Wednesday, 25th December 2024

Viral Video: ಬೆಂಕಿಯಲ್ಲಿ ಮಹಿಳೆ ಹೊತ್ತಿ ಉರಿಯುತ್ತಿದ್ದರೂ ಕ್ಯಾರೇ ಎನ್ನದ ಪೊಲೀಸರು! ಭಯಾನಕ ವಿಡಿಯೊ ಭಾರೀ ವೈರಲ್

ನ್ಯೂಯಾರ್ಕ್: ನ್ಯೂಯಾರ್ಕ್‌ ನಗರದ(New York City) ಸುರಂಗ ಮಾರ್ಗದಲ್ಲಿ(Subway) ಮಹಿಳೆಯೊಬ್ಬರು ಸಜೀವ ದಹನ(Burned Alive) ಆಗಿರುವ ಭಯಾನಕ ವಿಡಿಯೊವೊಂದು(Horrific Video) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳೆ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದ್ದರೂ ಅಲ್ಲೇ ಇದ್ದ ಪೊಲೀಸರು ಮಾತ್ರ ಕ್ಯಾರೇ ಎನ್ನತ್ತಿಲ್ಲ. ಈ ಬಗ್ಗೆ ಆಕ್ರೋಶ ಕೇಳಿಬಂದಿದೆ(Viral Video)

ಸಜೀವ ದಹನಕ್ಕೊಳಗಾಗಿ ಕಿರುಚಾಡುತ್ತಿದ್ದ ಮಹಿಳೆಗೆ ಯಾವುದೇ ರೀತಿಯ ಸಹಾಯವನ್ನು ಮಾಡದೆ NYPD ಅಧಿಕಾರಿಗಳು ಸುಮ್ಮನೆ ನಡೆದುಕೊಂಡು ಹೋಗಿದ್ದಾರೆ. ಈಗ ಆ ವಿಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ವಿಡಿಯೊದಲ್ಲಿ ಬೆಂಕಿಯ ಜ್ವಾಲೆಗೆ ಸಿಲುಕಿ ನರಳುತ್ತಿರುವುದು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯದಿಂದ ನಡೆದುಕೊಂಡು ಹೋಗುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ. ವಿಡಿಯೊ ನೋಡಿದ ನೆಟ್ಟಿಗರು ಅಧಿಕಾರಿಯ ವರ್ತನೆ ಮತ್ತು ಪೊಲೀಸರ ಪ್ರತಿಕ್ರಿಯೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ಘಟನೆ ಕುರಿತು ಟಿವಿ ಮತ್ತು ರೇಡಿಯೊ ನಿರೂಪಕ ಜಾನ್ ಕಾರ್ಡಿಲೊ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದಿದ್ದು,“NYPD ವ್ಯಾಪ್ತಿಯಲ್ಲಿ ನಡೆದ ಘಟನೆ ಬಗ್ಗೆ ನನಗೆ ಅಸಹ್ಯಕವಾಗಿದೆ. ಸಜೀವ ದಹನವಾಗುತ್ತಿದ್ದರೂ ನೋಡಿಕೊಂಡು ಸುಮ್ಮನೆ ಹೋಗುವುದಾದರೂ ಹೇಗೆ? ಜನರು ಇದನ್ನು ಅರ್ಥಮಾಡಿಕೊಳ್ಳಬೇಕು. ಪೊಲೀಸರು ಸಹಾಯ ಮಾಡಿದ್ದಾರೆಯೇ? ಬೆಂಕಿಯನ್ನು ನಂದಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡಿದ್ದಾರೆಯೇ? ಎಂಬುದು ಸ್ಪಷ್ಟವಾಗಿಲ್ಲ. ಈ ವಿಡಿಯೊ ಕುರಿತು ಅಧಿಕಾರಿಗಳು ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ” ಎಂದಿದ್ದಾರೆ.

ಅದೇ ಚಿತ್ರವನ್ನು ಹಂಚಿಕೊಂಡಿರುವ ಮತ್ತೋರ್ವ ಎಕ್ಸ್‌ ಬಳಕೆದಾರರು “NYPD ಪೊಲೀಸ್‌ ಅಧಿಕಾರಿಗಳು ಸಾಯುವ ಮಹಿಳೆಯನ್ನು ಉಳಿಸುವುದಕ್ಕಿಂತ ಹೆಚ್ಚಾಗಿ ಪರ್ಪ್ ವಾಕ್‌ನಲ್ಲಿ ತಮ್ಮ ಎಲ್ಲಾ ಸಂಪನ್ಮೂಲಗಳನ್ನು ವ್ಯರ್ಥ ಮಾಡಿದ್ದಾರೆ” ಎಂದು ಬರೆದಿದ್ದಾರೆ. ಆ ಪೋಸ್ಟ್‌ ಗೆ ಪ್ರತಿಕ್ರಿಯಿಸಿರುವ ಒಬ್ಬರು “ನೀವು NYPD ಅಧಿಕಾರಿಯಾಗಿದ್ದರೆ, ಇಂಥ ಪರಿಸ್ಥಿತಿಯಲ್ಲಿ ಏನು ಮಾಡುತ್ತಿದ್ದಿರಿ?” ಎಂದು ಪ್ರಶ್ನಿಸಿದ್ದಾರೆ. ಇನ್ನು ಸೋಶಿಯಲ್‌ ಮೀಡಿಯಾದ ಬಳಕೆದಾರರು ಸಜೀವ ದಹನಕ್ಕೊಳಗಾದ ಮಹಿಳೆಯನ್ನು ಅಮೆಲಿಯಾ ಕಾರ್ಟರ್‌ ಎಂದು ಗುರುತಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Food Poisoning: NCC ಶಿಬಿರದಲ್ಲಿ ವಿಷಾಹಾರ ಸೇವಿಸಿ 75ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ