Wednesday, 25th December 2024

KAS re-exam: ಡಿ.29ಕ್ಕೆ ಕೆಎಎಸ್‌ ಪೂರ್ವಭಾವಿ ಮರು ಪರೀಕ್ಷೆ; ಅಭ್ಯರ್ಥಿಗಳಿಗೆ ಮಾರ್ಗಸೂಚಿ ಪ್ರಕಟ

KAS re-exam

ಬೆಂಗಳೂರು: ಡಿ.29 ರಂದು ನಡೆಯಲಿರುವ ಕೆಎಎಸ್‌ ಪೂರ್ವಭಾವಿ ಮರು ಮರೀಕ್ಷೆಗೆ ಕರ್ನಾಟಕ ಲೋಕಸೇವಾ ಆಯೋಗ ಅಂತಿಮ ಸಿದ್ಧತೆಯಲ್ಲಿದ್ದು, ಈ ನಡುವೆ ಪರೀಕ್ಷಾರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.

2023-24ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರ್‌ ಗ್ರೂಪ್‌ ʼಎʼ ಮತ್ತು ʼಬಿʼ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಡಿ.29ರಂದು ಭಾನುವಾರ ನಿಗದಿಯಾಗಿರುವ ಪೂರ್ವಭಾವಿ ಮರು ಪರೀಕ್ಷೆಯ ಪ್ರವೇಶ ಪತ್ರವನ್ನು ಕರ್ನಾಟಕ ಲೋಕಸೇವಾ ಆಯೋಗವು ಈಗಾಗಲೇ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಹಾಲ್‌ ಟಿಕೆಟ್‌ (Hall Ticket) ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಡಿ.29ರಂದು ಬೆಳಗ್ಗೆ 10ರಿಂದ 12 ಗಂಟೆವರೆಗೆ ಪತ್ರಿಕೆ-1 ಮತ್ತು ಮಧ್ಯಾಹ್ನ 2ರಿಂದ 4ಗಂಟೆವರೆಗೆ ಪತ್ರಿಕೆ-2ರ ಪರೀಕ್ಷೆ ನಡೆಯಲಿದೆ.

ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಭದ್ರತೆ ಕ್ರಮಗಳನ್ನು ಬಿಗಿಗೊಳಿಸಿದ್ದು, ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಓದಿ, ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.

ಈ ಸುದ್ದಿಯನ್ನೂ ಓದಿ | KAS re-exam: ಡಿ.29ರ ಕೆಎಎಸ್‌ ಪೂರ್ವಭಾವಿ ಮರುಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ

ವಸ್ತ್ರಸಂಹಿತೆ ಸೇರಿ ಕಡ್ಡಾಯವಾಗಿ ಪಾಲಿಸಬೇಕಾದ ಮಾರ್ಗಸೂಚಿಗಳು

  • ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿಗಳು ಕಡ್ಡಾಯವಾಗಿ ಹಾಜರಾಗಬೇಕಾಗಿರುವ ಸಮಯ:- ಅಭ್ಯರ್ಥಿಗಳು ಪರೀಕ್ಷೆ ಆರಂಭವಾಗುವುದಕ್ಕಿಂತ ಎರಡು ಗಂಟೆ ಮುಂಚಿತವಾಗಿ ಪರೀಕ್ಷಾ ಉಪಕೇಂದ್ರದ ಬಳಿ ಕಡ್ಡಾಯವಾಗಿ ಹಾಜರಿರತಕ್ಕದ್ದು. ಪರಿಕ್ಷೆಗೆ ಬೆಳಗಿನ ಅಧಿವೇಶನಕ್ಕೆ ಬೆ 8 ಒಳಗೆ ಹಾಗೂ ಮಧ್ಯಾಹ್ನ 12 ಗಂಟೆಯೊಳಗೆ ಹಾಜರಿರಬೇಕು. ಬೆಳಗಿನ ಅಧಿವೇಶನಕ್ಕೆ 9.50ರ ನಂತರ ಮತ್ತು ಮಧ್ಯಾಹ್ನದ ಅಧಿವೇಶನಕ್ಕೆ 1.50 ರ ನಂತರ ಬರುವ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಗುವುದಿಲ್ಲ
  • ಗುರುತು ಪತ್ತೆ ಹಚ್ಚಲು ಸಾಧ್ಯವಾಗದ ರೀತಿಯಿಲಿ ವಸ್ತ್ರ ಧರಿಸಿ ಪರೀಕ್ಷೆಗೆ ಹಾಜರಾಗುವ ಆಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ, ಫ್ರಿಸ್ಕಿಂಗ್ ನಡೆಸುವ ಸಿಬ್ಬಂದಿಯೊಂದಿಗೆ ಮತ್ತು ಪರೀಕ್ಷಾ ಕೊಠಡಿಯ ಸಂವೀಕ್ಷಕರೊಂದಿಗೆ ಸಹಕರಿಸಿ ತಪಾಸಣೆಗೊಳಗಾಗುವುದು ಕಡ್ಡಾಯವಾಗಿರುತ್ತದೆ. ತಪಾಸಣೆಯನ್ನು ನಿರಾಕರಿಸಿದರೆ ಪರಿಕ್ಷೆಗೆ ಹಾಜರಾಗಲು ಅನುಮತಿಸಲಾಗುವುದಿಲ್ಲ.
  • Metal Water Bottles or Non Transparent Water Bottle ಗಳನ್ನು ಪರೀಕ್ಷಾ ಕೊಠಡಿಯೊಳಗೆ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಕಿವಿ, ಬಾಯಿಯನ್ನು ಮುಚ್ಚಿಕೊಳ್ಳುವಂತೆ ಅಥವಾ ಯಾವುದೇ ರೀತಿಯ Filter ಇರುವ ಫೇಸ್ ಮಾಸ್ಕ್ ಧರಿಸಿ ಪರೀಕ್ಷಾ ಕೊಠಡಿ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.
  • ಅಭ್ಯರ್ಥಿಗಳು ತರುವ ಯಾವುದೇ ವಸ್ತುಗಳು ಬ್ಯಾಗ್, ಫೋನ್ ಇನ್ನಿತರೆ ವೈಯಕ್ತಿಕ ಅಮೂಲ್ಯ ವಸ್ತುಗಳನ್ನು ಪರೀಕ್ಷಾ ಉಪ ಕೇಂದ್ರದಲ್ಲಿ ಭದ್ರವಾಗಿ ಇಡಲು ಯಾವುದೇ ವ್ಯವಸ್ಥೆ ಇರುವುದಿಲ್ಲ. ಹಾಗೂ ಇದಕ್ಕೆ ಪರೀಕ್ಷಾ ಉಪಕೇಂದ್ರದವರು ಜವಾಬ್ದಾರರಾಗುವುದಿಲ್ಲ.
  • ಅಭ್ಯರ್ಥಿಗಳು ಮೊಬೈಲ್ / ಸೆಲ್ಯೂಲಾರ್ ಪೋನ್, ಟ್ಯಾಬ್, ಪೆನ್ ಡ್ರೈವ್, ಬ್ಲೂಟೂತ್ ಡಿವೈಸ್, ಸ್ಮಾರ್ಟ್ ವಾಚ್, ಕ್ಯಾಲ್ಕುಲೇಟರ್ ಮತ್ತು ಇತರೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳು, ಕೈಚೀಲ, ಪರ್ಸ್, ನೋಟುಗಳು, ಚಾರ್ಟ್, ಬಿಡಿ ಹಾಳೆಗಳು ಅಥವಾ ರೆಕಾರ್ಡಿಂಗ್ ವಸ್ತುಗಳನ್ನೂ ಸೇರಿದಂತೆ ಇನ್ನಿತರೆ ಯಾವುದೇ ರೀತಿಯ ಉಪಕರಣಗಳನ್ನು ಅವರ ಬಳಿಯಲಿಟ್ಟುಕೊಂಡಿಲ್ಲದಿರುವ ಬಗ್ಗೆ ಮತ್ತು ಮೈಯಲ್ಲಿ ಧರಿಸದಿರುವ ಬಗ್ಗೆ ಪರಿಶೀಲನೆಗೆ ಒಳಪಡಿಸಲಾಗುವುದು.
  • ಧಾರ್ಮಿಕ ಆಚರಣೆಗೆ ಸಂಬಂಧಿಸಿದ ವಸ್ತುಗಳನ್ನು ಧರಿಸಿರುವ ಅಭ್ಯರ್ಥಿಗಳು ಹಾಗೂ Hearing aid ಉಪಕರಣ ಧರಿಸಿರುವ ಅಭ್ಯರ್ಥಿಗಳು ವೈದ್ಯಕೀಯ ದಾಖಲೆಗಳೊಂದಿಗೆ ಪರೀಕ್ಷೆ ಪ್ರಾರಂಭವಾಗುವ ಎರಡು ಗಂಟೆ ಮುಂಚಿತವಾಗಿ ಸಂಪೂರ್ಣ ವಿಶೇಷ ತಪಾಸಣೆಗೆ ಒಳಪಡಬೇಕಾಗಿರುತ್ತದೆ. ಯಾವುದೇ ರೀತಿಯ ಆಭರಣಗಳನ್ನು (Metal and Non metal) ಧರಿಸುವಂತಿಲ್ಲ. (ಮಂಗಳ ಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ). ಶೂ ಮತ್ತು ಸಾಕ್ಸ್ ಧರಿಸುವುದನ್ನು ನಿಷೇಧಿಸಿದೆ ಹಾಗೂ ಸರಳ ಚಪ್ಪಲಿಗಳನ್ನು ಧರಿಸಿ ಹಾಜರಾಗುವುದು.
  • ಅಭ್ಯರ್ಥಿಗಳು ಕಡ್ಡಾಯವಾಗಿ ತರಬೇಕಾದ ದಾಖಲೆಗಳು:- ಪ್ರವೇಶ ಪತ್ರ, original Identification card, Passport, PAN CARD, Voter ID, Aadhar-U.I.D., Govt. Employer Id, or Driving Licence ಇವುಗಳಲ್ಲಿ ಯಾವುದಾದರೊಂದು ತರತಕ್ಕದ್ದು. ಪಾಸ್‌ಪೋರ್ಟ್/ಸ್ಟ್ಯಾಂಪ್‌ ಅಳತೆಯ 2 ಭಾವಚಿತ್ರಗಳು
  • ಅಭ್ಯರ್ಥಿಯು ಪ್ರವೇಶ ಪತ್ರವನ್ನು ಹಾಗೂ ಒಂದು ಗುರುತಿನ ಚೀಟಿಯನ್ನು ಹಾಜರುಪಡಿಸದಿದ್ದಲಿ ಪರೀಕ್ಷೆಗೆ ಅನುಮತಿಸಲಾಗುವುದಿಲ್ಲ (ನಕಲು ಪ್ರತಿ ಅಥವಾ ಸ್ಕ್ಯಾನ್ ಮಾಡಿರುವ
    ಪ್ರತಿಯನ್ನು ಅನುಮತಿಸಲಾಗುವುದಿಲ್ಲ). ಇನ್ನು ಅಭ್ಯರ್ಥಿಗಳು ಕಪ್ಪು ಬಾಲ್ ಪಾಯಿಂಟ್ ಪೆನ್ನಿನಿಂದ ಮಾತ್ರ ಪರೀಕ್ಷೆ ಬರೆಯಬೇಕು.
  • ಪ್ರವೇಶ ಪತ್ರದಲ್ಲಿ ಭಾವಚಿತ್ರ ಸ್ಪಷ್ಟವಾಗಿಲ್ಲದಿದ್ದಲಲಿ ಅಥವಾ ಮುದ್ರಿತವಾಗದಿದ್ದಲ್ಲಿ ಪರೀಕ್ಷಾ ದಿನದಂದು ಅಭ್ಯರ್ಥಿಯು ಸಿಂಧುವಾದ ತನ್ನ ಗುರುತಿನ ಚೀಟಿಯ ಪ್ರತಿ, ಪ್ರವೇಶಪತ್ರದ ಪ್ರತಿ ಹಾಗೂ ಪಾಸ್‌ಪೋರ್ಟ್/ಸ್ಟ್ಯಾಂಪ್‌ ಅಳತೆಯ 2 ಭಾವಚಿತ್ರಗಳನ್ನು ಕಡ್ಡಾಯವಾಗಿ ಸಂವೀಕ್ಷಕರಿಗೆ ನೀಡಿ, ಒಂದು ಭಾವಚಿತ್ರವನ್ನು ನಾಮಿನಲ್ ರೋಲ್‌ನಲ್ಲಿನ ನಿಗದಿತ ಅಂಕಣದಲ್ಲಿ ಮತ್ತು ಇನ್ನೊಂದು ಭಾವಚಿತ್ರವನ್ನು ಈ ಸಂಬಂಧ ಸಲ್ಲಿಸುವ ಮುಚ್ಚಳಿಕೆ ಪತ್ರದಲ್ಲಿ ಅಂಟಿಸಿ ದೃಢೀಕರಿಸಬೇಕು.

ಈ ಸುದ್ದಿಯನ್ನೂ ಓದಿ | Govt employees: ಡಿ.27ಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ, ಖಜಾಂಚಿ ಸ್ಥಾನಕ್ಕೆ ಚುನಾವಣೆ; ಸಿ.ಎಸ್‌.ಷಡಾಕ್ಷರಿ ಬಣದ ಪ್ರಣಾಳಿಕೆ ಬಿಡುಗಡೆ