Wednesday, 25th December 2024

Viral Video: ಹುಟ್ಟುಹಬ್ಬದಂದು ಪಿಸ್ತೂಲ್‌ ಹಿಡಿದು ಹುಚ್ಚಾಟ; ಯುವಕನ ಶೋಕಿಗೆ ಖಾಕಿಯಿಂದ ಭರ್ಜರಿ ʻಗಿಫ್ಟ್‌ʼ

Viral Video

ನೊಯ್ಡಾ: ವ್ಯಕ್ತಿಯೊಬ್ಬ ತನ್ನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಿಸ್ತೂಲ್‌ ತೋರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಘಟನೆ ಉತ್ತರಪ್ರದೇಶದ (Uttar Pradesh) ನೋಯ್ಡಾದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡಿದೆ. ಪಿಸ್ತೂಲ್‌ ತೋರಿಸಿ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಆರೋಪಿಯನ್ನು ಅಶುತೋಷ್ ಗೋಲ್ (28) ಎಂದು ಗುರುತಿಸಲಾಗಿದ್ದು, ಆರು ಸೆಕೆಂಡುಗಳ ವೀಡಿಯೊದಲ್ಲಿ, ಅಶುತೋಷ್ ಗೋಲ್ ಪಿಸ್ತೂಲ್ ಹಿಡಿದು ಕೆಲವು ಜನರೊಂದಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಡಿಸೆಂಬರ್ 21 ರಂದು ಕಚೇರಿಯಲ್ಲಿ ಆಯೋಜಿಸಲಾದ ಹುಟ್ಟುಹಬ್ಬದ ಪಾರ್ಟಿಯ ವಿಡಿಯೋ ಇದಾಗಿದೆ.

ವಿಡಿಯೋ ಆದ ನಂತರ ಸಾಮಾಜಿಕ ಜಾಲತಾಣ ಬಳಕೆದಾರರು ನೋಯ್ಡಾ ಪೊಲೀಸರನ್ನು ಟ್ಯಾಗ್ ಮಾಡಲು ಪ್ರಾರಂಭಿಸಿದಾಗ ವಿಷಯವು ಮುನ್ನೆಲೆಗೆ ಬಂದಿತು. ನೆಟ್ಟಿಗರು ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಆರೋಪಿ ಸೆಕ್ಟರ್ 49 ರ ಶತಾಬ್ದಿ ಎನ್‌ಕ್ಲೇವ್ ನಿವಾಸಿ ಆಗಿದ್ದು, ಅವರ ಶಸ್ತ್ರಾಸ್ತ್ರ ಪರವಾನಗಿ ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗೆ ನೋಯ್ಡಾದ ದಲಿತ ಪ್ರೇರಣಾ ಸ್ಥಳದ ಪ್ರಯಾಣಿಸುತ್ತಿದ್ದಾಗ ಕಾರಿನ ಸನ್‌ರೂಫ್ ಮೂಲಕ ಆಟಿಕೆ ಪಿಸ್ತೂಲು ತೋರಿಸಿ ಜನರನ್ನು ಭಯಬೀತರಾಗುವಂತೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಸೆಕ್ಟರ್ -12 ರ ನಿವಾಸಿ ಅನ್ಶ್ ಸೈನಿ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಮೋಜಿಗಾಗಿ ಆಟಿಕೆ ಪಿಸ್ತೂಲ್ ಅನ್ನು ಬೀಸಿದ್ದ ಹಾಗೂ ಆತನ ಸಂಗಡಿಗರು ಅದನ್ನು ವಿಡಿಯೋ ಮಾಡಿದ್ದರು ಎಂಬುದು ತಿಳಿದು ಬಂದಿದೆ. ಪೊಲೀಸರು ಆತನಿಗೆ 30,000 ರೂ ದಂಡವನ್ನು ವಿಧಿಸಿದರು.

ವಿಡಿಯೋದಲ್ಲಿ ದೆಹಲಿ ನಂಬರ್‌ ಪ್ಲೇಟ್‌ ಇರುವ ಕಾರಿನ ಸನ್‌ರೂಫ್‌ನಲ್ಲಿ ವ್ಯಕ್ತಿಯೊಬ್ಬ ಪಿಸ್ತೂಲು ಬಳಸಿರುವುದು ಕಂಡು ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪ ಪೊಲೀಸ್ ಆಯುಕ್ತೆ ಯಮುನಾ ಪ್ರಸಾದ್  ವೀಡಿಯೊದಲ್ಲಿ ಕಂಡುಬರುವ ಆಟಿಕೆ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ನಡೆಸಿದಾಗ ಯುವಕರು ಮೋಜಿಗಾಗಿ ಹಾಗೂ ಕಿರು ವಿಡಿಯೋ ಮಾಡಲು ಪಿಸ್ತೂಲ್ ಬೀಸುತ್ತಿರುವುದು ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ರೀಲ್‌ಗಳನ್ನು ಮಾಡುವಾಗ ಮತ್ತು ಇತರರ ಮೇಲೆ ತಪ್ಪು ರೀತಿಯಲ್ಲಿ ಪ್ರಭಾವ ಬೀರುವ ಇಂತಹ ದುಷ್ಕರ್ಮಿಗಳ ವಿರುದ್ಧ ನಾವು ಕ್ರಮ ಕೈಗೊಳ್ಳುವುದನ್ನು ಮುಂದುವರಿಸುತ್ತೇವೆ. ಇಂತಹ ಚಟುವಟಿಕೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಇತರರಿಗೂ ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ : Viral Video: ಇಂಡಿಗೋ ವಿಮಾನದಲ್ಲಿ ʼಟೀ ಸರ್ವ್‌ʼ ಮಾಡಿದ ಪ್ರಯಾಣಿಕರು; ವೈರಲ್‌ ಆಯ್ತುಈ ವಿಡಿಯೊ