Wednesday, 25th December 2024

Viral Video: ಜೀವ ಉಳಿಸಿದ ದೇವತೆಯನ್ನು 8 ವರ್ಷದ ನಂತರ ಭೇಟಿಯಾದ ಪೈಲೆಟ್‌! ಈ ಹೃದಯಸ್ಪರ್ಶಿ ವಿಡಿಯೊ ನೋಡಿ

Viral Video

ಜೀವ ಅನ್ನುವುದು ತುಂಬಾ ಅಮೂಲ್ಯವಾದದ್ದು. ಈ ಜೀವವನ್ನು ಉಳಿಸಿದವರನ್ನು ಜೀವನಪರ್ಯಂತ ಮರೆಯಬಾರದು ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಕ್ಯಾಪ್ಟನ್ ಡೇವಿಡ್ ವಿಟ್ಸನ್ 2016 ರಲ್ಲಿ ತೀವ್ರ ಮೈಲೋಯ್ಡ್ ಲ್ಯುಕೇಮಿಯಾದಿಂದ ಬಳಲುತ್ತಿದ್ದರು ಮತ್ತು ಬದುಕುಳಿಯುವ ಅವಕಾಶ ಕೂಡ ಕಡಿಮೆ ಇದ್ದಿತ್ತು. ಇವರ ಅಸ್ಥಿಮಜ್ಜೆ ಕಸಿಗೆ 22 ವರ್ಷದ ಆಲಿ ರೀಮೋಲ್ಡ್ ತಮ್ಮ ಕಾಂಡಕೋಶಗಳನ್ನು ದಾನ ಮಾಡಿ, ಇವರ ಜೀವ ಉಳಿಸಿದ್ದರಂತೆ. ಅಲಿ ಮಾರಣಾಂತಿಕ ಕಾಯಿಲೆಯಿಂದ ಹೊರಬರಲು ಡೇವಿಡ್‌ಗೆ ಸಹಾಯ ಮಾಡಿ ಸುಮಾರು ಎಂಟು ವರ್ಷಗಳು ಕಳೆದಿದ್ದವು. ಈಗ ಮತ್ತೆ ಅವರು ಭೇಟಿಯಾಗಿ ಖುಷಿ ಹಂಚಿಕೊಂಡ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

2016 ರಲ್ಲಿ, ಡೇವಿಡ್ ಮರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದರಂತೆ. ಅವರಿಗೆ ಅಸ್ಥಿ ಮಜ್ಜೆಯ ಕಸಿ ಅಗತ್ಯವಿತ್ತು. ಅವರ ಕುಟುಂಬದಲ್ಲಿ ಯಾರದ್ದೂ ಮ್ಯಾಚ್‍ ಆಗದ ಕಾರಣ, ವೈದ್ಯರು ದಾನಿಗಳ ಅಸ್ಥಿ ಮಜ್ಜೆ ಮ್ಯಾಚ್ ಆಗಬಹುದಾ ಎಂದು ನೋಡಿದಾಗ, ಆಲಿಯ ಪ್ರೊಫೈಲ್ ಹೊಂದಾಣಿಕೆಯಾಗಿತಂತೆ. ದಾನ ಮಾಡಲು ಕೇಳಿದಾಗ, ಅವರು ಒಪ್ಪಿಕೊಂಡರಂತೆ. ಡಿಸೆಂಬರ್ 21, 2016 ರಂದು ಡೇವಿಡ್ ಅವರ ದೇಹಕ್ಕೆ ಕಸಿ ಮಾಡಲಾಯಿತು.ಇದರಿಂದ ಡೇವಿಡ್‍ ಗುಣಮುಖರಾದರಂತೆ.

ಇದಾದ ಬಳಿಕ  ಡೇವಿಡ್ ಮತ್ತು ಆಲಿ ನಡುವೆ ಒಂದು ಬಾಂಧವ್ಯ ಮೂಡಿತು. ಇವರು 2018ರಲ್ಲಿ ಮತ್ತೆ ಭೇಟಿಯಾದರಂತೆ. ಅದು ಅಲ್ಲದೇ, ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರೂ ಸಂಪರ್ಕದಲ್ಲಿದ್ದರಂತೆ. ತನ್ನ ಜೀವ ಉಳಿಸಿದ್ದ ಕೃತಜ್ಞತೆಯ ಸಂಕೇತವಾಗಿ, ಡೇವಿಡ್ ತನ್ನ ವಿಮಾನಯಾನ ಪ್ರಯಾಣದ ಸೌಲಭ್ಯಗಳನ್ನು ಆಲಿಗೆ ನೀಡಿದ್ದಾರೆ.

ಕಳೆದ ವಾರ ಹೂಸ್ಟನ್‍ಗೆ ಹೋಗುವ ವಿಮಾನದಲ್ಲಿ ಪೈಲಟ್ ಆಗಿದ್ದ ಡೇವಿಡ್, ತನ್ನ ವಿಮಾನಯಾನ ಅಪ್ಲಿಕೇಶನ್ ಮೂಲಕ ಆಲಿ ಅಲ್ಲಿ ಇರುವುದು ತಿಳಿದು ಅಲಿಯನ್ನು ಭೇಟಿಯಾಗಲು ಓಡಿ ಬಂದರಂತೆ. ಅಲಿ ಹತ್ತಿದ ವಿಮಾನಕ್ಕೆ ಬಂದ ಡೇವಿಡ್‍ ವಿಮಾನದ ಪಿಎ ವ್ಯವಸ್ಥೆಯ ಮೂಲಕ ತಮ್ಮ ಜೀವ ಉಳಿಸಿದ ಅಲಿಯ ಬಗ್ಗೆ ಪ್ರಯಾಣಿಕರಿಗೆ ತಿಳಿಸಿ ಎಲ್ಲರಿಂದಲೂ ಚಪ್ಪಾಳೆ ಗಿಟ್ಟಿಸಿಕೊಂಡರು.”ನಿಮ್ಮ ಜೀವವನ್ನು ಉಳಿಸಿದ ಯಾರನ್ನಾದರೂ ನೀವು ತಬ್ಬಿಕೊಳ್ಳಲು ಪ್ರತಿದಿನವೂ ಸಾಧ್ಯವಿಲ್ಲ” ಎಂದು ಡೇವಿಡ್ ತಿಳಿಸಿದರು.

ಈ ಸುದ್ದಿಯನ್ನೂ ಓದಿ: ಟ್ರಾಫಿಕ್‌ ರೂಲ್‌ ಬ್ರೇಕ್‌ ಮಾಡಿ ಸಿಕ್ಕಿಬಿದ್ದ ಯುವತಿ- ಈಕೆ ಮಾತು ಕೇಳಿ ಬಿದ್ದು ಬಿದ್ದು ನಕ್ಕ ಪೊಲೀಸರು; ವಿಡಿಯೊ ನೋಡಿ

ಈಗ ಕ್ಯಾನ್ಸರ್ ತಡೆಗಟ್ಟುವ ಸಂಶೋಧಕರಾಗಿರುವ ಆಲಿಗೆ, ಈ ಕ್ಷಣವು ತುಂಬಾ ವಿಶೇಷವಾಗಿತ್ತು. ಡೇವಿಡ್ ಅವರ ಕಸಿಯ ಎಂಟನೇ ವಾರ್ಷಿಕೋತ್ಸವಕ್ಕೆ ಕೆಲವೇ ದಿನಗಳ ಮೊದಲು ಇವರಿಬ್ಬರ ಪುನರ್ಮಿಲನವಾಯಿತು.