ಲಖನೌ: ಯುವತಿಯೊಬ್ಬರು ಪ್ರೀತಿಸಿ ಮೋಸ ಮಾಡಿ ಬೇರೆ ಹುಡುಗಿಯನ್ನು ಮದುವೆಯಾಗಲು ಮುಂದಾದ ಪ್ರಿಯಕರನನ್ನು ಏಕಾಂತದಲ್ಲಿ ಮಾತನಾಡಲು ಕರೆದು ಆತನ ಖಾಸಗಿ ಭಾಗವನ್ನು ಕತ್ತರಿಸಿದ ಘಟನೆ ಉತ್ತರ ಪ್ರದೇಶದ(UP Shocker) ಮುಜಾಫರ್ ನಗರದಲ್ಲಿ ನಡೆದಿದೆ. 8 ವರ್ಷಗಳ ಸಂಬಂಧದ ನಂತರ, ಪ್ರಿಯಕರ ಯುವತಿಗೆ ಹೇಳದೆ ಬೇರೊಬ್ಬ ಹುಡುಗಿಯನ್ನು ಮದುವೆಯಾಗಲು ಹೊರಟಿದ್ದನು. ಈ ವಿಚಾರ ಯುವತಿಗೆ ತಿಳಿದಾಗ, ಅವನ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದಾಳೆ. ಹಾಗಾಗಿ ಆತನೊಂದಿಗೆ ಕೊನೆಯ ಬಾರಿ ಮಾತನಾಡಲು ಕರೆದು ಅಲ್ಲಿ ಆತನ ಖಾಸಗಿ ಭಾಗಗಳನ್ನು ಕತ್ತರಿಸಿದಲ್ಲದೇ ಅದೇ ಆಯುಧದಿಂದ ತನ್ನ ಮಣಿಕಟ್ಟನ್ನು ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ.
मुज़फ्फरनगर : प्रेमिका ने प्रेमी का काटा गुप्तांग
— भारत समाचार | Bharat Samachar (@bstvlive) December 22, 2024
➡प्रेमी द्वारा प्यार में धोखा मिलने से काटा गुप्तांग
➡प्रेमिका ने मिलने के बहाने बुलाकर गुप्तांग काटा
➡8 साल से चल रहा था दोनों के बीच अफेयर
➡प्रेमी की शादी दूसरी लड़की से तय होने से थी नाराज
➡पुलिस ने प्रेमी को जिला… pic.twitter.com/OIQydCiPa0
ಪ್ರಿಯಕರ ಗಾಯಗೊಂಡು ರಕ್ತಸ್ರಾವವಾಗುತ್ತಿದ್ದರೂ, ಯುವತಿಯ ಜೀವವನ್ನು ಉಳಿಸಲು ಯುವತಿಯ ಕೈಗೆ ಬಟ್ಟೆ ಕಟ್ಟಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದು ಇಬ್ಬರಿಗೂ ಚಿಕಿತ್ಸೆ ಕೊಡಿಸಿದ್ದಾರೆ.
ಪೊಲೀಸರ ಪ್ರಕಾರ, ಕೊನೆಯ ಬಾರಿಗೆ ಭೇಟಿಯಾಗುವಂತೆ ಯುವತಿ ಪ್ರಿಯಕರನನ್ನು ಅತಿಥಿ ಗೃಹಕ್ಕೆ ಕರೆದು ಹರಿತವಾದ ವಸ್ತುವಿನಿಂದ ಹಲ್ಲೆ ನಡೆಸಿದ್ದಾಳೆ. ಪ್ರಿಯಕರನ ಖಾಸಗಿ ಭಾಗಗಳನ್ನು ಕತ್ತರಿಸಿ ನಂತರ ತನ್ನ ಕೈಯನ್ನು ಸಹ ಕತ್ತರಿಸಿಕೊಂಡಿದ್ದಾಳೆ. ಆದರೆ ಪ್ರಿಯಕರ ಯುವತಿಯನ್ನು ರಕ್ಷಿಸಿ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಸ್ಥಳಕ್ಕೆ ತಲುಪಿ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರಿನಲ್ಲಿ ಈ ಘಟನೆ ನಡೆದಿದೆ ಎಂದು ಪ್ರಿಯಕರ ಹೇಳಿದ್ದಾನೆ. ಆದರೆ, ಅತಿಥಿ ಗೃಹದೊಳಗೆ ಈ ಘಟನೆ ನಡೆದಿದೆ ಎಂದು ಯುವತಿ ಹೇಳಿದ್ದಾಳೆ. ಹಾಗಾಗಿ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆ ಪೂರ್ಣಗೊಂಡ ನಂತರವೇ ಈ ವಿಷಯ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:ನ್ಯೂಯಾರ್ಕ್ನ ಯೂಟ್ಯೂಬರ್ ಭಾಷೆ ಕೇಳಿ ಶಾಕ್ ಆದ ಅಂಗಡಿಯವರು; ಅಷ್ಟಕ್ಕೂ ನಡೆದಿದ್ದೇನು?
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ ಪ್ರಿಯಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮತ್ತು ಈ ವಿಷಯಕ್ಕೆ ಸಂಬಂಧಿಸಿದಂತೆ ಯುವತಿಯನ್ನು ಬಂಧಿಸಿದ್ದಾರೆ.