ನವದೆಹಲಿ: ಹೆಚ್ಚಿನ ಜನರು ತಮ್ಮ ರಜಾದಿನಗಳಲ್ಲಿ ಸಾಹಸ ಚಟುವಟಿಕೆಗಳನ್ನು ಆನಂದಿಸಲು ಆರಾಮದಾಯಕ ಮತ್ತು ಕ್ಯಾಶುಯಲ್ ಬಟ್ಟೆಗಳನ್ನು ಧರಿಸಿಕೊಂಡು ಹೋಗುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ವಿಭಿನ್ನ ಅವತಾರದಲ್ಲಿ ಪ್ಯಾರಾಗ್ಲೈಡಿಂಗ್ ಮಾಡಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಎಲ್ಲರ ಗಮನ ಸೆಳೆದಿದೆ. ಮಹಿಳೆ ಪ್ಯಾರಾಗ್ಲೈಡಿಂಗ್‍ನಲ್ಲಿ ಮಾಟಗಾತಿಯಂತೆ ವೇಷಧರಿಸಿಕೊಂಡು ಹೋಗಿದ್ದಾರೆ.
ಪ್ಯಾರಾಗ್ಲೈಡಿಂಗ್ ಮಾಡಲು ಇವರು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಿದ್ದಾರೆ. ಹಾಗೂ ಅವರು ತನ್ನ ಸಾಹಸವನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅದು ಆಕಾಶದ ಮೇಲೆ ಹಾರುವ ‘ಮಾಟಗಾತಿ’ಯಂತೆ ಕಾಣುತ್ತದೆ.
ಆ ಮಹಿಳೆ ಪ್ಯಾರಾಗ್ಲೈಡಿಂಗ್ ಉತ್ಸಾಹಿ ವಾಂಡಿ ವಾಂಗ್ ಎಂಬುದಾಗಿ ತಿಳಿದುಬಂದಿದ್ದು, ಅವರು ತನ್ನ ಇತ್ತೀಚಿನ ಸಾಹಸದ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲಿ ಅವರು ಕಪ್ಪು ಬಟ್ಟೆಗಳನ್ನು ಧರಿಸಿ ಪೊರಕೆಯ ಮೇಲೆ ಕುಳಿತು ಹಾರಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ‘ಹಲೋ ದೀದಿ’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ವಾಂಗ್ ಕಪ್ಪು ಮಾಟಗಾತಿಯನ್ನು ಹೋಲುತ್ತಿದ್ದಾರೆ. ಮತ್ತು ಪ್ಯಾರಾಗ್ಲೈಡಿಂಗ್ ಕ್ರೀಡೆಯ ಸಮಯದಲ್ಲಿ ಅವರು ಪೊರಕೆ ಸ್ಟಿಕ್ ಮತ್ತು ವೂಡೂ ತರಹದ ಗೊಂಬೆಯನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದಾರೆ ಮತ್ತು ಅದನ್ನು ವಿಡಿಯೊ ರೆಕಾರ್ಡ್ ಮಾಡಿದ್ದಾರೆ.
ವಾಂಗ್ ಇನ್‌ಸ್ಟಾಗ್ರಾಂನಲ್ಲಿ ಮಾಟಗಾತಿ ವೇಷದಲ್ಲಿ ಪ್ಯಾರಾಗ್ಲೈಡಿಂಗ್ ತೋರಿಸುವ ಒಂದೆರಡು ವಿಡಿಯೊಗಳನ್ನು ಅಪ್ಲೋಡ್ ಮಾಡಿದ್ದಾರೆ. ಈಗ, ಅಕ್ಟೋಬರ್‌ನಿಂದ ಪೋಸ್ಟ್ ಮಾಡಲಾದ ಅವರ ಎಲ್ಲಾ ವಿಡಿಯೊಗಳು ವೈರಲ್ ಆಗುತ್ತಿವೆ. ಗಾಢ ಕಪ್ಪು ಮಾಟಗಾತಿ ಉಡುಗೆ ಮತ್ತು ಸಂಬಂಧಿತ ಸಾಧನಗಳಲ್ಲಿ ಅವರ ಪ್ಯಾರಾಗ್ಲೈಡಿಂಗ್ ಸ್ಟಂಟ್‍ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಅನೇಕರು ಇದನ್ನು “ಕೂಲ್” ಎಂದು ಕರೆದರೆ, ಇತರರು ಅವರ ನೋಟದ ಬಗ್ಗೆ ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:ಭಾರತವನ್ನು ಕಸದ ರಾಶಿ ಎಂದ ಪ್ರವಾಸಿಗ; ಈತನ ಪೋಸ್ಟ್‌ಗೆ ನೆಟ್ಟಿಗರು ಫುಲ್ ಗರಂ?
ಕೆಲವು ಇನ್ಸ್ಟಾಗ್ರಾಂ ಬಳಕೆದಾರರು ವಾಂಗ್ ಅವರಲ್ಲಿ ಮಾಟಗಾತಿ ವೇಷವನ್ನು ಧರಿಸದಂತೆ ಕೇಳಿಕೊಂಡಿದ್ದಾರೆ. ಮತ್ತು ಸಾಂತಾಕ್ಲಾಸ್ ಉಡುಪನ್ನು ಧರಿಸಲು ಅವರನ್ನು ಒತ್ತಾಯಿಸಿದ್ದಾರೆ. “ದಯವಿಟ್ಟು ಸಾಂತಾ ಕ್ಲಾಸ್‌ನಂತೆ ಉಡುಪು ಧರಿಸಿ ನನ್ನ ಮನೆಯ ಮೇಲೆ ಹಾರಿ” ಎಂದು ಕಾಮೆಂಟ್ ಮಾಡಿದ್ದಾರೆ. ಅವರು ತಮ್ಮ ಅನುಯಾಯಿಗಳ ಮಾತನ್ನು ಉಳಿಸಿಕೊಂಡರು ಮತ್ತು ಕ್ರಿಸ್ಮಸ್-ಥೀಮ್ ಉಡುಪಿನಲ್ಲಿ ಪ್ಯಾರಾಗ್ಲೈಡಿಂಗ್ ವಿಡಿಯೊವನ್ನು ಇತ್ತೀಚೆಗೆ ಹಂಚಿಕೊಂಡಿದ್ದಾರೆ.