ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಶತಕದತ್ತ ದಾಪುಗಾಲಿಡುತ್ತಿದೆ. ಸದ್ಯ ಮನೆಯಲ್ಲಿ ಕೇವಲ 10 ಮಂದಿ ಇದ್ದಾರಷ್ಟೆ. ಹೀಗಾಗಿ ಟಾಸ್ಕ್ಗಳು ಕೂಡ ಕಠಿಣವಾಗುತ್ತಾ ಸಾಗಿದೆ. ಇದೀಗ ದೊಡ್ಮನೆ ರೆಸಾರ್ಟ್ ಆಗಿ ಮಾರ್ಪಾಡಾಗಿದೆ. ಇದಕ್ಕಾಗಿ ಮನೆಯ ಸದಸ್ಯರನ್ನು ಎರಡು ಗುಂಪುಗಳಾಗಿ ವಿಂಗಡನೆ ಮಾಡಲಾಗಿದೆ. ಪ್ರತಿಬಾರಿಯಂತೆ ಈ ಬಾರಿ ಕೂಡ ಎರಡು ಗುಂಪುಗಳ ನಡುವೆ ಸಾಕಷ್ಟು ಜಗಳ ನಡೆದಿದೆ. ಅದರಲ್ಲೂ ಚೈತ್ರಾ ಕುಂದಾಪುರ ಹಾಗೂ ರಜತ್ ಕಿಶನ್ ನಡುವೆ ಸೇಡಿನ ಸಮರ ಶುರುವಾದಂತಿದೆ.
ಸದ್ಯ ಎರಡು ಗುಂಪುಗಳಾಗಿರುವ ಬಿಗ್ ಬಾಸ್ ಮನೆಯ ಒಂದು ತಂಡದಲ್ಲಿ ಚೈತ್ರಾ ಕುಂದಾಪುರ, ಐಶ್ವರ್ಯಾ ಸಿಂಧೋಗಿ, ಮಂಜು, ಗೌತಮಿ ಹಾಗೂ ಹನುಮಂತ ಇದ್ದರೆ ಮತ್ತೊಂದು ಟೀಮ್ನಲ್ಲಿ ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್, ರಜತ್ ಹಾಗೂ ಮೋಕ್ಷಿತಾ ಇದ್ದಾರೆ. ಇದರಲ್ಲಿ ತ್ರಿವಿಕ್ರಮ್ ತಂಡ ಬಿಗ್ ಉಳಿದ ಸದಸ್ಯರ ಸೇವೆ ಮಾಡಬೇಕು. ಅಂದರೆ ಮಂಜು ಟೀಮ್ನ ಅತಿಥಿಗಳಿಗೆ ಬೇಕಾದ ಎಲ್ಲ ಸೌಕರ್ಯ ಮಾಡಿಕೊಡಬೇಕು.
ಈ ಅವಕಾಶವನ್ನು ಅದ್ಭುತವಾಗಿ ಬಳಸಿದ ಚೈತ್ರಾ ಕುಂದಾಪುರ ಅವರು ಡೈನಿಂಗ್ ಟೇಬಲ್ ಮೇಲೆ ಕುಳಿತುಕೊಂಡು ಬೇಕೆಂದೇ ಲೈಮ್ ಸೋಡವನ್ನು ಚೆಲ್ಲಿದ್ದಾರೆ. ಜೊತೆಗೆ ರಜತ್ ಅವರನ್ನು ಕರೆದು ಲೈಮ್ ಸೋಡ ಚೆಲ್ಲುತ್ತಿದೆ ಬಂದು ಒರೆಸಿ ಎಂದು ಹೇಳಿದ್ದಾರೆ. ಅಲ್ಲಿಗೆ ನಿಲ್ಲಿಸದ ಚೈತ್ರಾ ರಜತ್ಗೆ ಬ್ರೆಡ್ ಜಾಮ್ ಹಚ್ಚುವಂತೆ ಹೇಳಿದ್ದಾರೆ. ಆಗ ಒಂದು ಬ್ರೆಡ್ ಜಾಮ್ ಹಾಕೋಕೆ ಬರಲ್ವಾ ಎಂದು ಅದೇ ಬ್ರೆಡ್ ಜಾಮ್ನಿಂದ ರಜತ್ ಮುಖಕ್ಕೆ ತಟ್ಟಿದ್ದಾರೆ. ಹೀಗೆ ಚೈತ್ರಾ ಅವರು ರಜತ್ ಬೆವರಿಳಿಸಿ ಸೇಡು ತೀರಿಸಿಕೊಂಡಂತಿದೆ.
ಕಣ್ಣೀರಿಟ್ಟ ಚೈತ್ರಾ ಕುಂದಾಪುರ:
ಚೈತ್ರಾ ಕುಂದಾಪುರ ಹಾಗೂ ರಜತ್ ಕಿಚನ್ ಅಲ್ಲಿ ಕ್ಲೀನ್ ಮಾಡುತ್ತಿರುತ್ತಾರೆ. ಆಗ ಚೈತ್ರಾ ಬಂದು ಗಲೀಜು ಮಾಡ್ತಿದ್ದಾಳೆ ಎಂದು ರಜತ್ ಹೇಳಿದ್ದಾರೆ. ಆಗ ಚೈತ್ರಾ ಅವರು ರಜತ್ ಮೈಗೆ ಸೋಪಿನ ನೊರೆಯನ್ನು ಅಂಟಿಸಿದ್ದಾರೆ. ಇದರಿಂದ ಕೋಪಿಸಿಕೊಳ್ಳುವ ರಜತ್, ಹಿಂದಿನ ವಾರದ ವಿಚಾರವನ್ನೆಲ್ಲ ಹೇಳಿ ರೇಗಿಸಿದ್ದಾರೆ. ಮೊನ್ನೆ ಯಾರಿಗೂ ಇಲ್ಲಿ ಚಳಿ ಜ್ವರ ಬಂದಿತ್ತು ಅಲ್ವಾ ಎಂದು ಚೈತ್ರಾಳಿಗೆ ಜ್ವರ ಬಂದ ವಿಚಾರದ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಇದಕ್ಕೆ ಬೇಸರಗೊಂಡ ಚೈತ್ರಾ, ಯಾವ ಆರೋಪಕ್ಕೆ ನನ್ನನ್ನು ಈ ರೀತಿ ಮಾಡುತ್ತಿದ್ದಾರೆ? ನಾನು ನನ್ನನ್ನು ಸಾಬೀತು ಮಾಡಿಕೊಳ್ಳದೇ ಹೋದರೆ, ಬಲಿ ಕಾ ಬಕ್ರಾ ರೀತಿಯಲ್ಲಿ ಎಲ್ಲರೂ ಮಾಡಿರುವ ಆರೋಪಗಳನ್ನು ಸಾಬೀತು ಅಂತಾ ನಾನು ತಲೆಮೇಲೆ ತೆಗೆದುಕೊಳ್ಳಬೇಕಾಗುತ್ತದೆ. ಸರಿ ಇದೀನಾ ನಾನು? ನಾನು ನಾಟಕ ಮಾಡುತ್ತಿದ್ದೀನಾ? ಇಲ್ಲಿ ಆಡಿರುವ ಒಂದೊಂದು ಮಾತುಗಳಿಗೂ, ವ್ಯಂಗ್ಯಗಳಿಗೂ ಸಮಯ ಬರಲಿದೆ ಎಂದು ಕಣ್ಣೀರಿಟ್ಟಿದ್ದಾರೆ.
BBK 11: ಭರ್ಜರಿ ಕಮ್ಬ್ಯಾಕ್ ಮಾಡಿದ ಉಗ್ರಂ ಮಂಜು: ಬಿಗ್ ಬಾಸ್ ಮನೆ ಫುಲ್ ಶೇಕ್