ನವದೆಹಲಿ: 2024 ಕೊನೆಗೊಳ್ಳೋದಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ವರ್ಷದ ಬೆಸ್ಟ್ ಮೆಮೊರಿಗಳನ್ನು ಸೋಷಿಯಲ್ ಮೀಡಿಯಾ ಬಳಕೆದಾರರು ನೆನಪಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ವಿಶೇಷವಾದುದು ಅಂದ್ರೆ, ಈ ವರ್ಷ ಹಲವಾರು ಸೆಲೆಬ್ರಿಟಿಗಳು (Who Became Parents in 2024) ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ಮಗುವನ್ನು ಬರ ಮಾಡಿಕೊಂಡಿರುವ ಬೆಸ್ಟ್ ಸೆಲೆಬ್ರಿಟಿ ಕಪಲ್ಸ್ ಲಿಸ್ಟ್ ಇಲ್ಲಿದೆ ನೋಡಿ(2024 Flashback).
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ
ಬ್ಯುಟಿಪುಲ್ ಕಪಲ್ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ಫೆಬ್ರವರಿ 15ರಂದು ಎರಡನೇ ಮಗುವನ್ನು ಬರಮಾಡಿಕೊಂಡರು. ತಮ್ಮ ಎರಡನೇ ಮಗುವಿಗೆ ಅಕಾಯ್ ಎಂದು ಹೆಸರಿಟ್ಟಿದ್ದು 2021ರಲ್ಲಿ ಮೊದಲ ಮಗಳು ವಾಮಿಕಾಳನ್ನ ಬರ ಮಾಡಿಕೊಂಡಿದ್ದರು.
ದೀಪಿಕಾ ಮತ್ತು ರಣವೀರ್
ಬಾಲಿವುಡ್ ನ ಮೋಸ್ಟ್ ಫೇಮಸ್ ಜೋಡಿಗಳಾದ ದೀಪಿಕಾ ಮತ್ತು ರಣವೀರ್ ಸೆಪ್ಟೆಂಬರ್ 8 ರಂದು ಹೆಣ್ಣುಮಗುವನ್ನು ಸ್ವಾಗತಿಸಿದ್ದಾರೆ. ಈ ಜೋಡಿ ಮಗುವಿಗೆ ದುವಾ ಪಡುಕೋಣೆ ಸಿಂಗ್ ಎಂದು ಹೆಸರಿಟ್ಟಿದ್ದು ಸದ್ಯ ಮಗುವಿನ ಪೋಷಣೆಯಲ್ಲಿ ದೀಪಿಕಾ ಬ್ಯುಸಿ ಇದ್ದಾರೆ.
ವರುಣ್ ಧವನ್ ಮತ್ತು ನತಾಶ
ಬಾಲಿವುಡ್ ನಟ ವರುಣ್ ಧವನ್ ಮತ್ತು ನತಾಶ ದಂಪತಿಗಳು ಕೂಡ ಈ ವರ್ಷ ಪೊಷಕರಾದ ಖುಷಿ ಯಲ್ಲಿ ಇದ್ದಾರೆ. ಜೂನ್ 3 ರಂದು ನತಾಶ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಮಗು ಬರಮಾಡಿಕೊಂಡ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಖುಷಿ ವ್ಯಕ್ತಪಡಿಸಿದ್ದರು.
ರಿಚಾ ಚಡ್ಡಾ ಮತ್ತು ಆಲಿ ಫಜಲ್
ರಿಚಾ ಚಡ್ಡಾ ಮತ್ತು ಆಲಿ ಫಜಲ್ ಕೂಡ ಈ ವರ್ಷ ಪೋಷಕರಾದ ಖುಷಿಯಲ್ಲಿ ಇದ್ದು ಜುಲೈ 16 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.ತಮ್ಮ ಮಗಳಿಗೆ ಜುನೇರಾ ಇಡಾ ಫಜಲ್ ಎಂದು ಹೆಸರಿಟ್ಟಿದ್ದಾರೆ.
ಯಾಮಿ ಗೌತಮ್- ಆದಿತ್ಯ ಧರ್
ಯಾಮಿ ಗೌತಮ್ 2021ರಲ್ಲಿ ನಿರ್ದೇಶಕ ಆದಿತ್ಯ ಧರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮೇ 10 ರಂದು ಮಗು ಬರ ಮಾಡಿಕೊಂಡು ಮಗನಿಗೆ ವೇದಾವಿದ್ ಎಂದು ಹೆಸರಿಟ್ಟಿದ್ದಾರೆ.
ವಿಕ್ರಾಂತ್ ಮಸ್ಸಿ-ಶೀತಲ್ ಠಾಕೂರ್ ವರ್ಧಾನ್
ವಿಕ್ರಾಂತ್ ಮಸ್ಸಿ ಮತ್ತು ಶೀತಲ್ ಠಾಕೂರ್ ವರ್ಧಾನ್ ಈ ವರ್ಷದ ಆರಂಭದಲ್ಲಿ ಫೆಬ್ರುವರಿ 7 ರಂದು ಮಗುವನ್ನು ಸ್ವಾಗತಿಸಿದ್ದು ಮಗನಿಗೆ ವರ್ದನ್ ಎಂದು ಹೆಸರಿಟ್ಟಿದ್ದಾರೆ.
ಮಾರ್ಗೊಟ್ ರಾಬಿ-ಟಾಮ್ ಆಕರ್ಲಿ
ಮಾರ್ಗೊಟ್ ರಾಬಿ ಮತ್ತು ಟಾಮ್ ಆಕರ್ಲಿ ತಮ್ಮ ಮೊದಲ ಮಗುವಿಗೆ ಪೋಷಕರಾಗಿದ್ದಾರೆ. ಟಾಮ್ ಅಕ್ಟೋಬರ್ 17 ರಂದು ಗಂಡು ಮಗುವನ್ನು ಸ್ವಾಗತಿಸಿದ್ದಾರೆ.
ಮಸಾಬ ಗುಪ್ತಾ-ಸತ್ಯದೀಪ್ ಮಿಶ್ರಾ
ಮಸಾಬ ಗುಪ್ತಾ ಮತ್ತು ಸತ್ಯದೀಪ್ ಮಿಶ್ರಾ ಅಕ್ಟೋಬರ್‌ನಲ್ಲಿ ಹೆಣ್ಣು ಮಗುವನ್ನು ಆಶೀರ್ವ ದಿಸಿದರು. ಈ ದಂತಿಗಳು ಇನ್‌ಸ್ಟಾಗ್ರಾಮ್ ಪೋಸ್ಟ್ ನೊಂದಿಗೆ ತಮ್ಮ ಹೆಣ್ಣು ಮಗುವಿನ ಆಗಮನಕ್ಕೆ ಖುಷಿ ವ್ಯಕ್ತ ಪಡಿಸಿದ್ದರು.
ಜಸ್ಟಿನ್ ಬೈಬರ್-ಹೇಲಿ ಬೈಬರ್
ಜಸ್ಟಿನ್ ಬೈಬರ್ ಮತ್ತು ಹೇಲಿ ಬೈಬರ್ ತಮ್ಮ ಮಗ ಜ್ಯಾಕ್ ಬ್ಲೂಸ್ Bieber ಆಗಮನವನ್ನು ಆಗಸ್ಟ್ 23 ರಂದು ಘೋಷಣೆ ಮಾಡಿ ಖುಷಿ ವ್ಯಕ್ತ ಪಡಿಸಿದ್ದರು.
ಗಾಲ್ ಗಡೋಟ್ ಜರೋನ್ -ವರ್ಸಾನೊ
ಗಾಲ್ ಗಡೋಟ್ ಜರೋನ್ ಮತ್ತು ವರ್ಸಾನೊ ಈ ವರ್ಷದ ಆರಂಭದಲ್ಲಿ ತಮ್ಮ ನಾಲ್ಕನೇ ಮಗುವನ್ನು ಬರಮಾಡಿಕೊಂಡಿದ್ದರು. ಮಗುವಿಗೆ ಒರಿ ಎಂದು ಹೆಸರಿಟ್ಟು ಹೆಣ್ಣು ಮಗ ಆದ ಬಗ್ಗೆ ಖುಷಿ ವ್ಯಕ್ತ ಪಡಿಸಿದ್ದರು.
ಈ ಸುದ್ದಿಯನ್ನೂ ಓದಿ:IPL 2025: ಗುಜರಾತ್ ಟೈಟಾನ್ಸ್‌ಗೆ ವಡೋದರ 2ನೇ ತವರು ಅಂಗಳ