Monday, 23rd December 2024

BBK 11: ಗಾಂಚಲಿ ಬಿಡಿ..: ವೀಕೆಂಡ್​ನಲ್ಲಿ ಕೂಲ್ ಆಗಿರುತ್ತಿದ್ದ ಹನುಮಂತನಿಗೆ ಬಿಸಿ ಮುಟ್ಟಿಸಿದ ಸುದೀಪ್

Hanumantha and Kichcha Sudeep (1)

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಸದ್ಯ 13ನೇ ವಾರಕ್ಕೆ ಕಾಲಿಟ್ಟಿದೆ. ಕಳೆದ ವಾರ ಎರಡು ಗುಂಪುಗಳಾಗಿ ವಿಂಗಡನೆಗೊಂಡಿದ್ದ ಮನೆಯಲ್ಲಿ ಟಾಸ್ಕ್ ಮಧ್ಯೆ ಅನೇಕ ಜಗಳಗಳು ನಡೆದವು. ಒಂದು ಟಾಸ್ಕ್ ಈ ಜಗಳದಿಂದ ರದ್ದು ಕೂಡ ಆಯಿತು. ಈ ಕುರಿತು ಕಿಚ್ಚ ಸುದೀಪ್ ಅವರು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿ ಮನೆಮಂದಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅದರಲ್ಲೂ ಪ್ರತಿಬಾರಿ ಸೈಲೆಂಟ್ ಆಗಿರುತ್ತಿದ್ದ ಹನುಂತನಿಗೂ ಕಿಚ್ಚ ಬಿಸಿ ಮುಟ್ಟಿಸಿದ್ದಾರೆ.

ಸದಾ ಸೈಲೆಂಟ್ ಆಗಿರುವ ಹನುಮಂತ ಕಳೆದ ವಾರ ಕೊಂಚ ವೈಲೆಂಟ್ ಆಗಿದ್ದರು. ಕಳಪೆ ನೀಡುವ ಸಂದರ್ಭ ಚೈತ್ರಾ ಅವರಿಗೆ ನಿನಗೆ ಪದೇ ಪದೇ ಕಳಪೆ ಕೊಡೋಕೆ ನೀನೇನು ದೊಡ್ಡಪ್ಪನ ಮಗಳು, ಅತ್ತೆ ಮಗಳಲ್ಲ. ಟಾರ್ಗೆಟ್ ಮಾಡಿಕೊಂಡು ಕಳಪೆ ಕೊಡಲು ನಾನು ಯಾರನ್ನೂ ಟಾರ್ಗೆಟ್ ಮಾಡಿಲ್ಲ. ನೀನು ನನ್ನ ದೊಡ್ಡಪ್ಪನ ಮಗಳು, ಅತ್ತೆ ಮಗಳು ಅಲ್ಲ ಎಂದು ಹನುಮಂತ ಹೇಳಿದ್ದರು. ಅಲ್ಲದೆ ಟಾಸ್ಕ್ ಮಧ್ಯೆ ಚೈತ್ರಾ ಕುಂದಾಪುರ ಮೇಲೆ ರೇಗಾಡಿ, ಚೈತ್ರಾ ಜಾಗದಲ್ಲಿ ಗಂಡ್‌ಮಕ್ಳು ಇರ್ತಿದ್ರೆ ಕಥೆನೇ ಬೇರೆ ಆಗ್ತಿತ್ತು ಎಂದು ಕೂಗಾಡಿದ್ದರು.

ಇಷ್ಟೇ ಅಲ್ಲದೆ ಕಳೆದ ವಾರ ಟಾಸ್ಕ್ ಮಧ್ಯೆ ಜಗಳ ನಡೆದಾಗ ಈ ಟಾಸ್ಕ್ ರದ್ದಾದರೆ ಆಗಲಿ ಎಂದು ಹನುಮಂತ ಹೇಳಿದ್ದರು. ಈ ಮಾತು ಕಿಚ್ಚನಿಗೆ ಕೋಪ ತರಿಸಿದೆ. ಹನುಮಂತು ಅವ್ರೆ, ನಿಮ್ಮ ಬಾಯಿಂದ ಇನ್ನೊಂದು ಸಾರಿ ಟಾಸ್ಕ್‌ ರದ್ದಾದ್ರು ಪರವಾಗಿಲ್ಲ ಅಂತ ಬಂದ್ರೆ ಸರಿ ಇರಲ್ಲ. ನಿಮಗೆ ಎಷ್ಟೇ ವೋಟ್ ಬೀಳುತ್ತಾ ಇರಲಿ. ಹೊರಗಡೆ ಕಳಿಸೋ ಜವಾಬ್ದಾರಿ ನನ್ನದು. ರದ್ದಾದ್ರೂ ಪರ್ವಾಗಿಲ್ಲ ಅನ್ನೋ ಗಾಂಚಲಿ ಮಾತುಗಳು ಯಾರ ಬಾಯಲ್ಲೂ ಬೇಡ ಮಾ.. ಇದು ಯಾರ ಅಪ್ಪನ ಮನೆಯೂ ಅಲ್ಲ. ಟಾಸ್ಕ್ ರದ್ದಾಗಬೇಕಾ ಬೇಡ್ವ ಅಂತ ಬಿಗ್‌ ಬಾಸ್ ಡಿಸೈಡ್ ಮಾಡುತ್ತಾರೆ ಎಂದು ಸುದೀಪ್ ಖಾರವಾಗಿ ಮಾತನಾಡಿದ್ದಾರೆ.

ಚೈತ್ರಾಗೆ ಸಖತ್ ಕ್ಲಾಸ್:

ಟಾಸ್ಕ್ ಮಧ್ಯೆ ಉಸ್ತುವಾರಿ ವಹಿಸಿಕೊಂಡಿದ್ದ ಚೈತ್ರಾ ಕುಂದಾಪುರ ತೆಗೆದುಕೊಂಡ ಕೆಲವು ನಿರ್ಧಾರಗಳು ಸುದೀಪ್ ಅವರಿಗೂ ಕೋಪ ತರಿಸಿದೆ. ಚೈತ್ರಾ ಅವರು ಮಾತನಾಡುತ್ತಾ, ಮೂರು ಬಾರಿ ಕಳಪೆ ಕೊಡುತ್ತಾರೆ ಸರ್, ಆ ಮೂರು ಬಾರಿಯೂ ಉಸ್ತುವಾರಿ ಬಗ್ಗೆ ಕಾರಣ ಕೊಡುತ್ತಾರೆ. ಅದು ಒಳಗಡೆ ಎಷ್ಟು ಕುಗ್ಗಿಸುತ್ತೆ ಅಂತ ನಮಗೆ ಮಾತ್ರ ಗೊತ್ತು ಅಂತ ಅಳುತ್ತಾ ಹೇಳಿದ್ದಾರೆ.

ಇದಕ್ಕೆ ಉತ್ತರ ಕೊಟ್ಟ ಸುದೀಪ್, ಯಾರು ನಿಮ್ಮನ್ನು ಕುಗ್ಗಿಸಿದ್ದಾರೆ ಹೇಳಿ ಅಂತ ನೇರವಾಗಿ ಕೇಳಿದ್ದಾರೆ. ಆಗ ಚೈತ್ರಾ, ಒಂದಿಷ್ಟು ಜನ ನನ್ನ ಮೇಲೆ ಒಪಿನಿಯನ್ ತೆಗೆದುಕೊಂಡಿದ್ದಾರೆ ಅದು ನನ್ನನ್ನು ಕುಗ್ಗುಸಿದೆ ಎಂದು ಹೇಳಿದ್ದಾರೆ. ಆಗ ಕಿಚ್ಚ, ಹಾಗಾದ್ರೆ ನೀವು ತೆಗೆದುಕೊಳ್ಳವ ಹೆಸರು ಅವರನ್ನು ಕುಗ್ಗಿಸುವುದಿಲ್ವ, ಬಾಣ ಕೊಡೋದಕ್ಕೆ ರೆಡಿ ಇದ್ದೀರಾ ಅಂದ್ಮೇಲೆ ಬಾಣ ತೆಗೆದುಕೊಳ್ಳುವುದಕ್ಕೆ ರೆಡಿ ಇಲ್ಲ ಅಂದ್ರೆ, ನೀವು ಈ ಆಟಕ್ಕೆ ಫಿಟ್​ ಇಲ್ಲ ಎಂದು ಹೇಳಿದ್ದಾರೆ.

BBK 11: ನೀವು ಈ ಆಟಕ್ಕೆ ಫಿಟ್​ ಇಲ್ಲ: ಚೈತ್ರಾಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್