Tuesday, 24th December 2024

Dharmasthala: ಮಂಜುನಾಥ ಸ್ವಾಮಿಯ ದರ್ಶನ ಪಡೆದ ಬಾಳೆಕುದ್ರು ಮಠದ ವಾಸುದೇವ ಸದಾಶಿವ ಆಶ್ರಮ ಮಹಾಸ್ವಾಮೀಜಿ

‍ಧರ್ಮಸ್ಥಳ: ಬಾಳೆಕುದ್ರು ಮಠದ (Balekudru Matha) ವಾಸುದೇವ ಸದಾಶಿವ ಆಶ್ರಮ ಮಹಾಸ್ವಾಮೀಜಿಯವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ (Dharmasthala) ಭೇಟಿ ನೀಡಿ ಮಂಜುನಾಥ ಸ್ವಾಮಿಯ (Manjunatha Swamy) ದರ್ಶನ ಪಡೆದರು.

ಕ್ಷೇತ್ರದಲ್ಲಿ ಧನು ಪೂಜೆ (Dhanu pooja) ನಡೆಯುತ್ತಿದ್ದು, ಸ್ವಾಮೀಜಿಯವರು ಡಿ.23ರಂದು ಸಾಯಂಕಾಲ ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನವನ್ನು ಪಡೆದುಕೊಂಡರು.

ಕ್ಷೇತ್ರಕ್ಕೆ ಆಗಮಿಸಿದ ಸ್ವಾಮೀಜಿಯವರನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ (Dr. D. Veerendra Heggade) ಹಾಗೂ ಅವರ ಕುಟುಂಬ ವರ್ಗದವರು ಭಕ್ತಿಪೂರ್ವಕವಾಗಿ ಸ್ವಾಗತಿಸಿ ಬರಮಾಡಿಕೊಂಡರು.

ಬಳಿಕ ಸ್ವಾಮೀಜಿಯವರು ಡಾ. ಡಿ ವಿರೇಂದ್ರ ಹೆಗ್ಗಡೆಯವರನ್ನು ಅವರ ಬೀಡಿನಲ್ಲಿ ಭೇಟಿಯಾಗಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡರು.

ಇದನ್ನೂ ಓದಿ: Sham Benegal: ಹೊಸ ಅಲೆಯ ಸರದಾರ ಶಾಮ್‌ ಬೆನಗಲ್