ಬೆಂಗಳೂರು: ಮಾಸ್ಟರ್ ಆನಂದ್(Master Anand) ಪತ್ನಿ ಯಶಸ್ವಿನಿ(Yashaswini) ಮಗಳು ವಂಶಿಕಾಳೊಂದಿಗೆ ನನ್ನಮ್ಮ ಸೂಪರ್ ಸ್ಟಾರ್‌ಗೆ ಬಂದಾಗಿನಿಂದ ಕನ್ನಡದ ಜನರಿಗೆ ಪರಿಚಿತ. ಈ ಶೋ ಗೆದ್ದ ಈ ಜೋಡಿ ನಂತರ ಆಗಾಗ ರೀಲ್ಸ್(reels)ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಆನಂದ್ ಪತ್ನಿ ಯಶಸ್ವಿನಿ ಮತ್ತು ಪುತ್ರಿ ವಂಶಿಕಾ ಕಿರುತೆರೆ ವೀಕ್ಷಕರಿಗೆ ಪರಿಚಯವಾಗಿ ಹತ್ತಿರವಾಗಿಬಿಟ್ಟಿದ್ದು, ಯಾವ ಕಾರ್ಯಕ್ರಮ ನೋಡಿದರೂ ವಂಶಿಕಾ ಮತ್ತು ಯಶಸ್ವಿನಿ ಇರಲೇ ಬೇಕಿತ್ತು. ಈ ಜನಪ್ರಿಯ ಅಮ್ಮ ಮಗಳಿಗೆ ಖಾಸಗಿ ಆನ್‌ಲೈನ್ ಜಾಹೀರಾತುಗಳ ಆಫರ್ ಕೂಡ ಬರುತ್ತದೆ.
ಅಲ್ಲದೇ ಆನಂದ್ ಪತ್ನಿ ಕೂಡ ನನ್ನಮ್ಮ ಸೂಪರ್ ಸ್ಟಾರ್ ಬಳಿಕ ಸಾಕಷ್ಟು ಶೋಗಳಲ್ಲಿ ಕಾಣಿಸಿಕೊಂಡಿದ್ದು, ಯುಟ್ಯೂಬ್ ಚಾನೆಲ್ ಮೂಲಕ ಪೋಡ್ ಕಾಸ್ಟ್ ಕೂಡ ಮಾಡುತ್ತಿದ್ದಾರೆ, ಜೊತೆಗೆ ಮಗಳ ಜೊತೆ ರೀಲ್ಸ್‌ಗಳಲ್ಲಿಯೂ ಹೆಜ್ಜೆ ಹಾಕುತ್ತಿರುವ ಯಶಸ್ವಿನಿ ಸೋಷಿಯಲ್ ಮೀಡಿಯಾದಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದು, ಆಗಾಗ ವಿಭಿನ್ನವಾದ ರೀಲ್ಸ್, ವಿಡಿಯೊ ಹಾಕುವ ಮೂಲಕ ವೀಕ್ಷಕರಿಗೆ ಮನರಂಜನೆ ನೀಡುತ್ತಿರುತ್ತಾರೆ.
ಸದ್ಯ ಸುದೀಪ್ ಹಾಗೂ ರಕ್ಷಿತಾ ನಟನೆಯ ಈ ಟಚ್ ಅಲ್ಲೇ ಹಾಡಿಗೆ ಮಿನಿ ಸ್ಕರ್ಟ್ ಹಾಕಿ ಯಶಸ್ವಿನಿ ಡ್ಯಾನ್ಸ್ ಮಾಡಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಆ ಒಂದು ರೀಲ್ಸ್ ಮಿಲಿಯನ್‌ಗಟ್ಟಲೇ ರೀಚ್ ಆಗಿದ್ದು, ಸಾಕಷ್ಟು ಜನರು ಕಾಮೆಂಟ್ ಗಳನ್ನು ಹಾಕಿದ್ದರು.
ಆದರೆ ಈ ರೀಲ್ಸ್‌ಗೆ ಓರ್ವ ಯುವತಿ ಶೀಘ್ರದಲ್ಲೇ ಮತ್ತೊಂದು ಡಿವೋರ್ಸ್ ಎಂದು ಕಾಮೆಂಟ್ ಮಾಡಿದ್ದು, ಯಶಸ್ವಿನಿಗೆ ಸರಿಯಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಹೌದು ಯಶಸ್ವಿನಿ ರೀಲ್ಸ್‌ಗೆ ಯುವತಿ ‘ಶೀಘ್ರದಲ್ಲಿಯೇ ಇನ್ನೊಂದು ಡಿವೋರ್ಸ್ ಆಗಲಿದೆ’ ಎನ್ನುವ ಅರ್ಥದಲ್ಲಿ ಕಮೆಂಟ್ ಹಾಕಿದ್ದು, ಈವರೆಗೂ ತಮ್ಮ ರೀಲ್ಸ್‌ಗಳ ಕಮೆಂಟ್‌ಗೆ ತಲೆ ಕೆಡಿಸಿಕೊಳ್ಳದ ಯಶಸ್ವಿನಿ, ಈ ಕಮೆಂಟ್‌ಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ. ‘ಅದು ಎಂದಿಗೂ ಸಾಧ್ಯವಿಲ್ಲ ಮೇಡಂ. ನಾನು ನನ್ನ ಮಕ್ಕಳಿಗಿಂತ ನನ್ನ ಗಂಡನನ್ನು ಹೆಚ್ಚು ಪ್ರೀತಿಸುತ್ತೇನೆ’ ಎನ್ನುವ ಮೂಲಕ ಯಶಸ್ವಿನಿ ತಮ್ಮ ಹಾಗೂ ಮಾಸ್ಟರ್ ಆನಂದ್ ದಾಂಪತ್ಯದ ಬಗ್ಗೆ ಮಾತನಾಡುವವರ ಬಾಯಿಗೆ ಬೀಗ ಹಾಕಿದ್ದಾರೆ.
ಇನ್ನು ಈ ಹಿಂದೆ ಯಶಸ್ವಿನಿ ಟ್ರೆಂಡ್‌ನಲ್ಲಿರುವ ‘ಏನಿಲ್ಲ ಏನಿಲ್ಲ’ ಹಾಡಿಗೆ ರೀಲ್ಸ್ ಮಾಡಿದರು. ಏನಿಲ್ಲ ಏನಿಲ್ಲ ಎಂಬ 25 ವರ್ಷಗಳ ಹಳೆಯ ಹಾಡನ್ನು ಉತ್ತರ ಕರ್ನಾಟಕದ ಯುವಕ ಕನಕ ಕೊಟ್ಟೂರು ರೀಲ್ಸ್ ಮಾಡಿ ಅಪ್ಲೋಡ್ ಮಾಡುತ್ತಿದ್ದಂತೆ ಊರಿಗೆ ಊರೇ ಈ ಹಾಡಿಗೆ ರೀಲ್ಸ್ ಮಾಡಲು ಶುರು ಮಾಡಿತ್ತು. ಅಲ್ಲದೆ ಸಿಂಗಲ್ ಆಗಿರುವ ಹುಡುಗ ಹುಡುಗಿಯರ ಕಾಲರ್ ಟ್ಯೂನ್ ಆಗಿದೆ ಈ ಸಾಂಗ್. ರೀಲ್ಸ್ ಮಾಡುವವರು ಈಗ ಈ ಹಾಡಿಗೊಂದು ರೀಲ್ಸ್ ಮಾಡಲೇಬೇಕು ಎಂಬಷ್ಟು ಟ್ರೆಂಡ್ ಆಗಿತ್ತು. ಹಾಗೆಯೇ ಯಶಸ್ವಿನಿಯೂ ಈ ಹಾಡಿನ ರೀಲ್ಸ್ ಮಾಡಿದ್ದರು.
ಈ ಸುದ್ದಿಯನ್ನೂ ಓದಿ: Sunny Leone: ಸನ್ನಿ ಲಿಯೋನ್‌ಗೂ ಸರ್ಕಾರದಿಂದ ಸಿಗ್ತಿದ್ಯಾ ತಿಂಗಳಿಗೆ 1000 ರೂ. !? ಈತನ ಖತರ್ನಾಕ್ ಐಡಿಯಾಗೆ ಅಧಿಕಾರಿಗಳೇ ಶಾಕ್