ಮುಂಬೈ: 2024ರ ವರ್ಷವು ಅಂತ್ಯವಾಗುತ್ತಿದೆ. 2024 ರ ಕೆಲವು ಅತ್ಯಾಕರ್ಷಕ ಭಾರತೀಯ ವೆಬ್ ಸಿರೀಸ್ (Web Series) ಬಿಡುಗಡೆಗೊಂಡು ಹಿಟ್ ಲಿಸ್ಟ್ ಗೆ ಸೇರಿತ್ತು. ಇದೀಗ 2025ರಲ್ಲು ವಿವಿಧ ಸಿನಿಮಾ, ವೆಬ್ ಸಿರೀಸ್ ಬಿಡುಗಡೆಗೆ ತಯಾರಾಗುತ್ತಿವೆ, 2025 ರ ಮೊಸ್ಟ್ ಇಂಟ್ರಸ್ಟಿಂಗ್ ವೆಬ್ ಸಿರೀಸ್ ಮಾಹಿತಿ ಇಲ್ಲಿದೆ.
ದಿ ಫ್ಯಾಮಿಲಿ ಮ್ಯಾನ್:
ದಿ ಫ್ಯಾಮಿಲಿ ಮ್ಯಾನ್ ಸಿರೀಸ್‌ನ 2 ಸೀಸನ್‌ಗಳು ರಿಲೀಸ್ ಆಗಿ ಬಹಳಷ್ಟು ಸಕ್ಸಸ್ ಕಂಡಿತ್ತು. ಇದೀಗ ವೀಕ್ಷಕರು ಮೂರನೇ ಸೀಸನ್ ಯಾವಾಗ ಎಂದು ಕಾತುರದಿಂದ ಕಾಯುತ್ತಿದ್ದಾರೆ. ಮನೋಜ್ ಬಾಜಪೇಯಿ ಪ್ರಮುಖ ಪಾತ್ರದ ದಿ ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದ್ದು ಇದೀಗ ಫ್ಯಾಮಿಲಿ ಮ್ಯಾನ್ʼ ಸೀಸನ್ -3 ಬಗ್ಗೆ ಬಿಗ್ ಅಪ್ಡೇಟ್ ಹೊರ ಬಿದ್ದಿದೆ. ಸಸ್ಪೆನ್ಸ್ ಥ್ರಿಲ್ಲರ್ ನ ಕಥೆಯೊಂದಿಗೆ ದಿ ಫ್ಯಾಮಿಲಿ ಮ್ಯಾನ್ 3 ಬರೋದಂತೂ ಪಕ್ಕಾ ಎನ್ನಲಾಗಿದೆ.
ಪಾತಲ್ ಲೋಕ್ ಪಾರ್ಟ್ 2:
ಅದೇ ರೀತಿ ಅಮೆಜಾನ್ ಪ್ರೈಂನ ಮೊಸ್ಟ್ ಪೇಮಸ್ಸ್ ಕ್ರೈಮ್ ಥ್ರಿಲ್ಲರ್ ವೆಬ್ ಸಿರೀಸ್ ಪಾತಲ್ ಲೋಕ್ ಸೀಸನ್ 2 2025ರಲ್ಲೂ ಹೆಚ್ಚು ಸದ್ದು ಮಾಡಲು ಹೊರಟಿದೆ. ಮೊದಲ ಸಿರೀಸ್ ನೋಡಿದ ಅಭಿಮಾನಿಗಳು ಎರಡನೇ ಸೀಸನ್ ಯಾವಾಗ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದರು. ಇದೀಗ ಸೀಸನ್ 2 ನಿರ್ಮಾಣದ ಹಂತದಲ್ಲಿದೆ. ಪ್ರೈಮ್ ವಿಡಿಯೋ ತನ್ನ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಫಸ್ಟ್ ಪೋಸ್ಟರ್ ಬಿಡುಗಡೆ ಮಾಡಿದ್ದು ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.
ಪ್ರೀತಮ್ ಪೆಡ್ರೋ (Pritam Pedro)
ಬಾಲಿವುಡ್ ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಹಿರಾಣಿ ವೆಬ್ ಸಿರೀಸ್ ಪ್ರೀತಮ್ ಪೆಡ್ರೋ ಓಟಿಟಿಗೆ ಲಗ್ಗೆ ಇಡಲಿದೆ. ವಿಕ್ರಾಂತ್ ಮೆಸ್ಸಿ ಮತ್ತು ಅರ್ಷದ್ ವಾರ್ಸಿ ಅಭಿನಯದ ಥ್ರಿಲ್ಲರ್ ಸಿರೀಸ್ 2025ರಲ್ಲಿ ಬಿಡುಗಡೆಯಾಗಲಿದೆ.
ಸ್ಟಾರ್‌ಡಮ್ (Stardom):
ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ನಿರ್ದೇಶಕನಾಗಿ ಬರಲು ಸಿದ್ದತೆ ನಡೆಸಿರುವ ಸ್ಟಾರ್ ಡಮ್’ (Stardom) ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದ್ದು, ವೆಬ್ ಸಿರೀಸ್‌ನಲ್ಲಿ ಶಾರುಖ್ (Sharukh Khan) ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.
ಮಟ್ಕಾ ಕಿಂಗ್ (Matka King):
ನಟ ವಿಜಯ್ ವರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮಟ್ಕಾ ಕಿಂಗ್ ಕೂಡ ಸದ್ದು ಮಾಡ್ತಾ ಇದ್ದು 2025ರಲ್ಲಿ ತೆರೆ ಮೇಲೆ ಬರಲಿದೆ. ಅಭಿಮಾನಿಗಳು ಈ ವೆಬ್ ಸಿರೀಸ್‌ಗೂ ಕಾತುರರಾಗಿದ್ದಾರೆ.
ಡಬ್ಬಾ ಕಾರ್ಟಲ್ (Dabba Cartal):
ಶಬನಾ ಅಜ್ಮಿ, ಜ್ಯೋತಿಕಾ, ಶಾಲಿನಿ ಪಾಂಡೆ ಮತ್ತು ಗಜರಾವ್ ಸ್ಟಾರ್ ಕಲಾವಿದರು ನಟಿಸಿರುವ ಕ್ರೈಂ ಥ್ರಿಲ್ಲರ್ ವೆಬ್ ಸಿರೀಸ್ ಡಬ್ಬಾ ಕಾರ್ಟಲ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಾ ಇದೆ. 2025ರಲ್ಲಿ ಈ ವೆಬ್ ಸಿರೀಸ್ ಬಿಡುಗಡೆಯಾಗಲಿದೆ.
ಬ್ಲ್ಯಾಕ್ ವಾರಂಟ್ (Black Warrant):
ಅದೇ ರೀತಿ ಬ್ಲ್ಯಾಕ್ ವಾರಂಟ್ ಎಂಬ ಸರಣಿಯನ್ನು ನೆಟ್‌ಫ್ಲಿಕ್ಸ್ ಬಿಡುಗಡೆ ಮಾಡುವುದಾಗಿ ತಿಳಿಸಿದ್ದು ನೆಟ್‌ಫ್ಲಿಕ್ಸ್ ತನ್ನ ಹೊಸ ವೆಬ್ ಸಿರೀಸ್‌ಯ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಜಹಾನ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬ್ಲಾಕ್ ವಾರಂಟ್ ವೆಬ್ ಸರಣಿಯು ಜನವರಿ 10 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಬರಲಿದೆ.
ನೈಟ್ ಏಜೆಂಟ್ ಸೀಸನ್ 2 (Night Agent 2):
ಹಾಲಿವುಡ್ ಸೂಪರ್ ಸ್ಟಾರ್ ಪೀಟರ್ ಸದರ್ಲ್ಯಾಂಡ್ ಅಭಿನಯದ ಥ್ರಿಲ್ಲರ್ ವೆಬ್ ಸಿರೀಸ್ ನೈಟ್ ಏಜೆಂಟ್‌ನ ಪಾರ್ಟ್ 2 ಭಾಗ 23ನೇ ಜನವರಿ 2025ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಯಾಗಲಿದ್ದು ಇದಕ್ಕೂ ಅಭಿಮಾನಿಗಳು ಕಾತುರರಾಗಿದ್ದಾರೆ.
ಈ ಸುದ್ದಿಯನ್ನೂ ಓದಿ: Pushapa 2: ತೆಲುಗು ನಟ ಅಲ್ಲು ಅರ್ಜುನ್ ಮನೆ ಮೇಲೆ ಟೊಮಾಟೊ, ಕಲ್ಲು ತೂರಾಟ!