ನವದೆಹಲಿ: ಪ್ರತಿ ವರ್ಷ ಡಿಸೆಂಬರ್ 23ರಂದು ಕಿಸಾನ್ ದಿವಸ್ (Kisan Diwas 2024) ಅಥವಾ ರೈತರ ದಿನ (Farmers’ Day) ಆಚರಿಸಲಾಗುತ್ತಿದೆ. ದೇಶದ ಕಠಿಣ ಪರಿಶ್ರಮಿ, ದೇಶದ ಆಹಾರ ಭದ್ರತೆ ಮತ್ತು ಆರ್ಥಿಕತೆಯ ಬೆನ್ನೆಲುಬಾಗಿರುವ ರೈತರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ದಿನ ಆಚರಣೆಯಲ್ಲಿದೆ. ಇಂದು ದೇಶದ ಐದನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ (Chaudhary Charan Singh) ಅವರ ಜನ್ಮದಿನವೂ ಹೌದು. ಚರಣ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಅನೇಕ ರೈತ ಪರ ನಿರ್ಧಾರಗಳ ಮೂಲಕ ಕೃಷಿ ಕ್ಷೇತ್ರಕ್ಕೆ ನೆರವಾಗಿದ್ದವರು. ಇದರ ಜತೆಗೆ, ಅವರ ಜನ್ಮದಿನವನ್ನೇ ದೇಶದಲ್ಲಿ ರೈತರ ದಿನವಾಗಿ ಆಚರಿಸಲು ಹಲವು ಕಾರಣಗಳಿವೆ. ಉತ್ತರ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಪ್ರತಿ ವರ್ಷ ರಾಷ್ಟ್ರೀಯ ರೈತ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಇತರ ರಾಜ್ಯಗಳಲ್ಲಿಯೂ ಆಚರಣೆಯನ್ನು ಕಾಣಬಹುದಾಗಿದೆ.
ರೈತರ ದಿನದ ಮಹತ್ವವೇನು?
ರೈತರನ್ನು ಗುರುತಿಸಿ ಗೌರವಿಸುವ ನಿಟ್ಟಿನಲ್ಲಿ ರೈತರ ದಿನ ಬಹಳಷ್ಟು ಮಹತ್ವ ಪಡೆದುಕೊಂಡಿದೆ. ಅದೇ ರೀತಿ ರೈತರಲ್ಲಿ ಹೊಸ ಕೃಷಿ ತಂತ್ರಜ್ಞಾನಗಳ ಬಗ್ಗೆ ಅರಿವು ಮೂಡಿಸಲು, ಅವರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರ ಸೂಚಿಸುವುದಕ್ಕಾಗಿಯೂ ಬಳಸಿಕೊಳ್ಳಲಾಗುತ್ತಿದೆ. ಕಡಿಮೆ ಇಳುವರಿ, ಸಾಲದ ಲಭ್ಯತೆ ಇಲ್ಲದಿರುವುದು, ಕಳಪೆ ಮೂಲಸೌಕರ್ಯ ಇತ್ಯಾದಿ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ. ಎಲ್ಲದಕ್ಕಿಂತ ಮಿಗಿಲಾಗಿ, ರೈತರು ದೇಶಕ್ಕೆ ನೀಡುತ್ತಿರುವ ಕೊಡುಗೆಗೆ ಅವರಿಗೆ ಧನ್ಯವಾದ ಸಮರ್ಪಿಸಲು ಈ ದಿನವನ್ನು ಮಹತ್ವದ್ದೆಂದು ಪರಿಗಣಿಸಲಾಗಿದೆ.
ರೈತ ದಿನಾಚರಣೆಯ ಉದ್ದೇಶ
ರೈತರಿಲ್ಲದೆ ಪ್ರಪಂಚದ ಜೀವನ ಮತ್ತು ಅಸ್ತಿತ್ವವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ, ನಮ್ಮ ನಿರ್ವಹಣೆಯನ್ನು ನೋಡಿಕೊಳ್ಳುವ ಮತ್ತು ಅವರ ಹಕ್ಕುಗಳನ್ನು ನಾವು ರಕ್ಷಿಸಿದರೆ ಪ್ರತಿಯಾಗಿ ನಮ್ಮ ಸಮಾಜದ ಒಂದು ಭಾಗವಿದೆ ಎಂಬುದು ಬಹಳ ಸಂತೋಷದ ಸಂಗತಿಯಾಗಿದೆ. ನೀವು ಅದನ್ನು ಮಾಡಲು ಸಾಧ್ಯವಾದರೆ, ನೀವು ಅವರ ಜೀವನ ಮಟ್ಟವನ್ನು ಹೆಚ್ಚಿಸಬಹುದು, ನಂತರ ಇದಕ್ಕಿಂತ ಉತ್ತಮವಾಗಿ ಏನೂ ಸಾಧ್ಯವಿಲ್ಲ. ಅದಕ್ಕಾಗಿಯೇ ರೈತ ದಿನಾಚರಣೆಯನ್ನು ಆಚರಿಸುವುದು ಅವಶ್ಯಕ. ಆದ್ದರಿಂದ ನಮಗೆ ಹಣ್ಣುಗಳು, ತರಕಾರಿಗಳು ಮತ್ತು ಭತ್ತದಂತಹ ಮೂಲ ಸರಕುಗಳನ್ನು ಒದಗಿಸುವ ವರ್ಗವನ್ನು ಸಮಾಜದ ಮುಖ್ಯ ಪ್ರವಾಹದೊಂದಿಗೆ ಸಂಪರ್ಕಿಸಬಹುದು.
ಚೌಧರಿ ಚರಣ್ ಸಿಂಗ್ (Chaudhary Charan Singh) ಅವರು ಡಿಸೆಂಬರ್ 23ರಂದು ಜನಿಸಿದರು. ಪ್ರತಿ ವರ್ಷ ಅವರ ಜನ್ಮದಿನವನ್ನು ʼರಾಷ್ಟ್ರೀಯ ರೈತರ ದಿನʼವಾಗಿ ಆಚರಿಸಲಾಗುತ್ತದೆ. ಚರಣ್ ಸಿಂಗ್ ಉತ್ತರ ಪ್ರದೇಶದ ನೂರ್‌ಪುರದಲ್ಲಿ ಮಧ್ಯಮ ವರ್ಗದ ರೈತ ಕುಟುಂಬದಲ್ಲಿ ಜನಿಸಿದರು. 1979ರ ಜುಲೈ 28ರಿಂದ 1980ರ ಜನವರಿ 14ರವರೆಗೆ ಐದೂವರೆ ತಿಂಗಳು ಅವರು ಪ್ರಧಾನ ಮಂತ್ರಿಯಾಗಿದ್ದರು.
ರೈತರಿಗೆ ಒಳಿತು ಮಾಡಲು ತುಡಿಯುತ್ತಿದ್ದ ಚೌಧರಿ ಚರಣ್ ಸಿಂಗ್ ಜುಲೈ 28, 1979ರಿಂದ ಜನವರಿ 14, 1980ರವರೆಗೆ ಭಾರತದ ಐದನೇ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಇವರನ್ನು ಭಾರತದ ರೈತರ ಚಾಂಪಿಯನ್ ಎಂದು ಕರೆಯುತ್ತಾರೆ. ಪ್ರತಿವರ್ಷ ಡಿಸೆಂಬರ್ 23ರನ್ನು ರಾಷ್ಟ್ರೀಯ ರೈತರ ದಿನವಾಗಿ ಆಚರಿಸುವ ಮೂಲಕ ಮಾಜಿ ಪ್ರಧಾನಿಗೆ ಗೌರವ ಸಲ್ಲಿಸಲಾಗುತ್ತದೆ.
ಚೌಧರಿ ಚರಣ್ ಸಿಂಗ್ ಆರಂಭಿಕ ಜೀವನ ಮತ್ತು ಶಿಕ್ಷಣ
ಭಾರತ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಮಾಜಿ ಪ್ರಧಾನಿ ದಿವಂಗತ ಚೌಧರಿ ಚರಣ್ ಸಿಂಗ್ ಮೂಲತಃ ಕೃಷಿ ಕುಟುಂಬದಿಂದ ಬಂದವರು. ಮೀರಜ್ ಜಿಲ್ಲೆಯ ಭದೌಲಾಗ್ರಾಮದಲ್ಲಿ ನೆಲೆಸಿದ್ದ ಇವರು ಜಾನಿ ಖುರ್ದ್ ಗ್ರಾಮದಲ್ಲಿ ಆರಂಭಿಕ ಶಿಕ್ಷಣ ಪಡೆದರು. 1919 ರಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ತಮ್ಮ ಮೆಟ್ರಿಕ್ಯುಲೇಷನ್ ಶಿಕ್ಷಣ ಪೂರ್ಣಗೊಳಿಸಿದರು. 1923 ರಲ್ಲಿ ಆಗ್ರಾ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದರು. 1925 ರಲ್ಲಿ ಇತಿಹಾಸದಲ್ಲಿ ಎಂಎ ಪದವಿ ಪೂರೈಸಿದರು. ಕಾನೂನು ವಿಷಯದಲ್ಲೂ ತರಬೇತಿ ಪಡೆದರು. ಗಾಜಿಯಾಬಾದ್‌ನಲ್ಲಿ ನಾಗರಿಕ ಕಾನೂನು ಅಭ್ಯಾಸ ಮಾಡಿದ್ದಾರೆ. ಬಳಿಕ ರಾಜಕೀಯವನ್ನು ತಮ್ಮ ಕರಿಯರ್ ಆಗಿ ಆಯ್ಕೆ ಮಾಡಿಕೊಂಡರು. 1929 ರಲ್ಲಿ, ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದರು. ತಮ್ಮ ಬದುಕಿನ ಉದ್ದಕ್ಕೂ ರೈತರು ಮತ್ತು ರೈತ ಕುಟುಂಬಕ್ಕಾಗಿ ಶ್ರಮಿಸಿದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಹಲವು ಬಾರಿ ಜೈಲಿಗೂ ಹೋಗಿದ್ದರು.
ಭಾರತ ರತ್ನ ಚೌಧರಿ ಚರಣ್ ಸಿಂಗ್ ರಾಜಕೀಯ ಜೀವನ
- ಉತ್ತರ ಪ್ರದೇಶ ವಿಧಾನಸಭೆಗೆ 1937ರಲ್ಲಿ ಅವರು ಮೊದಲ ಬಾರಿಗೆ ಆಯ್ಕೆಯಾದರು. ಇದೇ ಕ್ಷೇತ್ರವನ್ನು 1946, 1952, 1962 ಮತ್ತು 1967ರಲ್ಲಿ ಪ್ರತಿನಿಧಿಸಿದ್ದರು. ಪಂಡಿತ್ ಗೋವಿಂದ್ ಬಲ್ಲಭ್ ಪಂತ್ ಸರಕಾರದಲ್ಲಿ 1946ರಲ್ಲಿ ಸಂಸದೀಯ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಕಂದಾಯ, ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ, ನ್ಯಾಯ, ಮಾಹಿತಿ ಇತ್ಯಾದಿ ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದರು.
- 1951ರಲ್ಲಿ ರಾಜ್ಯ ಕ್ಯಾಬಿನೆಟ್ ಮಂತ್ರಿಯಾಗಿ ಆಯ್ಕೆಯಾದರು. 1952 ರಲ್ಲಿ ಕಂದಾಯ ಮತ್ತು ಕೃಷಿ ಸಚಿವರಾದರು.
- 1960 ರಲ್ಲಿ ಸಿಬಿ ಗುಪ್ತಾ ಸಚಿವಾಲಯದಲ್ಲಿ ಗೃಹ ಮತ್ತು ಕೃಷಿ ಸಚಿವರಾಗಿದ್ದರು. 1962-63ರವರೆಗೆ ಕೃಷಿ ಮತ್ತು ಅರಣ್ಯ ಸಚಿವರಾಗಿ ಸೇವೆ ಸಲ್ಲಿಸಿದರು. 1966 ರಲ್ಲಿ ಸ್ಥಳೀಯ ಸ್ವ-ಸರ್ಕಾರಿ ಇಲಾಖೆಯ ಉಸ್ತುವಾರಿ ವಹಿಸಿಕೊಂಡರು.
- ಕಾಂಗ್ರೆಸ್ ವಿಭಜನೆಯ ಬಳಿಕ 970 ರ ಫೆಬ್ರವರಿಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಎರಡನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದರು.ಆಡಳಿತದಲ್ಲಿನ ಅಸಮರ್ಥತೆ, ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರವನ್ನು ಇವರು ಸಹಿಸುತ್ತ ಇರಲಿಲ್ಲ. 1970 ರಂದು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು.
- 1977-78ರಲ್ಲಿ ಗೃಹ ಸಚಿವಾಲಯದ ಮಂತ್ರಿಯಾದರು. ಅಂದರೆ, ಮೊರಾರ್ಜಿ ದೇಸಾಯಿ ಸರಕಾರದಲ್ಲಿ ಕ್ಯಾಬಿನೆಟ್ ಮಿನಿಸ್ಟರ್ ಆಗಿ ಆಯ್ಕೆಯಾದರು. 1977ರಲ್ಲಿ ಗೃಹ ಸಚಿವರಾದರು.
- 1977ರ ಅಕ್ಟೋಬರ್ 3ರಂದು ಇಂದಿರಾ ಗಾಂಧಿಯ ಬಂಧನವಾಯಿತು. ಇದೇ ಸಮಯದಲ್ಲಿ ಚರಣ್ ಸಿಂಗ್ ಅವರು ರಾಜೀನಾಮೆ ಪತ್ರ ಸಲ್ಲಿಸಿದರು. ಆದರೆ, ಮೊರಾರ್ಜಿ ದೇಸಾಯಿ ಅದಕ್ಕೆ ಅಂಕಿತ ಹಾಕಲಿಲ್ಲ.
- ಇಂದಿರಾ ಗಾಂಧಿ ವಿಚಾರಣೆಗೆ ಸಂಬಂಧಪಟ್ಟಂತೆ ಭಿನ್ನಾಭಿಪ್ರಾಯ ಹೆಚ್ಚಾದ ಕಾರಣ ಚರಣ್ ಸಿಂಗ್ 1978ರಲ್ಲಿ ಮೊರಾರ್ಜಿ ದೇಸಾಯಿ ಸಂಪುಟಕ್ಕೆ ರಾಜೀನಾಮೆ ನೀಡಿದರು. 1979ರಲ್ಲಿ ಕ್ಯಾಬಿನೆಟ್‌ಗೆ ಮರಳಿದರು.
- 1979ರ ಜುಲೈ 28ರಂದು ಭಾರತದ 5ನೇ ಪ್ರಧಾನಮಂತ್ರಿಯಾಗಿ ಆಯ್ಕೆಯಾದರು.
ಚೌಧರಿ ಚರಣ್ ಸಿಂಗ್ ಬರೆದ ಪುಸ್ತಕಗಳು
ಸರಳ ಜೀವನ ನಡೆಸುತ್ತಿದ್ದ ಚೌಧರಿ ಚರಣ್ ಸಿಂಗ್ ಅವರು ಕೆಲವು ಪುಸ್ತಕಗಳನ್ನ ಬರೆದಿದ್ದಾರೆ. ಇವರ ಬಹುತೇಕ ಪುಸ್ತಕಗಳು ಕೃಷಿಕರಿಗೆ ಸಂಬಂಧಪಟ್ಟಿವೆ. ಅಬಾಲಿಷನ್ ಆಫ್ ಜಮಿನ್ದಾರಿ, ಕೋ ಆಪರೇಟಿವ್ ಫಾರ್ಮಿಂಗ್- ಎಕ್ಸ್‌ರೇಯ್ಡ್, ಇಂಡಿಯಾ ಪಾವರ್ಟಿ ಆಂಡ್ ಇಟ್ಸ್ ಸೊಲ್ಯುಷನ್ಸ್, ಪಿಸಂಟ್ ಪ್ರಾರ್ಪರ್ಟಿಶಿಪ್ ಆರ್ ಲ್ಯಾಂಡ್ ಟು ದಿ ವರ್ಕರ್ಸ್, ಪ್ರಿವೆನ್ಸನ್ ಆಫ್ ಡಿವಿಷನ್ ಆಫ್ ಹೋಲ್ಡಿಂಗ್ ಬಿಲೊ ಎ ಸರ್ಟೈನ್ ಮಿನಿಮಮ್ ಮುಂತಾದ ಪುಸ್ತಕಗಳನ್ನು ಬರೆದಿದ್ದಾರೆ. ಇವರು ಬರೆದ ಬಹುತೇಕ ಪುಸ್ತಕಗಳು ಭಾರತದ ಬಡತನ ಮತ್ತು ಪರಿಹಾರ, ರೈತ ಮಾಲೀಕತ್ವ ಅಥವಾ ಕಾರ್ಮಿಕರಿಗೆ ಭೂಮಿ, ಕಡಿಮೆ ಹಿಡುವಳಿಗಳ ವಿಭಜನೆಯನ್ನು ತಡೆಗಟ್ಟುವುದು ಸೇರಿದಂತೆ ಹಲವು ಕೃಷಿ ಮತ್ತು ರೈತರ ವಿಚಾರಗಳಿಗೆ ಸಂಬಂಧಪಟ್ಟಿವೆ. ಚೌಧರಿ ಚರಣ್ ಸಿಂಗ್ ಅವರ ಹುಟ್ಟುಹಬ್ಬವನ್ನು ಕಿಸಾನ್ ದಿವಾಸ್ ಅಥವಾ ರಾಷ್ಟ್ರೀಯ ರೈತರ ದಿನವೆಂದು ಪ್ರತಿವರ್ಷ ಡಿಸೆಂಬರ್ 23ರಂದು ಆಚರಿಸಲಾಗುತ್ತದೆ. ಇದೀಗ ಚೌಧರಿ ಚರಣ್ ಸಿಂಗ್ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಘೋಷಿಸಲಾಗಿದೆ.
ಈ ಸುದ್ದಿಯನ್ನು ಓದಿ: R Ashwin: ಕ್ಯಾರಂ ಬಾಲ್ ಎಸೆದು ಅಚ್ಚರಿ ಮೂಡಿಸಿದ್ದೀರಿ; ಅಶ್ವಿನ್ಗೆ ಪ್ರಧಾನಿ ಮೋದಿ ಪತ್ರ