ಸರ್ಕಾರಿ ಬಂಡೆ ಒತ್ತುವರಿ ಮಾಡಿಕೊಂಡಿರುವ ಆರೋಪ
ಚಿಂತಾಮಣಿ: ತಾಲ್ಲೂಕು ಅಂಬಾಜಿದುರ್ಗ ಹೋಬಳಿ ಕಾವಲುಗಾನಹಳ್ಳಿ ಗ್ರಾಮದ ಸರ್ವೆ ನಂ.30ರ ೦-36 ಗುಂಟೆ ಸರ್ಕಾರಿ ಬಂಡೆಯನ್ನು ಗುರ್ತಿಸಿ ದಾರಿ ಮಾಡಿ ಕೊಡಲು ಮತ್ತು ಸ.ನಂ.12ರ ಸರ್ಕಾರಿ ಖರಾಬು ಜಮೀನನ್ನು ಗುರುತಿಸಿ ಒತ್ತುವರಿಯನ್ನು ತೆರವುಗೊಳಿಸಲು ಸ್ಥಳೀಯರು ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಅದರಂತೆ ಸರ್ವೆ ಅಧಿಕಾರಿ ಖಾದರ್ ಸಬ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಮೀನು ಅಳತೆ ಮಾಡಲು ಮುಂದಾದಾಗ ಅಲ್ಲಿನ ಕೆಲ ವ್ಯಕ್ತಿಗಳು ಅಳತೆ ಮಾಡಬೇಕಾದರೆ ಮೊದಲು ನಮಗೆ ನೋಟಿಸ್ ನೀಡಬೇಕು ನೋಟಿಸ್ ನೀಡದೆ ಹೇಗೆ ಅಳತೆ ಮಾಡುತ್ತೀರಾ ಎಂದು ಅಧಿಕಾರಿಗಳ ಮೇಲೆ ತಗಾದೆ ತೆಗೆದರು.
ನಂತರ ಪೊಲೀಸರು ಸರ್ವೇ ಸ್ಥಳಕ್ಕೆ ಬಂದು ಜಟಾಪಟಿ ಮಾಡುತ್ತಿದ್ದ ವ್ಯಕ್ತಿಗಳನ್ನು ತಡೆದು ಸರ್ವೆ ಅಧಿಕಾರಿಗಳಿಗೆ ಸರ್ವೇ ಮಾಡಲು ಅನುಕೂಲ ಮಾಡಿಕೊಟ್ಟರು.
ಈ ವೇಳೆ ಸರ್ವೆ ಅಧಿಕಾರಿ ಖಾದರ್ ರವರು ಮಾತನಾಡಿ, ಸರ್ಕಾರಿ ಬಂಡೆಯನ್ನು ಗುರುತಿಸಿ ದಾರಿ ಮಾಡಿ ಕೊಡಲು ಸರ್ವೆ ಕಾರ್ಯ ಮಾಡಿ ಒತ್ತುವರಿಯನ್ನು ಗುರುತಿಸಿ ಮುಂದಿನ ಪ್ರಸ್ತಾವನೆಗೆ ತಾಲ್ಲೂಕು ದಂಡಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: chikkaballapurnews