ಮುಂಬೈ: ನಟಿ ಐಶ್ವರ್ಯಾ ರೈ ಬಚ್ಚನ್(Aishwarya Rai) ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಈ ವೇಳೆ ಪುತ್ರಿ ಆರಾಧ್ಯ ಬಚ್ಚನ್ ಕೂಡ ಜೊತೆಗಿದ್ದರು. ವಿಮಾನ ನಿಲ್ದಾಣದಲ್ಲಿ ಮಗಳನ್ನು ಐಶು ಬಹಳಷ್ಟು ಕೇರ್ ಮಾಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು.
ಅವಾರ್ಡ್ ಫಂಕ್ಷನ್ ಅಂತ ಬ್ಯುಸಿಯಾಗಿರೋ ಸ್ಟಾರ್ ನಟಿ ಐಶ್ವರ್ಯ ಎಲ್ಲೇ ಹೋದರೂ ಮಗಳು ಆರಾಧ್ಯ ಜೊತೆಗೆ ಇರುತ್ತಾರೆ. ಇದೀಗ ಮುಂಬೈ ವಿಮಾನ ನಿಲ್ದಾಣದಲ್ಲೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಬ್ಲಾಕ್ ಡ್ರೆಸ್ ನಲ್ಲಿ ಮಿಂಚಿದ್ದು ತಾಯಿ ಮತ್ತು ಮಗಳು ಬ್ಯುಟಿಪುಲ್ ಆಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಐಶ್ವರ್ಯ ಅವರ ಗಮನ ಆರಾಧ್ಯ ಅವರ ಮೇಲಿತ್ತು. ಐಶ್ವರ್ಯಾ ಅವರು ಸೇರಿದ್ದಂತಹ ಜನರ ಮುಂದೆ ಆರಾಧ್ಯ ಅವರಿಗೆ ರಕ್ಷಣೆ ನೀಡುತ್ತಿರುವುದು ಕಂಡುಬಂದಿದೆ. ವಿಮಾನ ನಿಲ್ದಾಣದಲ್ಲಿ ಜನ ಸೇರಿದ್ದರಿಂದ ಐಶ್ವರ್ಯಾ ಮತ್ತು ಆರಾಧ್ಯಳನ್ನ ವಿಮಾನ ನಿಲ್ದಾಣದ ಸೆಕ್ಯೂರಿಟಿಯವರು ತಡೆಹಿಡಿದಿದ್ದರಿಂದ ಭದ್ರತಾ ತಪಾಸಣೆ ಪೂರ್ಣಗೊಳ್ಳುವವರೆಗೆ ತಾಯಿ ಮಗಳು ಕಾಯಬೇಕಾಯಿತು. ಆರಾಧ್ಯ ದೊಡ್ಡವಳಾದ್ಮೇಲೂ ಐಶ್ವರ್ಯ ರೈ ಆರಾಧ್ಯ ಕೈ ಬಿಡೋದಿಲ್ಲ, ಎಲ್ಲಿ ಹೋದ್ರೂ ಮಗಳ ಕೈ ಹಿಡಿದುಕೊಂಡೆ ಮುಂದೆ ಸಾಗುತ್ತಾರೆ. ಸದ್ಯ ಮಗಳನ್ನು ಕೇರ್ ಮಾಡುವ ವಿಡಿಯೋ ಬಹಳಷ್ಟು ವೈರಲ್ ಆಗುತ್ತಿದೆ.
ಡಿವೋರ್ಸ್ ವದಂತಿಗೆ ಬ್ರೇಕ್
ಡಿವೋರ್ಸ್ ವದಂತಿ ಬೆನ್ನಲ್ಲೇ ಮೊನ್ನೆಯಷ್ಟೇ ಆರಾಧ್ಯ ಶಾಲಾ ವಾರ್ಷಿಕೋತ್ಸವಕ್ಕೆ ಆಗಮಿಸಿದ ಬಚ್ಚನ್ ಕುಟುಂಬ, ಮಗಳ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದ್ದಾರೆ. ಪುತ್ರಿ ಅರಾಧ್ಯ ನೃತ್ಯವನ್ನು ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ತಮ್ಮ ಮೊಬೈಲ್ ಮೂಲಕ ರೆಕಾರ್ಡ್ ಮಾಡಿದ್ದು ಈ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮಗಳು ಆರಾಧ್ಯಳ ಶಾಲೆಯ ಕಾರ್ಯಕ್ರಮಕ್ಕೆ ಬಿಗ್ ಬಿ ಜೊತೆ ಅಭಿಷೇಕ್, ಐಶ್ವರ್ಯಾ ಒಟ್ಟಾಗಿ ಬಂದಿದ್ದರು. ಶಾಲೆಗೆ ಆಗಮಿಸಿದ್ದ ವೇಳೆ, ಇಬ್ಬರು ನಗು ನಗುತ್ತಾ ಮಾತನಾಡುತ್ತಾ ಬರ್ತಾ ಇದ್ದು ಈ ಜೋಡಿ ಕಂಡು ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಈ ಸುದ್ದಿಯನ್ನೂ ಓದಿ:Viral News: ನೀನು ಪ್ಯಾಂಟ್‌ನಲ್ಲೇ ಮೂತ್ರ ಮಾಡ್ಕೋತಿಯಾ… ಸಿನಿಮಾವನ್ನು ಟೀಕಿಸಿದ ನೆಟ್ಟಿಗನಿಗೆ ಖ್ಯಾತ ನಟನಿಂದ ಬೆದರಿಕೆ