Tuesday, 24th December 2024

BBK 11: ಬಿಗ್ ಬಾಸ್ ಮನೆಗೆ ಮತ್ತೆ ಹೋಗ್ತಾರ ಗೋಲ್ಡ್ ಸುರೇಶ್?: ಇಲ್ಲಿದೆ ಖಚಿತ ಮಾಹಿತಿ

Gold Suresh and Kichcha Sudeep

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಅನೇಕ ಅನಿರೀಕ್ಷಿತ ಘಟನೆಗಳು ನಡೆದಿವೆ. 12ನೇ ವಾರದ ಭಾನುವಾರ ಶಾಕಿಂಗ್ ಎಂಬಂತೆ ಫೈನಲ್ ಸ್ಪರ್ಧಿ ಎಂದುಕೊಂಡಿದ್ದ ಶಿಶಿರ್ ಶಾಸ್ತ್ರೀ ಎಲಿಮಿನೇಟ್ ಆಗಿ ಹೊರಬಂದರು. ಇದರ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಘಟನೆ ನಡೆಯಿತು. ಗೋಲ್ಡ್ ಸುರೇಶ್ ದೊಡ್ಮನೆ ತೊರೆದರು. ವೈಯಕ್ತಿಕ ಕಾರಣಗಳಿಂದ ಸುರೇಶ್ ಅವರು ಬಿಗ್ ಬಾಸ್ ಅನ್ನು ಅರ್ಧಕ್ಕೆ ಕೈಬಿಟ್ಟು ಹೊರಬಂದರು.

ಗೋಲ್ಡ್ ಸುರೇಶ್ ಅವರಿಗೆ ಮನೆಯಿಂದ ಒಂದು ತುರ್ತು ಮೆಸೇಜ್ ಬಂದ ಕಾರಣದಿಂದ ಅವರು ಬಿಗ್ ಬಾಸ್​ನಿಂದ ಹೊರಬಂದಿದ್ದಾರೆ. ಗೋಲ್ಡ್ ಸುರೇಶ್​ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ಅವರ ಅವಶ್ಯಕತೆ ಬಿಗ್ ಬಾಸ್​ ಮನೆಯಿಂದ ಅವರ ಕುಟುಂಬದವರಿಗೆ ಜಾಸ್ತಿ ಇದೆ. ಹೆಚ್ಚು ತಡ ಮಾಡದೇ ವಸ್ತುಗಳನ್ನು ಪ್ಯಾಕ್​ ಮಾಡಿಕೊಂಡು ಕೂಡಲೇ ಬಿಗ್ ಬಾಸ್​ ಮನೆಯಿಂದ ಹೊರಗೆ ಬನ್ನಿ ಎಂದು ಬಿಗ್‌ ಬಾಸ್‌ ಸುರೇಶ್​ಗೆ ಸೂಚನೆ ನೀಡಿದರು.

ಆ ಬಳಿಕ ಚಿನ್ನ ಹಾಕಿಕೊಂಡೇ ದೊಡ್ಮನೆಯಿಂದ ಹೊರಟರು. ಆದರೆ, ಬಿಗ್ ಬಾಸ್​ನಿಂದ ಹೊರಬಂದು ಬ್ಯುಸಿನೆಸ್ ವಿಚಾರವಾಗಿ ಹೊರಬಂದೆ ಎಂದು ಕಲರ್ಸ್ ಕನ್ನಡದ ಇನ್​ಸ್ಟಾಗ್ರಾಮ್ ಪೇಜ್​ನಲ್ಲಿ ಲೈವ್ ಬಂದು ಹೇಳಿದರು. ಆದರೆ, ಆ ಸಂದರ್ಭ ಅವರು ಬಿಗ್ ಬಾಸ್ ಮನೆಗೆ ವಾಪಾಸ್ ಬರುತ್ತೇನೆಯೇ? ಎಂಬ ಬಗ್ಗೆ ಯಾವುದೇ ಮಾಹಿತಿ ತಿಳಿಸಿರಲಿಲ್ಲ. ಆದರೀಗ ಈ ಕುರಿತು ಸುದ್ದಿ ಹೊರಬಿದ್ದಿದೆ.

ಭಾನುವಾರ ಸೂಪರ್ ಸಂಡೇ ವಿಥ್ ಸುದೀಪ ಎಪಿಸೋಡ್​ನಲ್ಲಿ ಬಿಗ್ ಬಾಸ್ ವೇದಿಕೆ ಮೇಲೆ ಗೋಲ್ಡ್ ಸುರೇಶ್ ಬಂದಿದ್ದರು. ಈ ಸಂದರ್ಭ ಸುರೇಶ್ ಅವರ ವಿಟಿ ಪ್ಲೇ ಮಾಡಿ ಕೆಲ ಮಾಹಿತಿ ಹಂಚಿಕೊಂಡರು. ಜೊತೆಗೆ ಇದೇ ವೇಳೆ ಸುರೇಶ್ ಅವರು, ಬಿಗ್ ಬಾಸ್ ಮನೆ ಒಳಗೆ ಹೋಗೋಕೆ ಅವಕಾಶ ಕೇಳಿದ್ದಾರೆ. ಇದಕ್ಕೆ ಸುದೀಪ್ ನೋ ಎಂದಿದ್ದಾರೆ. ಚೈತ್ರಾನ ಒಂದು ದಿನ ಹೊರಕ್ಕೆ ಬಿಟ್ಟು ಅಲ್ಲಿ ಅವರ ಕಂಟ್ರೋಲ್ ಮಾಡೋಕೆ ಸಾಧ್ಯವಾಗುತ್ತಿಲ್ಲ. ಇನ್ನು ನೀವು ಇಡೀ ಪ್ರಪಂಚ ನೋಡಿ ಬಂದವರು. ನಿಮ್ಮನ್ನು ಒಳಕ್ಕೆ ಬಿಟ್ಟರೆ ಅಷ್ಟೇ ಎಂದು ಹೇಳಿದ್ದಾರೆ. ಈ ಮೂಲಕ ಸುರೇಶ್ ಪುನಃ ಮನೆಯೊಳಗೆ ತೆರಳುವ ಕನಸು ನುಚ್ಚುನೂರಾಗಿದೆ.

BBK 11: ಬಿಗ್ ಬಾಸ್ ಮನೆಯಿಂದ ನಿಜಕ್ಕೂ ಆಚೆ ಬಂದ್ರ ತ್ರಿವಿಕ್ರಮ್?