ಕಳೆದ ಎರಡು ಮೂರು ವಾರಗಳಿಂದ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಶಾಕಿಂಗ್ ಘಟನೆಗಳು ನಡೆಯುತ್ತಿವೆ. ಹನ್ನೊಂದನೇ ವಾರ ಈ ಬಾರಿಯ ಫೈನಲ್ ಕಂಟೆಸ್ಟೆಂಟ್ ಎಂದುಕೊಂಡಿದ್ದ ಶಿಶಿರ್ ಶಾಸ್ತ್ರೀ ಎಲಿಮಿನೇಟ್ ಆಗಿದ್ದರು. ಇದು ಎಲ್ಲರಿಗೂ ಶಾಕ್ ತರಿಸಿತು. ಇದರ ಬೆನ್ನಲ್ಲೇ ವೈಯಕ್ತಿಕ ಕಾರಣಗಳಿಂದ ಗೋಲ್ಡ್ ಸುರೇಶ್ ಮನೆತೊರೆದರು. ಇದೀಗ ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ತ್ರಿವಿಕ್ರಮ್ ನೀವು ಎಲಿಮಿನೇಟ್ ಆಗಿದ್ದೀರಿ ಎಂದು ಹೇಳಿದ್ದಾರೆ.
ಕಳೆದ ವಾರ ಮನೆಯಿಂದ ಹೊರಹೋಗಲು 5 ಮಂದಿ ನಾಮಿನೇಟ್ ಆಗಿದ್ದರು. ನಾಮಿನೇಷನ್ ಪ್ರಕ್ರಿಯೆ ಬಹಳ ವಿಭಿನ್ನವಾಗಿ ನಡೆಯಿತು. ಟಾಸ್ಕ್ನಲ್ಲಿ ಗೆದ್ದ ತಂಡ ಎದುರಾಳಿ ತಂಡದವರನ್ನ ನಾಮಿನೇಟ್ ಮಾಡಬೇಕಿತ್ತು. ಎಲ್ಲಾ ಚಟುವಟಿಕೆಗಳು ಗುರುವಾರದ ಸಂಚಿಕೆಯಲ್ಲಿ ಮುಕ್ತಾಯಗೊಂಡು ಕೊನೆಗೆ ತ್ರಿವಿಕ್ರಮ್, ರಜತ್, ಐಶ್ವರ್ಯಾ, ಹನುಮಂತ, ಮೋಕ್ಷಿತಾ ನಾಮಿನೇಟ್ ಆದರು.
ಇದರಲ್ಲಿ ರಜತ್, ಹನುಮಾ ಹಾಗೂ ಮೋಕ್ಷಿತಾ ಮೊದಲಿಗೆ ಸೇಫ್ ಆದರು. ಡೇಂಜರ್ ಝೋನ್ನಲ್ಲಿ ತ್ರಿವಿಕ್ರಮ್ ಮತ್ತು ಐಶ್ವರ್ಯಾ ಇದ್ದರು. ಅಂತಿಮವಾಗಿ ಐಶ್ವರ್ಯಾ ಅವರು ಸೇಫ್ ಆದರು. ನಿಮಗೆ ಐದು ನಿಮಿಷ ಕಾಲವಕಾಶ ಇದೆ ಬಂದು ವೇದಿಕೆ ಮೇಲೆ ಸಿಗಿ ಎಂದು ಕಿಚ್ಚ ಸುದೀಪ್ ಅವರು ತ್ರಿವಿಕ್ರಮ್ಗೆ ಹೇಳಿದ್ದಾರೆ.
ಈ ಮೂಲಕ ಮನೆ ಮಂದಿಗೆ ವಿದಾಯ ಹೇಳಿ ತ್ರಿವಿಕ್ರಮ್ ಅವರು ಮುಖ್ಯ ದ್ವಾರದಿಂದ ಹೊರಬಂದಿದ್ದಾರೆ. ಆದರೆ, ಟ್ವಿಸ್ಟ್ ಏನಪ್ಪ ಅಂದ್ರೆ ಈ ವಾರ ಎಲಿಮಿನೇಷನ್ ಇಲ್ಲ. ವೋಟಿಂಗ್ ಲೈನ್ಸ್ ಓಪನ್ ಆಗಿರಲಿಲ್ಲ. ವೀಕ್ಷಕರಿಂದ ಮತಗಳನ್ನ ಪಡೆಯದೆ ಸ್ಪರ್ಧಿಗಳನ್ನ ಬಿಗ್ ಬಾಸ್ ಔಟ್ ಮಾಡುವುದಿಲ್ಲ. ಹೀಗಾಗಿ, ಈ ವಾರ ಬಿಗ್ ಬಾಸ್ ಮನೆಯಿಂದ ಯಾರೂ ಹೊರಬರುವುದಿಲ್ಲ. ಅಂದರೆ ತ್ರಿವಿಕ್ರಮ್ ಅವರದ್ದಿ ಫೇಕ್ ಎಲಿಮಿನೇಷನ್ ಆಗಿದೆ.
ತ್ರಿವಿಕ್ರಮ್ ಆಚೆ ಹೋಗುತ್ತಿದ್ದಂತೆ, ಮನೆ ಮಂದಿ ಫುಲ್ ಶಾಕ್ ಆಗಿದ್ದಾರೆ ಅದರಲ್ಲೂ ಭವ್ಯಾ ಗೌಡ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಉಗ್ರಂ ಮಂಜು, ಗೌತಮಿ ಜಾಧವ್ ಕೂಡ ಬೇಸರಗೊಂಡರು. ಸದ್ಯ ತ್ರಿವಿಕ್ರಮ್ ಅವರನ್ನು ಸೀಕ್ರೆಟ್ ರೂಂಗೆ ಕಳಿಸಿರಬಹುದು ಎಂದು ಹೇಳಲಾಗಿದೆ. ಇಂದಿನ ಸಂಚಿಕೆಯಲ್ಲಿ ತ್ರಿವಿಕ್ರಮ್ ಮತ್ತೆ ಬಿಗ್ಬಾಸ್ ಮನೆಗೆ ವಾಪಸ್ ಬರುತ್ತಾರಾ ಅಥವಾ ಮತ್ತೆ ಬಿಗ್ಬಾಸ್ ಟ್ವಿಸ್ಟ್ ಇಡುತ್ತಾರಾ ಎಂದು ನೋಡಬೇಕಿದೆ.
BBK 11: ಬಿಗ್ ಬಾಸ್ ಮನೆಯಲ್ಲಿ ಕಸದ ಬುಟ್ಟಿಗೆ ಸೇರಿದ ಚೈತ್ರಾ: ಈಕೆ ವೇಸ್ಟ್ ಎಂದ ಸ್ಪರ್ಧಿಗಳು