Wednesday, 25th December 2024

Jammu and Kashmir: ಸೇನಾ ವಾಹನ ಕಂದಕಕ್ಕೆ ಬಿದ್ದು ಐವರು ಯೋಧರು ಹುತಾತ್ಮ, 12 ಮಂದಿಗೆ ಗಾಯ!

Jammu and Kashmir: 5 soldiers killed, 8 injured as Army vehicle plunges into gorge in J&K's Poonch

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೂಂಚ್‌ನಲ್ಲಿ ಭಾರೀ ಅಪಘಾತ ಸಂಭವಿಸಿದೆ. ಪೂಂಚ್ ಜಿಲ್ಲೆಯ ಮೆಂಧರ್ ಉಪ ವಿಭಾಗದ ಬಲ್ನೋಯಿ ಪ್ರದೇಶದಲ್ಲಿ ಭಾರತೀಯ ಸೇನೆಯ ವಾಹನವು ಆಳವಾದ ಕಂದಕಕ್ಕೆ ಬಿದ್ದಿದೆ. ಇದರ ಪರಿಣಾಮ ಐವರು ಯೋಧರು ಹುತಾತ್ಮರಾಗಿದ್ದು, 12 ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಅಪಘಾತದಲ್ಲಿ ಓರ್ವ ಯೋಧ ಸುರಕ್ಷಿತವಾಗಿದ್ದಾರೆಂದು ವರದಿಯಾಗಿದೆ.

ಪೂಂಚ್ ಜಿಲ್ಲೆಯ ಮೆಂಧರ್ ಉಪವಿಭಾಗದ ಮಾನ್‌ಕೋಟ್ ಸೆಕ್ಟರ್‌ನ ಬಲ್ನೋಯಿ ಪ್ರದೇಶದಲ್ಲಿ ಭಾರತೀಯ ಸೇನೆಯ ವಾಹನವು 300 ಅಡಿ ಆಳದ ಕಮರಿಗೆ ಬಿದ್ದಿದ್ದರಿಂದ ದೊಡ್ಡ ಅಪಘಾತ ಸಂಭವಿಸಿದೆ. ವಾಹನದಲ್ಲಿ ಸೇನಾ ಸಿಬ್ಬಂದಿ ತಮ್ಮ ಪೋಸ್ಟ್ ಕಡೆಗೆ ಹೋಗುತ್ತಿದ್ದಾಗ ದಾರಿಯಲ್ಲಿ ವಾಹನದ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆ. ಈ ವಾಹನದಲ್ಲಿ ಒಟ್ಟು 18 ಯೋಧರಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಪರಿಹಾರ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಗಾಯಾಳುಗಳ ರಕ್ಷಣೆಗೆ ಯತ್ನಿಸುತ್ತಿವೆ. ಮಾನ್‌ಕೋಟ್ ಪೊಲೀಸ್ ಠಾಣೆ ಮತ್ತು ಮೆಂಧರ್ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್‌ಒಸಿ ಬಳಿ ಈ ಘಟನೆ ನಡೆದಿದೆ.

ಕಾಶ್ಮೀರದಲ್ಲಿ ತೀವ್ರ ಚಳಿ

ಪ್ರಸ್ತುತ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಪರೀತ ಚಳಿ ಇದೆ. ಚಳಿಯ ನಡುವೆಯೇ ಇಲ್ಲಿ ಮತ್ತೆ-ಮತ್ತೆ ಅಘೋಷಿತ ವಿದ್ಯುತ್ ಕಡಿತವೂ ಆಗುತ್ತಿದೆ. ಶೀತದಿಂದ ರಕ್ಷಿಸಲು ಆಧುನಿಕ ವಿದ್ಯುತ್ ಚಾಲಿತ ಸಾಧನಗಳು ವಿಫಲವಾಗಿವೆ. ಕಾಶ್ಮೀರ ಈಗ ಮತ್ತೆ ಚಳಿಯಿಂದ ರಕ್ಷಣೆಯ ಸಾಂಪ್ರದಾಯಿಕ ವಿಧಾನಗಳಿಗೆ ಮರಳುತ್ತಿದೆ.

40 ದಿನಗಳ ಅತ್ಯಂತ ಕೆಟ್ಟ ಚಳಿಗಾಲವು ಕಾಶ್ಮೀರದಲ್ಲಿ ಮುಂದುವರೆದಿದೆ. ಶ್ರೀನಗರದಲ್ಲಿ ಇತ್ತೀಚೆಗೆ 33 ವರ್ಷಗಳಲ್ಲೇ ಅತ್ಯಂತ ಹೆಚ್ಚು ಚಳಿ ರಾತ್ರಿಯಾಗಿದ್ದು, ಇಲ್ಲಿ ಕನಿಷ್ಠ ತಾಪಮಾನ ಮೈನಸ್ 8.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಣಿವೆಯ ಇತರ ಸ್ಥಳಗಳಲ್ಲಿ ತಾಪಮಾನವು ಶೂನ್ಯಕ್ಕಿಂತ ಕಡಿಮೆಯಾಗಿದೆ, ಇದರಿಂದಾಗಿ ಅನೇಕ ಪ್ರದೇಶಗಳಲ್ಲಿ ನೀರು ಸರಬರಾಜು ಪೈಪ್‌ಲೈನ್‌ಗಳು ಹೆಪ್ಪುಗಟ್ಟಿವೆ.

ಹೆಚ್ಚುತ್ತಿರುವ ಚಳಿ ಮತ್ತು ಅಘೋಷಿತ ವಿದ್ಯುತ್ ಕಡಿತದಿಂದ ರಸ್ತೆ ಅಪಘಾತಗಳು ಸಹ ನಡೆಯುತ್ತಿವೆ. ಏಕೆಂದರೆ ಅನೇಕ ಬಾರಿ ಚಾಲಕರು ಚಳಿಯಿಂದ ಸ್ಪಷ್ಟ ದೃಷ್ಟಿ ಹೊಂದಲು ಸಾಧ್ಯವಾಗದೆ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ.

ಈ ಸುದ್ದಿಯನ್ನು ಓದಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಬಲ ಭೂಕಂಪನ