ನವದೆಹಲಿ : ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಅವರಿಗೆ ಮತ್ತೆ ಮಾದಕ ವಸ್ತು ನಿಯಂತ್ರಣ ದಳ ಸಮನ್ಸ್ ಜಾರಿ ಮಾಡಿದೆ.
ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ತನಿಖಾ ಸಂಸ್ಥೆಯ ಮುಂದೆ ಹಾಜರಾಗುವಂತೆ ಅವರಿಗೆ ಸೂಚಿಸ ಲಾಗಿದೆ. ಗಮನಾರ್ಹವೆಂದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ.13ರಂದು ಎನ್ ಸಿಬಿ ಯಿಂದ ಅರ್ಜುನ್ ರಾಂಪಾಲ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
ನ.9ರಂದು ಎನ್ ಸಿಬಿ ಅಧಿಕಾರಿಗಳು ಅರ್ಜುನ್ ಅವರ ನಿವಾಸದ ಮೇಲೆ ದಾಳಿ ನಡೆಸಿ, ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ದಂತೆ ಕೆಲವು ಎಲೆಕ್ಟ್ರಾನಿಕ್ ಉಪಕರಣಗಳು ವಶಪಡಿಸಿಕೊಂಡಿದ್ದರು. ರಾಮ್ ಪಾಲ್ ನ ಗೆಳತಿ ಗ್ಯಾಬ್ರಿಯೆಲ್ಲಾ ಡೆಮೆಟ್ರಿಯಾಡೆಸ್ ನನ್ನು ಅದೇ ದಿನ ಆರು ಗಂಟೆಗಳ ಕಾಲ ವಿಚಾರಣೆ ಗೊಳಪಡಿಸಲಾಯಿತು.
ಪ್ರಕರಣದಲ್ಲಿ ಅರ್ಜುನ್ ರಾಂಪಾಲ್ ಅವರ ಸ್ನೇಹಿತ ಪಾಲ್ ಬಾರ್ಟೆಲ್ ಅವರನ್ನು ಎನ್ ಸಿಬಿ ಬಂಧಿಸಿತ್ತು. ಇದೀಗ ಮತ್ತೆ ಎನ್ ಸಿ ಬಿ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದಾರೆ. ನಾಳೆ ವಿಚಾರಣೆಗೆ ಒಳಪಡುವಂತೆ ಸೂಚಿಸಿದ್ದಾರೆ.