ಬೆಂಗಳೂರು: 25 ರಿಂದ 40 ವರ್ಷ ವಯಸ್ಸಿನ ಪುರುಷರಲ್ಲಿ ವೀರ್ಯಾಣು (Sperm Health) ಗುಣ ಮಟ್ಟ ಇಳಿಕೆ ಕಂಡು ಬರುತ್ತಿದ್ದು, ಪುರುಷರ ಒಟ್ಟು ವೀರ್ಯಾಣುಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ. ಇಂದು ಪುರುಷರು ಕೂಡ ಫರ್ಟಿಲಿಟಿ ಸಮಸ್ಯೆಯನ್ನು ಅತಿಯಾಗಿ ಎದುರಿಸುತ್ತಿದ್ದು ಇದಕ್ಕೆ ಈಗಿನ ಆಧುನಿಕ ಜೀವನ ಶೈಲಿಯು ಪ್ರಮುಖ ಕಾರಣ ಎನ್ನಬಹುದು. ವ್ಯಾಯಾಮದ ಕೊರತೆ, ಅನಾರೋಗ್ಯಕರ ಜೀವನಶೈಲಿ, ಕಳಪೆ ಆಹಾರ ಪದ್ಧತಿಯಿಂದಾಗಿ ಯುವಕರು ಈ ಸಮಸ್ಯೆಯನ್ನು ಎದುರಿಸುತ್ತಾರೆ.
ಮುಂಬೈನ ನೋವಾ ಐವಿಎಫ್ ಫರ್ಟಿಲಿಟಿಯ ಕ್ಲಿನಿಕಲ್ ನಿರ್ದೇಶಕರಾದ ಡಾ ಸುಲ್ಭಾ ಅರೋರಾ ಅವರು ಪುರುಷರ ವಿರ್ಯಾಣು ಹೆಚ್ಚಿಸಲು ಸಲಹೆ ನೀಡಿದ್ದಾರೆ. ಧೂಮಪಾನ, ಡ್ರಗ್ಸ್, ಇತ್ಯಾದಿ ಬಳಕೆ ವೀರ್ಯ ಗಣತಿ ಕಡಿಮೆ ಮಾಡಲಿದೆ. ಹಾಗಾಗಿ ಕೆಟ್ಟ ಜೀವನಶೈಲಿ ಕೂಡ ವೀರ್ಯ ಕುಸಿತಕ್ಕೆ ಕಾರಣವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇದಕ್ಕೆ ನಮ್ಮ ಈಗಿನ ಜೀವನ ಶೈಲಿಯು ಪ್ರಮುಖ ಕಾರಣ ಎನ್ನಬಹುದು. ಯುವಕ ಯುವತಿಯರು ಕೆಲಸದ ಒತ್ತಡದಿಂದಾಗಿ ಫಾಸ್ಟ್ ಫುಡ್ ಹೊರಗೆ ಸಂಸ್ಕರಿಸಿದ ಆಹಾರಗಳನ್ನು ಹೆಚ್ಚು ಸೇವಿಸುತ್ತಾರೆ. ಇದರಿಂದ ಪುರುಷರಲ್ಲಿ ಬಂಜೆತನದ ಸಮಸ್ಯೆ ಕಾಡುತ್ತದೆ. ಹಾಗಾಗಿ ಆಹಾರ ಮತ್ತು ಜೀವನ ಕ್ರಮದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡರೆ ಈ ಸಮಸ್ಯೆ ನಿವಾರಣೆ ಮಾಡಬಹುದು.
ವೈದ್ಯರ ಸಲಹೆಗಳೇನು?
- ಹಸಿರೆಲೆ ತರಕಾರಿ, ಹಣ್ಣು ಹಂಪಲು ಇತ್ಯಾದಿ ಸೇವನೆ ಮಾಡುವ ಮೂಲಕ ವೀರ್ಯದ ಗುಣಮಟ್ಟ ಹೆಚ್ಚಿಸಬಹುದು.
- ಜೀವಸತ್ವಗಳು, ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರವು ವೀರ್ಯದ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ.
- ಸಂಶೋಧನೆಯ ಮೂಲಕ ತಂದೆಯಾಗ ಬಯಸುವ ಪುರುಷರಿಗೆ ಬಹಳಷ್ಟು ವಿಟಮಿನ್ ಸಿ ಮತ್ತು ಇ, ಸತು ಮತ್ತು ಫೋಲಿಕ್ ಆಮ್ಲದ ಅಗತ್ಯವಿರುತ್ತದೆ. ಇದು ಹೆಚ್ಚಿನ ತರಕಾರಿಗಳು, ಹಣ್ಣು ಮತ್ತು ಧಾನ್ಯಗಳ ಸೇವನೆಯಿಂದ ಲಭಿಸುತ್ತದೆ.
- ಸೋಯಾಬೀನ್, ಮೊಟ್ಟೆ, ಬಾಳೆಹಣ್ಣು, ವಾಲ್ ನಟ್ಸ್ ಇತ್ಯಾದಿ ಆಹಾರ ಉತ್ಪನ್ನಗಳಿಗೆ ಆದ್ಯತೆ ನೀಡಿ
- ದೈನಂದಿನ ವ್ಯಾಯಾಮ, ಯೋಗ, ಧ್ಯಾನ ಇತ್ಯಾದಿ ದಿನಚರಿ ಕೈಗೊಳ್ಳಿ, ತಂಬಾಕು, ಧೂಮಪಾನ ಮತ್ತು ಮಾದಕ ದ್ರವ್ಯ ಸೇವನೆಯಿಂದ ದೂರವಿರಿ.
- ಪ್ರತಿದಿನ 8-9 ಗಂಟೆಗಳ ಸಾಕಷ್ಟು ನಿದ್ರೆ ಆದ್ಯತೆ ನೀಡಿ. ದೀರ್ಘಕಾಲದ ಒತ್ತಡವು ವೀರ್ಯ ಉತ್ಪಾದನೆಯ ಮೇಲೆ ಪ್ರಭಾವ ಬೀರಬಹುದು.
ಈ ಸುದ್ದಿಯನ್ನೂ ಓದಿ: Pralhad Joshi: ಕೇಂದ್ರ ಸರ್ಕಾರದಿಂದ ಗ್ರಾಹಕರಿಗೆ ನೇರವಾಗಿ ಆಹಾರ ಧಾನ್ಯ ವಿತರಣೆ