Monday, 23rd December 2024

Bhagya Lakshmi Serial: ಮರ್ಯಾದೆ ಉಳಿಸಲು ಭಾಗ್ಯ ಹೇಳಿದಂತೆ ಕೇಳಿದ ತಾಂಡವ್: ಬೀದಿ ಪಾಲಾದ ಶ್ರೇಷ್ಠಾ

Bhagyalakshmi Serial (3)

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ (Bhagya Lakshmi Serial) ಮಹತ್ವದ ಘಟ್ಟದತ್ತ ತಲುಪುತ್ತಿದೆ. ಸದ್ಯ ಭಾಗ್ಯಾಳ ಹೊಸ ಅಧ್ಯಾಯ ಶುರುವಾಗಿದ್ದು, ತಾನು ಅನುಭವಿಸಿದ ಕಷ್ಟವನ್ನು ತಾಂಡವ್​ಗೆ ರಿಟರ್ನ್ ಕೊಡಲು ಮುಂದಾಗಿದ್ದಾಳೆ. ಹಿಂದಿನ ಸಂಚಿಕೆಯಲ್ಲಿ ಶ್ರೇಷ್ಠಾ- ತಾಂಡವ್ ಮದುವೆಗೆ ಪೊಲೀಸರನ್ನು ಕರೆಸಿ ಭಾಗ್ಯಾ ಬ್ರೇಕ್ ಹಾಕಿದ್ದಳು. ತಾಳಿ ಕಟ್ಟ ಬೇಕು ಎಂಬಷ್ಟರಲ್ಲಿ ಅಲ್ಲಿಗೆ ಭಾಗ್ಯಾ ಪೊಲೀಸರ ಜೊತೆ ಬಂದು, ಕೋರ್ಟ್ ನಮ್ಮಿಬ್ಬರನ್ನೂ ಸಪರೇಟ್ ಮಾಡುವವರೆಗೂ ನಾನು ನೀನು ಗಂಡ-ಹೆಂಡ್ತೀನೆ. ಒಬ್ಬ ಹೆಂಡ್ತಿ ಇರುವಾಗ್ಲೇ ಇನ್ನೊಬ್ಬಳನ್ನ ಮದುವೆ ಆಗೋದು ಕಾನೂನಿನ ಪ್ರಕಾರ ತಪ್ಪು ಎಂದು ಹೇಳಿದ್ದಳು.

ಆಗ ತಾಂಡವ್‌ ಕೋಪದಿಂದ ಭಾಗ್ಯಾ ಮೇಲೆ ಹಲ್ಲೆ ಮಾಡುತ್ತಾನೆ, ನನ್ನ ಶ್ರೇಷ್ಠಾ ಮದುವೆಯನ್ನು ಯಾರು ತಡೆಯುತ್ತಾರೋ ನೋಡುತ್ತೇನೆ ಎಂದು ಅರಚುತ್ತಾನೆ. ಅಷ್ಟರಲ್ಲಿ ಇನ್ಸ್‌ಪೆಕ್ಟರ್‌, ಹೆಂಡತಿ ಮೇಲೆ ಕೈ ಮಾಡಲು ನಿನಗೆ ಎಷ್ಟು ಧೈರ್ಯವಿರಬೇಕು ಎಂದು ತಾಂಡವ್‌ನನ್ನು ಹಿಡಿದು ಸ್ಟೇಷನ್​ಗೆ ಕರೆದೊಯ್ಯಲು ಪ್ರಯತ್ನಿಸುತ್ತಾರೆ. ಆಗ ತಾಂಡವ್‌ಗೆ ಮರ್ಯಾದೆ ಪ್ರಶ್ನೆ ಎದುರಾಗುತ್ತದೆ. ಒಂದು ವೇಳೆ ನಾನು ಜೈಲಿಗೆ ಹೋದರೆ ನನ್ನ ಕೆಲಸ ಹೋಗುತ್ತದೆ, ಮಾನ ಮರ್ಯಾದೆ ಹೋಗುತ್ತದೆ. ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕು ಎಂದು, ಭಾಗ್ಯಾ ದಯವಿಟ್ಟು ಕಂಪ್ಲೇಂಟ್‌ ವಾಪಸ್‌ ತೆಗೆದುಕೋ, ನಿಮ್ಮ ಅಮ್ಮ ಅರೆಸ್ಟ್‌ ಆದಾಗ ನೀನು ಕೇಳಿದ ಕೂಡಲೇ ನಾನು ಒಪ್ಪಿಕೊಂಡೆ, ಈಗ ದೂರು ವಾಪಸ್‌ ತಗೋ ಎಂದು ಕಾಡಿ-ಬೇಡುತ್ತಾನೆ.

ಆಗ ಭಾಗ್ಯಾ, ನಾನು ದೂರು ವಾಪಸ್‌ ಪಡೆಯುತ್ತೇನೆ, ಆದರೆ ಕೆಲವು ಕಂಡಿಷನ್‌ಗಳಿವೆ, ಅದಕ್ಕೆ ಒಪ್ಪಿದರೆ ಮಾತ್ರ ನೀವು ಹೇಳಿದಂತೆ ಕೇಳುತ್ತೇನೆ ಎನ್ನುತ್ತಾಳೆ. ಅಪ್ಪ ಅಪ್ಪನ ಕಾಲು ತೊಳೆದು ಮನೆಗೆ ಬರಮಾಡಿಕೊಳ್ಳಬೇಕು, ನಾವೆಲ್ಲರೂ ಒಟ್ಟಿಗೆ ಇದೇ ಮನೆಯಲ್ಲಿರಬೇಕು. ಶ್ರೇಷ್ಠಾಳನ್ನು ಕೈ ಹಿಡಿದು ಮನೆಯಿಂದ ಹೊರಗೆ ತಳ್ಳಬೇಕು ಎಂದು ಭಾಗ್ಯಾ, ತಾಂಡವ್‌ ಬಳಿ ಕಂಡಿಷನ್‌ ಮಾಡುತ್ತಾಳೆ. ತಾಂಡವ್‌ಗೆ ಇಷ್ಟವಿಲ್ಲದಿದ್ದರೂ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಭಾಗ್ಯಾ ಹೇಳಿದಂತೆ ಕೇಳುತ್ತಾನೆ.

ಆದರೆ, ತಾಂಡವ್‌ಗೆ ತಾನು ಮಾಡಬಾರದ ಕೆಲಸ ಮಾಡಿದರೂ ಅಹಂಕಾರ ಮಾತ್ರ ಕಡಿಮೆ ಅಗಿಲ್ಲ. ಒಂದಲ್ಲಾ ಒಂದು ದಿನ ನಿಮ್ಮನ್ನೆಲ್ಲಾ ಮನೆಯಿಂದ ಹೊರ ಹಾಕುತ್ತೇನೆ ಎಂದು ಸವಾಲು ಹಾಕುತ್ತಾನೆ. ಮತ್ತೆ ಭಾಗ್ಯಾ ಬಳಿ ಬಂದು ಎಮ್ಮೆ ಎಂದು ಕರೆಯುತ್ತಾನೆ. ನನಗೆ ಭಾಗ್ಯಾ ಎಂಬ ಹೆಸರಿದೆ ಹಾಗೆ ಕರೆದರೆ ಸರಿ, ನೀವು ಅಂದಿದ್ದನ್ನೆಲ್ಲಾ ಕೇಳಿಸಿಕೊಂಡು ಇರಲು ನಾನು ಹಳೆಯ ಭಾಗ್ಯಾ ಅಲ್ಲ, ಹೊಸ ಭಾಗ್ಯಾ. ಇಷ್ಟು ದಿನಗಳು ನನ್ನನು ಕಾಲುಕಸವನ್ನಾಗಿ ನೋಡುತ್ತಿದ್ದೀರಿ, ಆದರೆ ಹೆಂಡತಿ ಸ್ಥಾನ ಏನು ಎಂಬುದನ್ನು ತೋರಿಸಲು ಇಂದು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಎಚ್ಚರಿಸುತ್ತಾಳೆ.

ಅತ್ತ ಶ್ರೇಷ್ಠಾ ಪಾಡು ಯಾರಿಗೂ ಬೇಡದಂತಾಗಿದೆ. ನಿರಾಶೆಯಿಂದ ಮನೆಗೆ ವಾಪಸ್‌ ಬಂದ ಶ್ರೇಷ್ಠಾಗೆ ದೊಡ್ಡ ಆಘಾತ ಉಂಟಾಗಿದೆ. ಅಲ್ಲಿ ತನ್ನ ಲಗ್ಗೇಜ್‌ಗಳೆಲ್ಲಾ ಹೊರಗೆ ಬಿದ್ದಿರುವುದನ್ನು ನೋಡಿ ಶಾಕ್‌ ಆಗುತ್ತಾಳೆ. ಏನು ಇದೆಲ್ಲಾ ಎಂದು ಕೇಳಿದಾಗ ನೀನೇ ತಾನೇ, ನಾನು ಮನೆ ಬಿಟ್ಟು ಹೋಗುತ್ತೇನೆ ದುಡ್ಡು ಕೊಡಿ ಅಂತ ಕೇಳಿದ್ದು, ದುಡ್ಡು ತೆಗೆದುಕೊಂಡು ಇಲ್ಲಿಂದ ಹೋಗು ಎಂದು ಓನರ್‌ ಹೇಳುತ್ತಾರೆ. ದುಡ್ಡು ಕೇಳಿದ್ದೆಯಲ್ಲ ತೆಗೆದುಕೊಂಡು ಹೋಗುತ್ತಿರು ಎಂದು ಶ್ರೇಷ್ಠಾಗೆ ಹೇಳುತ್ತಾರೆ.

ನಾನು ಹೋಗುವುದಿಲ್ಲ ಎಂದಾದರೆ ಏನು ಮಾಡುತ್ತೀರಿ, ನನ್ನ ವಿರುದ್ಧ ಏನು ಸಾಕ್ಷಿ ಇದೆ ಎಂದು ಶ್ರೇಷ್ಠಾ ಕೇಳುತ್ತಾಳೆ. ಪೊಲೀಸರಿಗೆ ಕಂಪ್ಲೇಂಟ್‌ ಕೊಡುವೆ ಎಂದು ಓನರ್‌ ಹೇಳುತ್ತಾರೆ. ಅಷ್ಟರಲ್ಲಿ ಓನರ್‌ ನೆರೆಯವರು, ನಾನು ಸಾಕ್ಷಿ ಇದ್ದೇನೆ ಎಂದು ಅಲ್ಲಿಗೆ ಬರುತ್ತಾರೆ. ಇಬ್ಬರೂ ಶ್ರೇಷ್ಠಾಳನ್ನು ಹೊರಗೆ ತಳ್ಳುತ್ತಾರೆ. ಹೀಗೆ ಶ್ರೇಷ್ಠಾ ಸದ್ಯ ಬೀದಿ ಪಾಲಾಗಿದ್ದಾಳೆ.

BBK 11: ಬಿಗ್ ಬಾಸ್ ಮನೆಯಿಂದ ನಿಜಕ್ಕೂ ಆಚೆ ಬಂದ್ರ ತ್ರಿವಿಕ್ರಮ್?