ್ಲಿ ದೇಶದ ಜನರ ಆರೊಗ್ಯ ಸುಧಾರಣೆಗಳ ಕುರಿತು ಕಲಾಪ ನಡೆಯುತ್ತಿತ್ತು. ಈ ಸಭೆಯ ನಡುವಲ್ಲಿಯೇ ಕೊಲಂಬಿಯಾ ಶಾಸಕಿ ಕ್ಯಾಥಿ ಜುವಿನಾವೊ ಅವರು ವೆಪ್ಪ್ ಪೆನ್ (ಇ ಸಿಗರೇಟ್ ) ಬಳಕೆ ಮಾಡಿದ್ದಾರೆ. ಕ್ಯಾಮರಾ ಇರುವ ಬಗ್ಗೆ ಮನಗಂಡ ಶಾಸಕಿ ಕೂಡಲೇ ತಮ್ಮ ಕೈಲಿದ್ದ ಇ ಸಿಗರೇಟ್ ಪಕ್ಕಕ್ಕೆ ಇರಿಸಿದ್ದಾರೆ. ಈ ಮೂಲಕ ಸಂಸತ್ತಿನ ನಿಯಮ ಉಲ್ಲಂಘನೆ ಮಾಡಿದ್ದು ವೀಡಿಯೋದಲ್ಲಿ ಈ ಕ್ಲಿಪ್ ಸೆರೆಹಿಡಿಯಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಹ ವ್ಯಾಪಕ ಟೀಕೆಗೆ ಗುರಿಯಾಗಿದೆ.
@YouTube pic.twitter.com/GJbcWzEkhN
— k’ ▪️ (@k1ragoat) December 20, 2024
ಕ್ಷಮೆಯಾಚಿಸಿದ ಶಾಸಕಿ!
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿರುವ ಆಕೆ ತನ್ನ ತಪ್ಪಾಗಿದೆ ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಅಧಿವೇಶನದಲ್ಲಿ ಈ ನನ್ನ ವರ್ತನೆಗೆ ನಾಗರಿಕರಲ್ಲಿ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಹಲವು ರೀತಿಯಲ್ಲಿ ಟೀಕೆ ಮಾಡಿದ್ದು ಆರೋಗ್ಯ ಸುಧಾರಣೆಯ ಚರ್ಚೆ ಘೋರವಾಗಿದೆ! ಆಕೆ ರಾಜೀನಾಮೆ ನೀಡಬೇಕು ಸಂಸತ್ತಿನಲ್ಲಿ ಈ ರೀತಿ ಧೂಮಪಾನ ಮಾಡುವುದು ಅಗೌರವ ಸಲ್ಲಿಸಿದಂತೆ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನು ಓದಿ:Viral Video: ‘ಅನಿಮಲ್’ ಸಿನಿಮಾದಿಂದ ಸ್ಫೂರ್ತಿ ಪಡೆದ ಜೋಡಿ ಮದುವೆ ಮಂಟಪದಲ್ಲಿ ಮಾಡಿದ್ದೇನು ನೋಡಿ