ಹೈದರಾಬಾದ್: ಪುಷ್ಪಾ 2 (Pushpa 2) ಸಂಧ್ಯಾ ಥಿಯೇಟರ್ ಬಳಿ ನಡೆದ ಕಾಲ್ತುಳಿತದಲ್ಲಿ ಮಹಿಳೆಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಕುಟುಂಬಕ್ಕೆ 20 ಕೋಟಿ ಪರಿಹಾರ ನೀಡುವಂತೆ ತೆಲಂಗಾಣ ಸಚಿವ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ (Komatireddy Venkat Reddy) ಅಲ್ಲು ಅರ್ಜುನ್ (Allu Arjun) ಅವರಿಗೆ ಒತ್ತಾಯಿಸಿದ್ದಾರೆ.
ಭಾನುವಾರ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೋಮಟಿರೆಡ್ಡಿ ನಟನ ಕಾರ್ಯವನ್ನು ಟೀಕಿಸಿದರು. ಯಾವುದೇ ರೀತಿಯ ಮುನ್ನೆಚ್ಚರಿಕಾ ಕ್ರಮ ಹಾಗೂ ಮಾಹಿತಿಯನ್ನು ನೀಡದೆ ಅಲ್ಲು ಅರ್ಜುನ್ ಅವರು ಚಿತ್ರ ಮಂದಿರಕ್ಕೆ ತೆರಳಿದ್ದಾರೆ. ಇದರಿಂದ ಕಾಲ್ತುಳಿತ ಉಂಟಾಗಿದೆ ಎಂದು ಹೇಳಿದ್ದಾರೆ. ಪುಷ್ಪಾ 2 ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಕಲೆಕ್ಷನ್ ಮಾಡಿದೆ. ಅಲ್ಲು ಅರ್ಜುನ್ ಕನಿಷ್ಠ ಕಲೆಕ್ಷನ್‌ನಿಂದ 20 ರೂ. ಕೋಟಿ ತೆಗೆದುಕೊಂಡು ಸಂತ್ರಸ್ತ ಕುಟುಂಬಕ್ಕೆ ಸಹಾಯ ಮಾಡಬಹುದು ಎಂದು ಹೇಳಿದ್ದಾರೆ. ಕಾಲ್ತುಳಿತದ ತೀವ್ರತೆಯ ಬಗ್ಗೆ ಪೊಲೀಸರ ಎಚ್ಚರಿಕೆಯ ಹೊರತಾಗಿಯೂ ಅವರು ಥಿಯೇಟರ್‌ನಲ್ಲಿ ನಟ ಇದ್ದರು. ಇದರಿಂದ ಪ್ರಕರಣ ಮತ್ತಷ್ಟು ಗಂಭೀರವಾಯಿತು ಎಂದು ಅವರು ಹೇಳಿದ್ದಾರೆ.
ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ ಸಚಿವ ರೆಡ್ಡಿ ನಟನನ್ನು ಟೀಕಿಸಿದ್ದಾರೆ. ನಟನಿಗೆ ಸರ್ಕಾರ ಮತ್ತು ಮುಖ್ಯಮಂತ್ರಿ ಬಗ್ಗೆ ಗೌರವ ಇರಬೇಕೆಂದು ಹೇಳಿದ್ದಾರೆ ಹಾಗೂ ಅಲ್ಲು ಅರ್ಜುನ್ ಸಿಎಂ ಬಳಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಸರ್ಕಾರವು ಎಂದಿಗೂ ಸೇಡಿನ ಕ್ರಮವನ್ನು ತೆಗೆದುಕೊಂಡಿಲ್ಲ. , ನಾವು ಚಲನಚಿತ್ರೋದ್ಯಮವನ್ನು ಉತ್ತೇಜಿಸಲು ಬೆನಿಫಿಟ್ ಶೋಗಳಿಗೆ ಮತ್ತು ಟಿಕೆಟ್ ದರವನ್ನು ಹೆಚ್ಚಿಸಲು ಅವಕಾಶ ನೀಡಿದ್ದೇವೆ” ಎಂದು ಅವರು ಹೇಳಿದರು.
ಅಲ್ಲು ಮನೆ ಬಳಿ ಪ್ರತಿಭಟನೆ
ಮಹಿಳೆಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಒಸ್ಮನಿಯಾ ವಿವಿ ಜಂಟಿ ಕ್ರಿಯಾ ಸಮಿತಿ ಎಂದು ಹೇಳಿಕೊಂಡ ಗುಂಪೊಂದು ಭಾನುವಾರ ನಟ ಅಲ್ಲು ಅರ್ಜುನ್ (Allu Arjun) ಅವರ ನಿವಾಸದ ಬಳಿ ದಾಂಧಲೆ ನಡೆಸಿದೆ.
ಹೈದರಾಬಾದ್‌ನ ಪಶ್ಚಿಮ ವಲಯದ ಡಿಸಿಪಿ ಪ್ರಕಾರ, ಕೆಲವು ವ್ಯಕ್ತಿಗಳು ತಮ್ಮ ಕೈಯಲ್ಲಿ ಫಲಕಗಳನ್ನು ಹಿಡಿದುಕೊಂಡು ಜುಬಿಲಿ ಹಿಲ್ಸ್‌ನಲ್ಲಿರುವ ನಟ ಅಲ್ಲು ಅರ್ಜುನ್ ಅವರ ನಿವಾಸಕ್ಕೆ ಭಾನುವಾರ ಸಂಜೆ ಕೆಲ ದುಷ್ಕರ್ಮಿಗಳು ಧಾವಿಸಿ ಘೋಷಣೆ ಕೂಗಲು ಪ್ರಾರಂಭಿಸಿದರು. ಅವರಲ್ಲಿ ಒಬ್ಬ ಕಾಂಪೌಂಡ್ ಏರಿ ಟೊಮೆಟೊಗಳನ್ನು ಎಸೆಯಲು ಪ್ರಾರಂಭಿಸಿದ. ತಮ್ಮನ್ನು ತಾವು ಉಸ್ಮಾನಿಯಾ ವಿಶ್ವವಿದ್ಯಾಲಯದ ಜಂಟಿ ಕ್ರಿಯಾ ಸಮಿತಿಯ (OU-JAC) ಭಾಗವೆಂದು ಹೇಳಿಕೊಂಡಿದ್ದರು. ನಂತರ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಆರು ಜನರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ : Pushapa 2: ತೆಲುಗು ನಟ ಅಲ್ಲು ಅರ್ಜುನ್ ಮನೆ ಮೇಲೆ ಟೊಮಾಟೊ, ಕಲ್ಲು ತೂರಾಟ!