ಚೀನಾದ ಗುವಾಂಗ್ಡಾಂಗ್‍ನ ರೆಸ್ಟೋರೆಂಟ್‍ವೊಂದು ತನ್ನ ಮೆನುವಿನಲ್ಲಿ ಆಶ್ಚರ್ಯಕರವಾದ ವಿಷಯವೊಂದನ್ನು ಉಲ್ಲೇಖಿಸಿದ್ದಕ್ಕಾಗಿ ಈಗ ವೈರಲ್(Viral News) ಆಗಿದೆ. ಇದರಲ್ಲಿ ಭಕ್ಷ್ಯಗಳಿಗೆ ನೀಡಲಾಗುವ ಅಸಾಮಾನ್ಯ ಹೆಸರುಗಳಿಂದ ರೆಸ್ಟೋರೆಂಟ್ ಈಗ ಎಲ್ಲರ ಗಮನ ಸೆಳೆದಿದೆ. ಯಾಕೆಂದರೆ ಭಕ್ಷ್ಯಗಳ ಪ್ರಮಾಣವನ್ನು ಶೈಕ್ಷಣಿಕ ಅರ್ಹತೆಯ ರೀತಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರತಿಯೊಂದು ಖಾದ್ಯದ ಪ್ರಮಾಣ ಹಾಗೂ ರೇಟ್ ಬರೆಯುವ ಬದಲು, ಅವರು ಅಂದರೆ ಪ್ರಾಥಮಿಕ ಶಾಲೆ, ಪಿಎಚ್ ಡಿ, ಶಿಕ್ಷಣ ತಜ್ಞ ಎಂದು ಬಳಸಿದ್ದಾರೆ. ಉದಾಹರಣೆಗೆ, 13 ಯುವಾನ್ ಬೆಲೆಯ ಆಹಾರ ಪದಾರ್ಥವನ್ನು “ಪ್ರಾಥಮಿಕ ಶಾಲೆ” ಎಂದು ಮತ್ತು 32 ಯುವಾನ್ ಮೌಲ್ಯದ ತಿಂಡಿಯನ್ನು “ಅಕಾಡೆಮಿಯನ್” ಎಂದು ಬರೆಯಲಾಗಿದೆಯಂತೆ.
ಕ್ಯಾಂಟೋನೀಸ್ ಪಾಕಪದ್ಧತಿಯಲ್ಲಿ ಪರಿಣತಿ ಹೊಂದಿದ್ದಾರೆಂದು ವರದಿಯಾದ ಈ ರೆಸ್ಟೋರೆಂಟ್‍ನಲ್ಲಿ ನೀಡಲಾಗುವ ಭಕ್ಷ್ಯಗಳನ್ನು ಆಯ್ಕೆ ಮಾಡಲು ಆಹಾರ ಪ್ರಿಯರು ಮೆನುವನ್ನು ತೆಗೆದುಕೊಂಡಾಗ, ರೆಸ್ಟೋರೆಂಟ್ ಈ ವಿಚಿತ್ರವಾದ ಮೆನುವನ್ನು ಕಂಡುಕೊಂಡಿದ್ದಾರೆ. ಈ ಮೆನು ಕಾರ್ಡ್‍ನಲ್ಲಿ 32 ಯುವಾನ್‍ವರೆಗೆ ಭಕ್ಷ್ಯಗಳ 12 ರೀತಿಯ ಬೆಲೆಗಳನ್ನು ಪಟ್ಟಿ ಮಾಡಿದೆ.
ಈ ಪಟ್ಟಿಯು ಶಿಶುವಿಹಾರದಿಂದ ಶಿಕ್ಷಣ ತಜ್ಞರವರೆಗೆ ಇದೆ. 29 ಯುವಾನ್‍ಗೆ ಲಭ್ಯವಿರುವ ಖಾದ್ಯವನ್ನು “ಪಿಎಚ್ ಡಿ ಪದವಿ” ಎಂದು ಕರೆಯಲಾಗುತ್ತದೆ. ರೆಸ್ಟೋರೆಂಟ್‍ನಲ್ಲಿನ ಅಗ್ಗದ ಖಾದ್ಯವನ್ನು “ಬೈ ಡಿಂಗ್” ಎಂದು ಲೇಬಲ್ ಮಾಡಲಾಗಿದೆ. ಅಂದರೆ ಚೀನೀ ಭಾಷೆಯಲ್ಲಿ ಅನಕ್ಷರಸ್ಥರು ಎಂದರ್ಥ. ಇದರ ಬೆಲೆ ಕೇವಲ ಐದು ಯುವಾನ್. ಸಂಪೂರ್ಣ ಮೆನು ಸ್ಥಳೀಯ ಭಾಷೆಯಲ್ಲಿ ಮಾತ್ರ ಲಭ್ಯವಿದೆಯಂತೆ.
ಈ ಸುದ್ದಿಯನ್ನೂ ಓದಿ:ಶ್ವಾನಕ್ಕಾಗಿ ವಿಮಾನದಲ್ಲಿ ಫಸ್ಟ್ ಕ್ಲಾಸ್ ಸೀಟ್ ಬಿಟ್ಟುಕೊಡುವಂತೆ ಪಟ್ಟು ಹಿಡಿದ ಭೂಪಾ!
ಈ ವಿಚಿತ್ರವಾದ ಮೆನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕ ನೆಟ್ಟಿಗರ ಗಮನವನ್ನು ಸೆಳೆದಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಇದು ಬಿಸಿ ಚರ್ಚೆಗೆ ಕಾರಣವಾಯಿತು. ಸ್ಥಳೀಯ ಸುದ್ದಿ ಮಾಧ್ಯಮ ಎಸ್‍ಸಿಎಂಪಿ ಈ ಪೋಸ್ಟ್ ಅನ್ನು ಹಂಚಿಕೊಂಡು “ಇದು ಶೈಕ್ಷಣಿಕ ತಾರತಮ್ಯದ ಸ್ಪಷ್ಟ ರೂಪವಾಗಿದೆ. ಇದು ಕಡಿಮೆ ಶಿಕ್ಷಣ ಹೊಂದಿರುವ ಅನೇಕ ವ್ಯಕ್ತಿಗಳನ್ನು ನೋಯಿಸುತ್ತದೆ” ಎಂದು ಕಾಮೆಂಟ್ ಮಾಡಿದೆ.