ನವದೆಹಲಿ: ಉತ್ತರ ಪ್ರದೇಶದ ಆಗ್ರಾದಲ್ಲಿ ಬೆಚ್ಚಿ ಬೀಳಿಸುವ ವಿಡಿಯೊ ವೈರಲ್ (Viral Video) ಆಗಿದೆ. ಇಬ್ಬರು ಯುವಕರನ್ನು ಬೈಕ್ ಸಮೇತ ಟ್ರಕ್ವೊಂದು ಹೆದ್ದಾರಿಯಲ್ಲಿ ಸುಮಾರು 300 ಮೀಟರ್ ಎಳೆದೊಯ್ದಿರುವ ಭಯಾನಕ ಘಟನೆ ವಿಡಿಯೊದಲ್ಲಿ ಸೆರೆಯಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೋಡುಗರು ಶಾಕ್ ಆಗಿದ್ದಾರೆ.
ಓವರ್ ಟೇಕ್ ಮಾಡುವಾಗ ಬೈಕ್ಗೆ ಟ್ರಕ್ ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದಿದ್ದ ರಭಸಕ್ಕೆ ಇಬ್ಬರು ಬೈಕ್ ಸವಾರರು ಸಾವಿಗೀಡಾಗಿರಬಹುದೆಂದು ಭಾವಿಸಿ ಚಾಲಕ ಸ್ಥಳೀಯರಿಗೆ ಸಿಗದೆ ಶರವೇಗದಲ್ಲಿ ಟ್ರಕ್ ಅನ್ನು ಚಲಾಯಿಸಿದ್ದರು. ಆದರೆ, ಅದೃಷ್ಟವಶಾತ್ ಟ್ರಕ್ನ ಮುಂದಿನ ಬಂಪರ್ಗೆ ಬೈಕ್ ಸಿಲುಕಿಕೊಂಡಿತ್ತು ಹಾಗೂ ಇಬ್ಬರು ಸವಾರರು ಹಾಗೆಯೇ ಇದ್ದರು.
ಬಂಪರ್ಗೆ ಸಿಕ್ಕಿ ಹಾಕಿಕೊಂಡಿದ್ದ ಇಬ್ಬರು ಯುವಕರನ್ನು ಟ್ರಕ್ ಸುಮಾರು 300 ಮೀಟರ್ ಎಳೆದುಕೊಂಡು ಹೋಗಿತ್ತು. ಈ ವೇಳೆ ಟ್ರಕ್ ಇಬ್ಬರನ್ನು ರಸ್ತೆಯ ಮೇಲೆ ಉಜ್ಜಿಕೊಂಡು ಸಾಗುತ್ತಿತ್ತು. ಟ್ರಕ್ ಅನ್ನು ನಿಲ್ಲಿಸುವಂತೆ ಯುವಕರು ಪರಿಪರಿಯಾಗಿ ಕೂಗಿದರೂ ಚಾಲಕ ನಿಲ್ಲಿಸಲಿಲ್ಲ. ಅಲ್ಲದೆ ಟ್ರಕ್ ಜೊತೆ ಬರುತ್ತಿದ್ದ ಕೆಲ ಬೈಕ್ ಸವಾರರು ಟ್ರಕ್ ಅನ್ನು ನಿಲ್ಲಿಸುವಂತೆ ಮನವಿ ಮಾಡುತ್ತಿದ್ದರು. ಆದರೂ ಚಾಲಕ ಕಿವಿ ಕೊಡದೆ ಲಾರಿಯನ್ನು ಚಲಾಯಿಸಿದ್ದರು.
आगरा में एक ट्रक ड्राइवर ने बाइक सवार युवक को पहले टक्कर मारी और भागने की कोशिश करने लगा,
— Priya singh (@priyarajputlive) December 23, 2024
भागते हुए ट्रक में मोटर साइकिल और युवक दोनों फँस गए।
दोनों युवकों को ट्रक वाला कई मीटर तक घसीटता हुआ ले गया
VC-@madanjournalist pic.twitter.com/h8gNu5KheT
ಆದರೆ, 300 ಮೀಟರ್ ಸಾಗಿದ ಬಳಿಕ ಚಾಲಕ ಟ್ರಕ್ ಅನ್ನು ನಿಲ್ಲಿಸಿದ್ದಾನೆ. ಈ ವೇಳೆ ಟ್ರಕ್ ಚಾಲಕನನ್ನು ಸ್ಥಳೀಯರು ಬಲವಾಗಿ ಥಳಿಸಿದ್ದಾರೆ. ಟ್ರಕ್ ನಿಂತ ಬಳಿಕ ಬಂಪರ್ನಲ್ಲಿ ಸಿಲುಕಿದ್ದ ಯುವಕರಿಬ್ಬರನ್ನು ಹೊರತೆಗೆಯಲಾಯಿತು. ಈ ವೇಳೆ ಅವರು ತೀವ್ರವಾಗಿ ಗಾಯಗೊಂಡಿದ್ದರು. ಬಹಳ ದೂರದಿಂದ ಎಳೆದೊಯ್ದ ಕಾರಣ ಇಬ್ಬರ ದೇಹವೂ ರಕ್ತದಲ್ಲಿ ಮುಳುಗಿತ್ತು. ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರು ಚಾಲಕನ ವಿರುದ್ದ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಭಾನುವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಆಗ್ರಾದ ಛಟ್ಟಾ ಪೊಲೀಸ್ ಠಾಣೆಯ ಎಸ್ಪಿ ತಿಳಿಸಿದ್ದಾರೆ. ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ಇಂಡಿಗೋ ವಿಮಾನದಲ್ಲಿ ʼಟೀ ಸರ್ವ್ʼ ಮಾಡಿದ ಪ್ರಯಾಣಿಕರು; ವೈರಲ್ ಆಯ್ತುಈ ವಿಡಿಯೊ