-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರಿನ್ಸೆಸ್‌ನಂತೆ ಕಾಣುವ ಆಸೆ ಯಾರಿಗಿಲ್ಲ ಹೇಳಿ! ಎಲ್ಲರಿಗೂ ಜೀವನದಲ್ಲೊಮ್ಮೆ ರಾಣಿ-ಯುವರಾಣಿಯಂತೆ ಕಾಣುವಾಸೆ ಇದ್ದೇ ಇರುತ್ತದೆ. ಹೌದು, ಇದೀಗ ಕ್ರಿಸ್‌ಮಸ್ ಸೀಸನ್‌ನಲ್ಲಿ, ನಾನಾ ಬಗೆಯ ಗೌನ್ ಹಾಗೂ ಗೌನ್ ಶೈಲಿಯ ಫ್ರಾಕ್‌ಗಳಿಂದ ಪ್ರಿನ್ಸೆಸ್ ಲುಕ್ (Christmas Princess Look 2024) ಪಡೆಯಬಹುದು.
ಅತ್ಯಾಕರ್ಷಕ ಬಾಲ್ ಗೌನ್
ವೆಸ್ಟರ್ನ್ ಕಲ್ಚರ್‌ನಲ್ಲಿ ಹೆಚ್ಚಾಗಿರುವ ಬಾಲ್ ಗೌನ್ ಉಡುಪುಗಳು ಇಂದು ಸಂಪ್ರದಾಯವನ್ನು ಪಾಲಿಸುವ ರಾಷ್ಟ್ರಗಳಲ್ಲೂ ಕಾಲಿಟ್ಟಿದೆ. ಅಷ್ಟು ಮಾತ್ರವಲ್ಲ, ಟ್ರೆಡಿಷನಲ್ ಹುಡುಗಿಯರು ಧರಿಸುವ ಡಿಸೈನ್‌ಗಳಲ್ಲಿ ಎಲ್ಲೆಡೆ ರಾರಾಜಿಸತೊಡಗಿವೆ. ಲಕ್ಷುರಿ ಫ್ಯಾಬ್ರಿಕ್‌ನಿಂದ ಸಿದ್ಧಪಡಿಸಲಾದ ಈ ಉಡುಪನ್ನು ಹೆಚ್ಚಾಗಿ ಹೈ ಫ್ಯಾಷನ್ ಫಾಲೋ ಮಾಡುವ ಹುಡುಗಿಯರು ಹಾಗೂ ಸೆಲೆಬ್ರಿಟಿಗಳು ಧರಿಸುತ್ತಾರೆ. ಲೇಸ್, ಪರ್ಲ್ಸ್, ಸಿಕ್ವಿನ್ಸ್, ಎಂಬ್ರಾಯ್ಡರಿ, ರಫಲ್ಸ್ ಹೀಗೆ ನಾನಾ ಡಿಸೈನ್‌ಗಳಲ್ಲಿಈ ಗೌನ್‌ಗಳು ಈ ಸೀಸನ್‌ನಲ್ಲಿ ಹೆಚ್ಚು ಟ್ರೆಂಡಿಯಾಗಿವೆ ಎನ್ನುತ್ತಾರೆ ಮಾರಾಟಗಾರರು.
ಎಲ್ಲರ ಅಂದ ಹೆಚ್ಚಿಸುವ ಪ್ರೊಮೊ ಗೌನ್
ಇವು ಅತ್ಯಾಕರ್ಷಕವಾಗಿ ಕಾಣುತ್ತವೆ. ಕೊಂಚ ಪ್ಲಂಪಿಯಾಗಿರುವವರು ಕೂಡ ಧರಿಸಬಹುದು. ನೋಡಲು ಫೇರಿಟೇಲ್ ಲುಕ್ ನೀಡುತ್ತವೆ. ಆದರೆ ಬಾಲ್ ಹಾಗೂ ಪ್ರೊಮೊ ಈ ಎರಡು ಡಿಸೈನ್ ಮಿಕ್ಸ್ ಹೊಂದಿರುವಂತವನ್ನು ಧರಿಸಿದಲ್ಲಿ ಮತ್ತಷ್ಟು ಆಕರ್ಷಕವಾಗಿ ಕಾಣಬಹುದು.
ಕಸ್ಟಮೈಸ್ಡ್ ಪಾರ್ಟಿ ಗೌನ್ಸ್
ಇಂದು ಟ್ರೆಂಡಿಯಾಗಿರುವ ಸಾಕಷ್ಟು ಪಾರ್ಟಿ ಗೌನ್‌ಗಳು ಕಸ್ಟಮೈಸ್ಡ್ ಗೌನ್‌ಗಳಾಗಿವೆ. ಆಯ್ಕೆಗೊಂಡ ಡಿಸೈನ್ಸ್ ಹಾಗೂ ಸ್ಟಿಚ್ಚಿಂಗ್‌ನಲ್ಲಿಇವು ಲಭ್ಯ. ಇವು ಪ್ರೊಮೋ, ಬಾಲ್ ಅಥವಾ ಬ್ರೈಡಲ್, ವೆಡ್ಡಿಂಗ್ ಗೌನ್‌ಗಳಾದರೂ ಆಗಬಹುದು. ಇವೆಲ್ಲದರ ಸಮಾಗಮವೂ ಆಗಬಹುದು. ಟ್ರೆಂಡಿ ಡಿಸೈನ್ಸ್ ಹೊಂದಿರುತ್ತವೆ ಅಷ್ಟೇ ಎನ್ನುತ್ತಾರೆ ಸ್ಟೈಲಿಸ್ಟ್ ಚಂದನ್.
ಬಿಎಂಐಗೆ ತಕ್ಕಂತಿರಲಿ
ಬಾಡಿ ಮಾಸ್ ಇಂಡೆಕ್ಸ್‌ಗೆ ತಕ್ಕಂತೆ ಗೌನ್ ಅಥವಾ ಲಾಂಗ್ ಫ್ರಾಕ್‌ಗಳ ಆಯ್ಕೆ ಮಾಡುವುದು ಅಗತ್ಯ. ಯಾಕೆಂದರೆ, ಇವು ಓವರ್ ಸೈಝ್‌ನದ್ದಾದಲ್ಲಿ ನೋಡಲು ದೊಗಲೆ ಕಾಣಿಸಬಹುದು. ಇನ್ನು ಗಿಡ್ಡವಾದರೂ ಸರಿಯಾಗಿ ಕಾಣದಿರಬಹುದು. ಹಾಗಾಗಿ ನಿಮ್ಮ ಫಿಟ್ಟಿಂಗ್‌ಗೆ ಸೂಟ್ ಆಗುವಂತಹ ಲಾಂಗ್‌ಗೌನ್ ಹಾಗೂ ಫ್ರಾಕ್‌ಗಳನ್ನು ಕೊಳ್ಳುವುದು ಉತ್ತಮ. ಕೊಳ್ಳುವ ಮುನ್ನ, ಆದಷ್ಟೂ ಟ್ರಯಲ್ ನೋಡಿ, ಸರಿ ಹೊಂದುವುದೇ ಎಂಬುದನ್ನು ಗಮನಿಸಿ ಕೊಳ್ಳಬೇಕು. ಇವಿಷ್ಟನ್ನು ಗಮನದಲ್ಲಿಟ್ಟುಕೊಂಡರೆ ಸಾಕು ಎನ್ನುತ್ತಾರೆ ಮಾಡೆಲ್ ದೀಕ್ಷಾ ಹಾಗೂ ಶಾರ್ವರಿ.
ಈ ಸುದ್ದಿಯನ್ನೂ ಓದಿ | Global Saree Fashion: ಜಾಗತಿಕ ಮಟ್ಟದಲ್ಲಿ ವ್ಯಾಪಿಸಿದೆ ಸೀರೆಯ ಹವಾ
ಪ್ರಿನ್ಸೆಸ್ ಲುಕ್ ಬಯಸುವ ಹುಡುಗಿಯರ ಗಮನಕ್ಕೆ
- ಪರ್ಸನಾಲಿಟಿಗೆ ಸೂಟ್ ಆಗುವಂತಹ ಗೌನ್ ಆಯ್ಕೆ ಮಾಡಿ.
- ಆಕ್ಸೆಸರೀಸ್ ಕೂಡ ಲೈಟ್ ಶೇಡ್‌ನದ್ದಾಗಿರಲಿ.
- ಶೂಗಳು ಔಟ್‌ಫಿಟ್‌ಗೆ ಬೆಸ್ಟ್ ಮ್ಯಾಚಿಂಗ್ ಆಗುತ್ತವೆ.
- ಪ್ರಿನ್ಸೆಸ್ ಲುಕ್ಗಾಗಿ ಆದಷ್ಟೂ ವೆಸ್ಟರ್ನ್ ಕಾನ್ಸೆಪ್ಟ್ ಬಳಸಿಕೊಳ್ಳಬೇಕು.
- ನಿಮ್ಮ ಹೈಟ್‌ಗೆ ತಕ್ಕಂತೆ ಗೌನ್‌ಗಳನ್ನು ಆಯ್ಕೆ ಮಾಡಿ.
- ಬ್ಯಾಂಗಲ್ಸ್, ಜುಮ್ಕಾ ಈ ಔಟ್‌ಫಿಟ್‌ಗೆ ಸೂಟ್ ಆಗದು.
- ಗರ್ಲಿಶ್ ಲುಕ್ ಅಗತ್ಯ ಎಂಬುದು ನೆನಪಿರಲಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)