ಇಂದಿನ ಕಾಲದಲ್ಲಿ ಹಣ ಸಂಪಾದಿಸಿ ಅದನ್ನು ಒಟ್ಟುಗೂಡಿಸಿ ಯಾವುದೇ ವಸ್ತುಗಳನ್ನು ಖರೀದಿಸಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರು ಬ್ಯಾಂಕ್‍ನಲ್ಲಿ ಸಾಲ ಮಾಡಿ ಅವುಗಳನ್ನು ಖರೀದಿಸುತ್ತಾರೆ. ಉದಾಹರಣೆಗೆ ಗೃಹ ಸಾಲ ತೆಗೆದು ಮನೆ ಕಟ್ಟುತ್ತಾರೆ, ವಾಹನ ಸಾಲ ತೆಗೆದು ಕಾರು, ಲಾರಿ ಇನ್ನಿತರ ವಾಹನಗಳನ್ನು ಖರೀದಿಸುತ್ತಾರೆ. ನಂತರ ಈ ಸಾಲವನ್ನು ಅವರು ಮರುಪಾವತಿ(Loan Recovery) ಮಾಡುತ್ತಾರೆ. ಆದರೆ ಒಂದು ವೇಳೆ ಸಾಲ ಮಾಡಿದ ವ್ಯಕ್ತಿ ಮರಣ ಹೊಂದಿದ್ದರೆ ಆ ಸಾಲದ ಹೊಣೆ ಯಾರಿಗೆ ಬರುತ್ತದೆ ಎಂಬುದು ಯಾರಿಗಾದರೂ ಗೊತ್ತಾ? ಅದಕ್ಕೆ ಉತ್ತರ ಇಲ್ಲಿದೆ.
ಗೃಹ ಸಾಲ
ಗೃಹ ಸಾಲವನ್ನು ಜಾಯಿಂಟ್ ಅಕೌಂಟ್ ಮೂಲಕ ಪಡೆದಿದ್ದು, ಸಾಲ ಮರುಪಾವತಿ ಮಾಡದೆ ಪ್ರಾಥಮಿಕ ಸಾಲಗಾರನು ನಿಧನರಾದರೆ, ಈ ಸಾಲದ ಹೊಣೆ ಸಹ ಸಾಲಗಾರನಿಗೆ ಬರುತ್ತದೆ. ಒಂದು ವೇಳೆ ಯಾವುದೇ ಸಹ-ಸಾಲಗಾರ ಅಸ್ತಿತ್ವದಲ್ಲಿಲ್ಲದಿದ್ದರೆ ಅಥವಾ ಸಹ-ಸಾಲಗಾರನಿಗೆ ಬಾಕಿ ಇರುವ ಸಾಲವನ್ನು ನಿರ್ವಹಿಸಲು ಸಾಧ್ಯವಾಗದಿದ್ದರೆ, ಆಗ ಸಾಲ ನೀಡಿದವರು ಕಾನೂನಿನ ಪ್ರಕಾರ ಸಾಲ ವಸೂಲಿ ಮಾಡುತ್ತಾರೆ. ಅಂದರೆ ನಿಧನರಾದ ವ್ಯಕ್ತಿಯ ಆಸ್ತಿಯನ್ನು ಸ್ವಾಧೀನ ಪಡಿಸಿಕೊಂಡು ಅದನ್ನು ಮಾರಾಟ ಮಾಡುವ ಮೂಲಕ ಸಾಲ ವಸೂಲಿ ಮಾಡುತ್ತಾರೆ.
ವಾಹನ ಸಾಲ
ವಾಹನ ಸಾಲದ ಅವಧಿಯಲ್ಲಿ ಸಾಲಗಾರನು ಮರಣ ಹೊಂದಿದ್ದರೆ ಉಳಿದ ಸಾಲದ ಬಾಕಿಯನ್ನು ಮರುಪಾವತಿ ಮಾಡಲು ಸಾಲ ನೀಡಿದವರು ಸಾಲಗಾರನ ಕುಟುಂಬಕ್ಕೆ ತಿಳಿಸುತ್ತಾರೆ. ಒಂದು ವೇಳೆ ಕುಟುಂಬದವರು ಉಳಿದ ಸಾಲದ ಬಾಕಿಯನ್ನು ಪಾವತಿಸಲು ನಿರಾಕರಿಸಿದರೆ, ಬ್ಯಾಂಕ್ ವಾಹನವನ್ನು ಮರು ಸ್ವಾಧೀನಪಡಿಸಿಕೊಂಡು ಮತ್ತು ಸಾಲ ಬಾಕಿಯನ್ನು ಮರುಪಡೆಯಲು ಹರಾಜಿನಲ್ಲಿ ಮಾರಾಟ ಮಾಡಲು ಅರ್ಹವಾಗಿದೆ.
ಈ ಸುದ್ದಿಯನ್ನೂ ಓದಿ:ರಾಂಗ್ ಸೈಡ್‍ನಲ್ಲಿ ಚಲಿಸಿದ ಬಸ್: ವೈರಲ್ ವಿಡಿಯೊ ಇಲ್ಲಿದೆ
ವೈಯಕ್ತಿಕ ಮತ್ತು ಕ್ರೆಡಿಟ್ ಕಾರ್ಡ್ ಸಾಲಗಳು
ವೈಯಕ್ತಿಕ ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್ ಸಾಲಗಳು ಅನ್ ಸೆಕ್ಯೂರ್ಡ್ ಲೋನ್‍ಗಳಲ್ಲಿ ಬರುತ್ತದೆ. ಈ ಸಾಲ ನೀಡುವಾಗ ಯಾವುದೇ ದಾಖಲೆಗಳು ಅಥವಾ ಆಸ್ತಿಯನ್ನು ಅಡವಿಟ್ಟು ನೀಡಲಾಗುವುದಿಲ್ಲ. ಹಾಗಾಗಿ ಈ ಸಾಲದ ಅವಧಿಯಲ್ಲಿ ಸಾಲಗಾರನು ನಿಧನರಾದರೆ, ಬಾಕಿ ಇರುವ ಸಾಲವನ್ನು ವಸೂಲಿ ಮಾಡಲು ಬ್ಯಾಂಕ್ ಕುಟುಂಬ ಸದಸ್ಯರನ್ನು ಒತ್ತಾಯಿಸುವ ಹಾಗಿಲ್ಲ. ಒಂದು ವೇಳೆ ಸಹ-ಸಾಲಗಾರ ಅಸ್ತಿತ್ವದಲ್ಲಿದ್ದರೆ, ಬ್ಯಾಂಕ್ ಆ ವ್ಯಕ್ತಿಯ ವಿರುದ್ಧ ವಸೂಲಿ ಪ್ರಕ್ರಿಯೆಗಳನ್ನು ಪ್ರಾರಂಭಿಸಬಹುದು. ಆದಾಗ್ಯೂ, ಸಹ-ಸಾಲಗಾರನ ಅನುಪಸ್ಥಿತಿಯಲ್ಲಿ ಮತ್ತು ಸಾಲವನ್ನು ಮರುಪಡೆಯಲು ಯಾವುದೇ ಪರ್ಯಾಯ ಮಾರ್ಗಗಳಿಲ್ಲದಿದ್ದರೆ ಬ್ಯಾಂಕಿನವರು ಸಾಲವನ್ನು ಎನ್‍ಪಿಎ ಖಾತೆಗೆ ಸೇರಿಸಬಹುದು.