ಕೆಲವೊಮ್ಮೆ ತುಂಬಾ ಹೊತ್ತಿನ ಸಂಗೀತ ಕಚೇರಿಗಳು, ಪಾರ್ಟಿಗಳು ಮತ್ತು ಪ್ರದರ್ಶನಗಳಲ್ಲಿ ಮೂತ್ರ ವಿಸರ್ಜನೆ ಹೋಗಲು ಸಮಸ್ಯೆಯಾಗುತ್ತದೆ. ಅಂಥವರಿಗಾಗಿ ಮಾರುಕಟ್ಟೆಗಳಲ್ಲಿ 250 ರಿಂದ 600 ರೂ.ಗಳಿಗೆ ಸಿಗುವಂತಹ ವಯಸ್ಕ ಡಯಾಪರ್ ಪ್ಯಾಡ್‍ಗಳು ಲಭ್ಯವಿದೆ. ಆದರೆ ಅದೂ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆ ಎಂಬುದೇ ಅನುಮಾನ. ಹೀಗಿರುವಾಗ ಯುಎಸ್ಎಯ ಕಿಂಬರ್ಲಿ-ಕ್ಲಾರ್ಕ್(Kimberly-Clark) ಬ್ರಾಂಡ್ ತನ್ನ ದುಬಾರಿ ಒಳ ಉಡುಪುಗಳನ್ನು ಬಿಡುಗಡೆ ಮಾಡಿ ಈಗ ಸುದ್ಧಿಯಲ್ಲಿದೆ. ಇದರ ಬೆಲೆ ಬರೋಬ್ಬರಿ 6,000 ರೂ.ಗಿಂತಲೂ ಹೆಚ್ಚು. ಈ ಉತ್ಪನ್ನದ ಜಾಹೀರಾತಿನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(Viral Video) ಆಗುತ್ತಿದೆ.
“ಪ್ರದರ್ಶನದಲ್ಲಿ ಅತ್ಯಂತ ಭಯಾನಕ ಸ್ಥಳವೆಂದರೆ ಮೋಶ್ ಪಿಟ್ ಅಲ್ಲ. ಅದು ಬಾತ್ ರೂಂ – ಯಾಕೆಂದರೆ ಅಲ್ಲಿ ಮೈಲಿ ಉದ್ದದ ಸಾಲುಗಳು, ಜಾರಿ ಬೀಳುವುದು, ಶೌಚಾಲಯಗಳು ಗಲೀಜಿನಿಂದ ತುಂಬಿರುವುದು” ಎಂದು ಬ್ರಾಂಡ್ ಪ್ರಚಾರ ಮಾಡುತ್ತಿದೆ. ಈ ಎಲ್ಲಾ ಸಮಸ್ಯೆಗೆ ಪಿಟ್ ಡೈಪರ್ ಒಂದು ಹೊಸ ಪರಿಹಾರವಾಗಿದೆ “, ಎಂದು ಬ್ರಾಂಡ್ ಹೇಳಿದೆ.
ವೈರಲ್ ಆಗುತ್ತಿರುವ ಜಾಹೀರಾತಿನಲ್ಲಿ ಸಂಗೀತಗಾರ ಬೆನ್ ಕೊಲ್ಲರ್ ಮೂತ್ರ ವಿಸರ್ಜನೆಗಾಗಿ ಮೋಶ್ ಪಿಟ್ ಬಳಿ ಓಡಾಡುತ್ತಿರುವ ದೃಶ್ಯ, ನಂತರ ಅವರು ಬಳಸಿದ ಡೈಪರ್ ಅನ್ನು ವಿಡಿಯೊ ಬಹಿರಂಗಪಡಿಸಿದೆ. ಪಾರ್ಟಿಗೆ ಹೋಗುವವರು ಮತ್ತು ಸಂಗೀತ ಕಚೇರಿ ಪ್ರಿಯರಿಗೆ ಮೀಸಲಾದ ಈ ಡೈಪರ್ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. “ ಇನ್ನು ಮುಂದೆ ತಮ್ಮ ಮೋಶ್ ಪಿಟ್ ಅನ್ನು ಬಿಟ್ಟು ಮಧ್ಯದಲ್ಲಿ ಮೂತ್ರ ವಿಸರ್ಜನೆಗೆ ಹೋಗಬೇಕೆಂದಿಲ್ಲ. ಇದು ತುಂಬಾ ಅದ್ಭುತವಾಗಿದೆ ” ಎಂದು ಕಾಮೆಂಟ್‍ಗಳಲ್ಲಿ ಒಬ್ಬರು ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ:‘ಮಾಟಗಾತಿ’ ವೇಷದಲ್ಲಿ ಪ್ಯಾರಾಗ್ಲೈಡಿಂಗ್ ಮಾಡಿದ ಮಹಿಳೆ; ಪೊರಕೆ ಸ್ಟಿಕ್ ಮೇಲೆ ಕುಳಿತ ವಿಡಿಯೊ ವೈರಲ್
ಸಂಗೀತ ಕಾರ್ಯಕ್ರಮದ ಸಮಯದಲ್ಲಿ ಶೌಚಾಲಯವನ್ನು ಹುಡುಕುತ್ತಾ ದೂರದವೆರೆಗೆ ನಡೆಯುವುದು, ಸಂಗೀತ ಕಚೇರಿಗೆ ಹೋಗುವವರು ಎದುರಿಸುವ ಕೆಲವು ಸಾಮಾನ್ಯ ಸಮಸ್ಯೆಗಳಾಗಿವೆ. ಇತ್ತೀಚೆಗೆ, ಮುಂಬೈನಲ್ಲಿ, ನಗರದಲ್ಲಿ ನಡೆದ ಬ್ರಿಯಾನ್ ಆಡಮ್ಸ್ ಸಂಗೀತ ಕಾರ್ಯಕ್ರಮದಲ್ಲಿ ಮಧುಮೇಹಿಯೊಬ್ಬರು ತಮ್ಮ ಪ್ಯಾಂಟ್‍ನಲ್ಲಿ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ವಾಶ್ ರೂಮ್ ಸೌಲಭ್ಯಗಳ ಕೊರತೆಗಾಗಿ ಜನರು ಸಂಘಟಕರನ್ನು ತರಾಟೆಗೆ ತೆಗೆದುಕೊಂಡಿದ್ದ ಘಟನೆ ವರದಿಯಾಗಿತ್ತು.