Tuesday, 24th December 2024

Sai Pallavi: ವಾರಣಾಸಿ ಅನ್ನಪೂರ್ಣ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ನಟಿ ಸಾಯಿ ಪಲ್ಲವಿ

Sai pallvi

ಉತ್ತರ ಪ್ರದೇಶ: ಸೌತ್ ಇಂಡಸ್ಟ್ರಿಯ ಟಾಪ್ ಹೀರೋಯಿನ್ ನಟಿ ಸಾಯಿ ಪಲ್ಲವಿ ಸದ್ಯ ರಾಮಾಯಣ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಈ  ನಡುವೆ  ಸಾಯಿಪಲ್ಲವಿ (Sai Pallavi) ವಾರಾಣಸಿ ಗೆ ತೆರಳಿ ದೇವಿಯ ಆಶೀರ್ವಾದ ಪಡೆದುಕೊಂಡಿರುವ  ಪೋಟೊ ಸೋಶಿಯಲ್ ಮೀಡಿಯಾದಲ್ಲಿ  ವೈರಲ್ ಆಗಿವೆ.

ಉತ್ತರ ಪ್ರದೇಶದ ವಾರಣಾಸಿಯ ಅನ್ನಪೂರ್ಣ ದೇವಿ ದೇವಸ್ಥಾನದಲ್ಲಿ ಆಶೀರ್ವಾದ ಪಡೆಯುತ್ತಿರುವ ಪೋಟೊ ವೈರಲ್ ಆಗಿದ್ದು, ಹದ ನೀಲಿ ಬಣ್ಣದ  ಸಲ್ವಾರ್ ಸೂಟ್ ಮತ್ತು ದುಪಟ್ಟಾ ಧರಿಸಿ ಸಿಂಪಲ್ ಆಗಿ ಸಾಯಿಪಲ್ಲವಿ  ಕಾಣಿಸಿಕೊಂಡಿದ್ದಾರೆ. ಮಾರಿಗೋಲ್ಡ್ ಮಾಲೆಗಳನ್ನು ಧರಿಸಿರುವ ಮೂಲಕ ಪ್ರಾರ್ಥನೆ ಸಲ್ಲಿಸುತ್ತಿರುವ ಪೋಟೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತ ಇದೆ.

ವದಂತಿ ಕುರಿತಾಗಿ ಎಚ್ಚರಿಕೆ ನೀಡಿದ ನಟಿ!                   

ರಾಮಾಯಣದಲ್ಲಿ ಸೀತೆಯಾಗಿ ನಟಿ ಸಾಯಿ ಪಲ್ಲವಿ ಪಾತ್ರಕ್ಕಾಗಿ ಸಸ್ಯಾಹಾರಿಯಾಗಿದ್ದಾರೆ ಎಂಬ ವದಂತಿಗಳು ಮೊನ್ನೆಯಷ್ಟೆ ಹಬ್ಬಿದ್ದವು‌. ರಾಮಾಯಣದಲ್ಲಿ ಸೀತಾಮಾತೆಯ ಪಾತ್ರ ಮಾಡುವ ಸಲುವಾಗಿ ಸಾಯಿ ಪಲ್ಲವಿ ನಾನ್‌ವೆಜ್‌  ಬಿಟ್ಟಿದ್ದಾರೆ ಎಂಬ ಸುದ್ದಿ  ವದಂತಿಗೆ  ಸಾಯಿ ಪಲ್ಲವಿ ಪ್ರತಿಕ್ರಿಯೆ ನೀಡಿದ್ದು ಇಂತಹ ವದಂತಿ ಹಬ್ಬಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ರಾಮಾಯಣ ಚಿತ್ರದಲ್ಲಿ ಬ್ಯುಸಿ!

ಸಾಯಿ ಪಲ್ಲವಿ ನಟಿಸಿದ ಅಮರನ್‌  ಚಿತ್ರ ಬಹಳಷ್ಟು ಸದ್ದು ಮಾಡಿತ್ತು. ಇದೀಗ ಸಾಯಿ ಪಲ್ಲವಿ ಅವರು ನಿತೀಶ್‌ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದ ಶೂಟಿಂಗ್ ನಲ್ಲಿ ಸದ್ಯ ಬ್ಯುಸಿ ಇದ್ದಾರೆ. ಹೈ ಬಜೆಟ್ ಮಹತ್ವಾಕಾಂಕ್ಷೆಯ ಚಿತ್ರ ಇದಾಗಿದ್ದು ರಾಮಾಯಣ ಸೀತೆಯಾಗಿ ಸಾಯಿಪಲ್ಲವಿ, ರಾಮನಾಗಿ ರಣಬೀರ್‌ ಕಪೂರ್‌ ನಟಿಸಲಿದ್ದಾರೆ. ಇವರಿಬ್ಬರ  ಫಸ್ಟ್ ಲುಕ್  ಪೋಟೊ ಬಹಳಷ್ಟು ವೈರಲ್ ಆಗಿತ್ತು. ಎರಡು ಭಾಗಗಳಾಗಿ  ರಾಮಾಯಣ ಚಿತ್ರ ತೆರೆಗೆ ಬರ್ತಿದ್ದು ಮೊದಲ ಭಾಗ 2026ರ ದೀಪಾವಳಿ ಹಬ್ಬಕ್ಕೆ  2ನೇ ಭಾಗ 2027ರ ದೀಪಾವಳಿಗೆ ಬಿಡುಗಡೆ ಆಗುವ ನಿರೀಕ್ಷೆಯಿದೆ.

ಇದನ್ನು ಓದಿ:Viral Video: ‘ಅನಿಮಲ್’ ಸಿನಿಮಾದಿಂದ ಸ್ಫೂರ್ತಿ ಪಡೆದ ಜೋಡಿ ಮದುವೆ ಮಂಟಪದಲ್ಲಿ ಮಾಡಿದ್ದೇನು ನೋಡಿ